ನಮ್ಮನ್ನು ಖರೀದಿಸಲು ನಾವು ದನ, ಕುರಿ, ಕೋಳಿ ಅಲ್ಲ: ಬಿ. ಸಿ. ಪಾಟೀಲ್

ಖರೀದಿ ಮಾಡೋಕೆ ನಾವು ಕುರಿ, ಕೋಳಿ, ದನವಲ್ಲ ಎಂದು ಅನರ್ಹ ಶಾಸಕ ಬಿ. ಸಿ. ಪಾಟೀಕ್ ಹೇಳಿದ್ದಾರೆ. ಮಾರಾಟ, ಖರೀದಿ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಮಾತ್ರ ಗೊತ್ತೇ ಹೊರತು ನಮಗೇನೂ ತಿಳಿದಿಲ್ಲ ಎಂದು ಅವರು ವ್ಯಂಗ್ಯ ಮಾಡಿದ್ದಾರೆ.

We are not chicken, sheep or cow to purchase says bc patil

ಮೈಸೂರು(ಅ.22): ಮಾರಾಟ, ಖರೀದಿ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಮಾತ್ರ ಗೊತ್ತೇ ಹೊರತು ನಮಗೇನೂ ತಿಳಿದಿಲ್ಲ. ನಮ್ಮನ್ನು ಖರೀದಿಸಲು ನಾವ್ಯಾರೂ ದನ, ಕುರಿ, ಕೋಳಿಗಳಲ್ಲ ಎಂಬುದನ್ನು ಅವರು ಅರಿತುಕೊಳ್ಳಬೇಕು ಎಂದು ಅನರ್ಹ ಶಾಸಕ ಬಿ.ಸಿ.ಪಾಟೀಲ್‌ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಆಡುವ ಮಾತು ಅವರ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಸಿದ್ದರಾಮಯ್ಯ ಸಮನ್ವಯ ಸಮಿತಿ ಅಧ್ಯಕ್ಷರಾಗಿ ನಮ್ಮನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಈಗ ನೋಡಿದರೆ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲುವುದಾಗಿ ಹೇಳುತ್ತಿದ್ದಾರೆ. ಪ್ರತಿಯೊಬ್ಬ ಕುಸ್ತಿ ಪಟುವು ಅಖಾಡಕ್ಕೆ ಇಳಿಯುವ ಮುನ್ನ ತಾನೇ ಗೆಲ್ಲುವುದಾಗಿ ಹೇಳುತ್ತಾನೆ. ಅಖಾಡಕ್ಕೆ ಇಳಿದ ಮೇಲೆಯೇ ಸೋಲು- ಗೆಲುವು ಗೊತ್ತಾಗುವುದು ಎಂದು ಮೊದಲಿಸಿದ್ದಾರೆ.

ಜೈಲು ಸೇರಿದ್ದ 6 ಸಹೋದರರು ಸನ್ನಡತೆಯಿಂದ ಬಿಡುಗಡೆ

ಚುನಾವಣೆಗೆ ಸ್ಪರ್ಧಿಸುತ್ತೇವೆ. ಆದರೆ, ಯಾವ ಪಕ್ಷ ಅಂತ ಇನ್ನೂ ತೀರ್ಮಾನಿಸಿಲ್ಲ. ಅನರ್ಹ ಶಾಸಕರ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿದೆ. ಸಕಾರಾತ್ಮಕ ತೀರ್ಪಿನ ನಿರೀಕ್ಷೆಯಲ್ಲಿದ್ದೇವೆ. ಈ ನಡುವೆ ಚುನಾವಣೆ ಎದುರಾಗಿದ್ದು, ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಬಿಜೆಪಿಯಿಂದ ಸ್ಪರ್ಧಿಸುವ ಕುರಿತೂ ತೀರ್ಮಾನಿಸಿಲ್ಲ. ನ್ಯಾಯಾಲಯದ ತೀರ್ಪು ಹೊರ ಬಂದ ಬಳಿಕ 15 ಅನರ್ಹ ಶಾಸಕರು ಒಟ್ಟಿಗೆ ಕೂತು ಚರ್ಚೆ ಮಾಡಿ ತೀರ್ಮಾನಿಸುತ್ತೇವೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್‌ಗೆ ಮರಳುವುದಿಲ್ಲ ಎಂದಿದ್ದಾರೆ.

ಮೈಸೂರು: ಒಮ್ಮೆಲೆ 40 ಕೃತಿ ಬಿಡುಗಡೆಗೆ ಸಿದ್ಧತೆ

ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸಲು ಅಭ್ಯಂತರ ಇಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಮಂಗಳವಾರ ತೀರ್ಪು ಹೊರ ಬೀಳುವುದರಿಂದ ಅನರ್ಹ ಶಾಸಕರು ದೆಹಲಿಗೆ ಹೋಗಿದ್ದಾರೆ. ನಮ್ಮ ಪರವಾಗಿ ತೀರ್ಪು ಬರುವ ವಿಶ್ವಾಸವಿದೆ. ನಾನು ದೆಹಲಿಗೆ ಹೋಗುವುದಿಲ್ಲ. ಕ್ಷೇತ್ರಕ್ಕೆ ತೆರಳಿ ಜನರೊಡನೆ ಇರುತ್ತೇನೆ. ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆ ಇಲ್ಲ. ಒಂದೊಮ್ಮೆ ಉಪಚುನಾವಣೆ ನಡೆದರೆ ಗೆಲ್ಲುತ್ತೇನೆ ಎಂದಿದ್ದಾರೆ.

ಹಿಂದಿನ ಕಾಂಗ್ರೆಸ್‌- ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಕೇವಲ ನಾಲ್ಕೈದು ಜಿಲ್ಲೆಗೆ ಮಾತ್ರ ಸೀಮಿತವಾಗಿತ್ತು. ಆದರೆ, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಹಾವೇರಿ ಜಿಲ್ಲೆಯಲ್ಲಿ ಮೆಡಿಕಲ್‌ ಕಾಲೇಜು ಸ್ಥಾಪಿಸಬೇಕು ಎಂಬ ಹಲವು ವರ್ಷಗಳ ಬೇಡಿಕೆ ಆಗಿತ್ತು. ಹಿಂದೆ ಇದ್ದ ಕಾಂಗ್ರೆಸ್‌ ಸರ್ಕಾರ ಅಥವಾ ಸಮ್ಮಿಶ್ರ ಸರ್ಕಾರ ಕಾಲೇಜು ಮಂಜೂರು ಮಾಡಿರಲಿಲ್ಲ. ಬಿಜೆಪಿ ಸರ್ಕಾರ ಬಂದ ಕೂಡಲೇ ಹಾವೇರಿಗೆ ಮೆಡಿಕಲ್‌ ಕಾಲೇಜು ನೀಡಿದೆ ಎಂದಿದ್ದಾರೆ.

ಮೈಸೂರು: ರೈಲ್ವೇ ನಿಲ್ದಾಣದಲ್ಲಿ ಹೈ ಅಲರ್ಟ್‌

Latest Videos
Follow Us:
Download App:
  • android
  • ios