ಮೈಸೂರು ವಿಶ್ವವಿದ್ಯಾಲಯ ಪ್ರಸಾರಾಂಗ ಒಮ್ಮೆಲೆ ಸಂಶೋಧನಾ ಗ್ರಂಥಗಳು,ಪಠ್ಯಪುಸ್ತಕಗಳು ಸೇರಿದಂತೆ 40 ಕೃತಿಗಳ ಬಿಡುಗಡೆಗೆ ಸಿದ್ಧತೆ ನಡೆಸಿದೆ. ನವೆಂಬರ್‌ ಮೊದಲ ವಾರದಲ್ಲಿ ಈ ಕೃತಿಗಳ ಲೋಕಾರ್ಪಣೆಗೆ ಕುಲಪತಿಗಳಾದ ಪ್ರೊ.ಜಿ. ಹೇಮಂತ ಕುಮಾರ್‌ ಸಮ್ಮತಿಸಿದ್ದಾರೆ.

ಮೈಸೂರು(ಅ.22): ಮೈಸೂರು ವಿಶ್ವವಿದ್ಯಾಲಯ ಪ್ರಸಾರಾಂಗ ಒಮ್ಮೆಲೆ ಸಂಶೋಧನಾ ಗ್ರಂಥಗಳು,ಪಠ್ಯಪುಸ್ತಕಗಳು ಸೇರಿದಂತೆ 40 ಕೃತಿಗಳ ಬಿಡುಗಡೆಗೆ ಸಿದ್ಧತೆ ನಡೆಸಿದೆ.

ನವೆಂಬರ್‌ ಮೊದಲ ವಾರದಲ್ಲಿ ಈ ಕೃತಿಗಳ ಲೋಕಾರ್ಪಣೆಗೆ ಕುಲಪತಿಗಳಾದ ಪ್ರೊ.ಜಿ. ಹೇಮಂತ ಕುಮಾರ್‌ ಸಮ್ಮತಿಸಿದ್ದಾರೆ ಎಂದು ಪ್ರಸಾರಾಂಗ ನಿರ್ದೇಶಕ ಪ್ರೊ.ಎಂ.ಜಿ. ಮಂಜುನಾಥ ತಿಳಿಸಿದ್ದಾರೆ.

'ಸಚಿವ ಸ್ಥಾನ ತಪ್ಪಿಸಿದ್ದು ಕಾಂಗ್ರೆಸ್‌ನ ನಾಯಕರು': ವಿಶ್ವನಾಥ್ ಕಿಡಿ

ಅದೇ ದಿನ ಈ ವರ್ಷದ ಪ್ರಚಾರೋಪನ್ಯಾಸ ಮಾಲೆಗೂ ಚಾಲನೆ ನೀಡಲಾಗುವುದು. ಫೆಬ್ರವರಿ ಒಳಗೆ ಮೈಸೂರು ವಿವಿ ವ್ಯಾಪ್ತಿಯ ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಸ್ನಾತಕೋತ್ತರ ಕೇಂದ್ರಗಳು, ಸಂಯೋಜಿತ ಕಾಲೇಜುಗಳಲ್ಲಿ 25 ಪ್ರಚಾರೋಪನ್ಯಾಸಗಳನ್ನು ಏರ್ಪಡಿಸಲಾಗುವುದು. ಇವುಗಳನ್ನು ಕೃತಿ ರೂಪದಲ್ಲಿ ಪ್ರಕಟಿಸಿ ಐದು ಅಥವಾ ಹತ್ತು ರು.ಗಳಿಗೆ ಮಾರಾಟ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

ನಿಯತಕಾಲಿಕೆಗಳು

ಪ್ರಸಾರಾಂಗವು ಪ್ರಬುದ್ಧ ಕರ್ನಾಟಕ, ಮಾನವಿಕ ಕರ್ನಾಟಕ, ವಿಜ್ಞಾನ ಕರ್ನಾಟಕ, ಮೈ ಸೈನ್ಸ್‌ ಮತ್ತು ಮೈ ಸೊಸೈಟಿ- ನಿಯತಕಾಲಿಕೆಗಳನ್ನು ಪ್ರಕಟಿಸುತ್ತಿದೆ.

ಬಿಡುಗಡೆಗೆ ಸಜ್ಜಾಗಿರುವ ಕೃತಿಗಳು

ಜನಪ್ರಿಯ ಆರ್‌ಸಿಸಿ- ಡಾ.ಎಂ.ಜಿ. ಶ್ರೀನಿವಾಸನ್‌, ಹರಿದಾಸ ಸಾಹಿತ್ಯ ಸಮೀಕ್ಷೆ- ಡಾ.ಜಿ. ವರದರಾಜರಾವ್‌, ಜನಪ್ರಿಯ ಜೈವಿಕ ತಂತ್ರಜ್ಞಾನ- ಸಾತನೂರು ದೇವರಾಜ್‌, ಹೊಸಗನ್ನಡ ಕಾವ್ಯ ಮಾರ್ಗ- ಪ್ರೊ.ಅರವಿಂದ ಮಾಲಗತ್ತಿ, ಮಂಜಿನ ಕೆಳಗಿನ ಮಹಾಜ್ವಾಲೆ- ಪ್ರೊ.ಜಲೀಸ್‌ ಎ.ಕೆ. ತರೀನ್‌, ಬಸವ ಚರಿತೆ ಮತ್ತು ಶರಣಬಸವೇಶ್ವರ ಚರಿತ್ರೆ- ಡಾ.ವೈ.ಸಿ. ಭಾನುಮತಿ, ಗಿರಿಮಲ್ಲಿಕಾರ್ಜುನ ಚರಿತ್ರೆ- ಡಾ.ಎಚ್‌. ಗೌರಮ್ಮ, ಜಾನಪದ ಸಂಶೋಧನೆಯ ಹೊಸ ಸಾಧ್ಯತೆಗಳು- ಡಾ.ಟಿ. ಗೋವಿಂದರಾಜು,

ಮೈಸೂರು: ರೈಲ್ವೇ ನಿಲ್ದಾಣದಲ್ಲಿ ಹೈ ಅಲರ್ಟ್‌...

ಬೇಂದ್ರೆ ಕಾವ್ಯ- ಡಾ.ಜಿ. ಕೃಷ್ಣಪ್ಪ, ಅಂಬಿಗರ ಚೌಡಯ್ಯ- ಪ್ರೊ.ಸಿ.ಪಿ, ಸಿದ್ಧಾಶ್ರಮ, ಟಿ.ಪಿ. ಕೈಲಾಸಂ- ಡಾ.ಎನ್‌.ಕೆ. ರಾಮಶೇಷನ್‌, ಆಧುನಿಕ ಕನ್ನಡ ಕಾವ್ಯ- ಡಾ.ಜಿ.ಆರ್‌. ತಿಪ್ಪೇಸ್ವಾಮಿ, ಸಮೇತನಹಳ್ಳಿ ರಾಮರಾವ್‌- ಭಾರತಿ ಕಾಸರಗೋಡು, ದೇವಾಲಯ ವಾಸ್ತುಶಿಲ್ಪ- ಎಂ.ಎನ್‌. ಪ್ರಭಾಕರ್‌, ರಾಮದಂಡು ಅಥವಾ ಭಾಗವಂತಿಕೆ ಪದಗಳು- ಪ್ರೊ.ನರಸಿಂಹೇಗೌಡ ನಾರಾಣಾಪುರ, ಹತ್ತು ವಿಜ್ಞಾನ ಪ್ರಸಂಗಗಳು- ಪ್ರೊ.ಮಾಧುರಾವ್‌, ಶಾಸನ ಪಿತಾಮಹಾ ಬಿ.ಎಲ್‌. ರೈಸ್‌- ಡಾ.ಎಸ್‌.ಎಲ್‌. ಶ್ರೀನಿವಾಸಮೂರ್ತಿ, ವಡ್ಡಾರಾಧನೆ- ಸೀತಾರಾಮ ಜಾಗೀರದಾರ್‌, ಕನ್ನಡ ಲಿಪಿವಿಕಾಸದ ಹಂತಗಳು- ಪ್ರೊ.ಎಂ.ಜಿ. ಮಂಜುನಾಥ, ಮಹಿಳಾ ಸಬಲೀಕರಣ- ಮಂಜುಳಾ ಮಾನಸ, ಕರ್ಣಾಟಕ ಕಾದಂಬರೀ ಸಂಗ್ರಹ- ಟಿ.ಎಸ್‌. ವೆಂಕಟಣ್ಣಯ್ಯ, ಹೊಸಗನ್ನಡ ಸಾಹಿತ್ಯ ಸಂಪುಟ 1 ಮತ್ತು 2- ಪ್ರೊ.ಎಂ.ಜಿ. ಮಂಜುನಾಥ ಮತ್ತು ಡಾ.ಕೆ. ತಿಮ್ಮಯ್ಯ, ಹಳಗನ್ನಡ ಗದ್ಯ ಸಾಹಿತ್ಯ- ಸಂಪಾದನೆ, ಕಲಾಗಂಗೋತ್ರಿ-1- ಡಾ.ಡಿ. ವಿಜಯಲಕ್ಷ್ಮಿ, ಕಲಾಗಂಗೋತ್ರಿ-3- ಪ್ರೊ.ಬಿ.ಆರ್‌. ಜಯಕುಮಾರಿ, ವಿಜ್ಞಾನ ಗಂಗೋತ್ರಿ-1 ಮತ್ತು 3- ಡಾ.ಮ. ರಾಮಕೃಷ್ಣ, ವಾಣಿಜ್ಯ ಗಂಗೋತ್ರಿ-1- ಡಾ.ಪಿ. ಕೋಕಿಲಾ, ವಾಣಿಜ್ಯ ಗಂಗೋತ್ರಿ-3- ಸಂ- ಪ್ರೊ.ಬಿ.ಆರ್‌. ಜಯಕುಮಾರಿ, ಸ್ವರ ಪ್ರಸ್ತಾರದ ರಂಗಗೀತೆಗಳು- ಡಾ. ಸಿಂಧುವಳ್ಳಿ ಅನಂತಮೂರ್ತಿ, ರತ್ನಾಕರವರ್ಣಿ ಮತ್ತು ಅವನ ಸಾಹಿತ್ಯ- ಡಾ.ಎಂ.ಜಿ. ಬಿರಾದಾಸ, ಮೈಸೂರು ವಿಶ್ವವಿದ್ಯಾನಿಲಯದ ಇತಿಹಾಸ- ಈಚನೂರು ಕುಮಾರ್‌, ಮಾಧ್ಯಮಗಳಲ್ಲಿ ವರದಿಗಾರಿಕೆ- ಅಂಶಿ ಪ್ರಸನ್ನಕುಮಾರ್‌, ರಿಕಲೆಕ್ಷನ್ಸ್‌- ಪ್ರೊ.ಎಂಎಕೆ ದುರಾನಿ, ಇಂಟೆಲೆಕ್ಷನ್‌-1 ಮತ್ತು 2, ಸಿಮಿಯೋಸಿಸ್‌-1 ಮತ್ತು 2- ಪ್ರೊ.ಮಹದೇವ, ನಾನ್‌ ಗೌರ್ನಮೆಂಟಲ್‌ ಆಗ್ರನೈಜೇಷನ್ಸ್‌ ಥಿಯರಿ ಅಂಡ್‌ ಪ್ರಾಕ್ಟೀಸ್‌- ಇಂದಿರಾ ಮಹೇಂದ್ರ ವಡ.

ಹೊಸ ಯೋಜನೆಗಳು

ಇದಲ್ಲದೇ ಬಹುಬೇಡಿಕೆ ಇರುವ ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ ಸಂಪುಟಗಳು, ಎಪಿಗ್ರಾಪಿಯಾ ಕರ್ನಾಟಕ ಸಂಪುಟಗಳು, ಧರ್ಮಶಾಸ್ತ್ರದ ಇತಿಹಾಸದ ಸಂಪುಟಗಳು,ಕುಮಾರವ್ಯಾಸ ಭಾರತ ಕೃತಿಗಳನ್ನು ಮರುಮುದ್ರಣ ಮಾಡಲಾಗುವುದು ಎಂದು ಪ್ರೊ.ಮಂಜುನಾಥ ತಿಳಿಸಿದ್ದಾರೆ.

ಮೈಸೂರು: ರೈಲ್ವೇ ನಿಲ್ದಾಣದಲ್ಲಿ ಹೈ ಅಲರ್ಟ್‌