ಮೈಸೂರು(ಮ.08): ಒಬ್ಬ ಆರ್ಥಿಕ ತಜ್ಞರನ್ನು ಪ್ರಧಾನಿ ಮಾಡಿದರು. ಅವರ ಪುತ್ರ ರಾಹುಲ್ ಗಾಂಧಿ ಕೂಡಾ ನನ್ನ ಬಗ್ಗೆ ಪ್ರೀತಿ ಇಟ್ಟಿದ್ದಾರೆ. ಹೀಗಾಗಿಯೇ ಸೋನಿಯಾಗಾಂಧಿ ಅವರು ನನ್ನನ್ನು ನೋಡಲು ಜೈಲಿಗೆ ಬಂದಿದ್ದರು ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ನಾನು ಚಿಕ್ಕಂದಿನಲ್ಲೇ ಅಧಿಕಾರದ ಆಸೆ ನೋಡಿದರೂ ಸಹಾಯ ಮಾಡುವಾಗ ಜಾತಿ ನೋಡಿಲ್ಲ. ತನ್ವೀರ್ ಸೇಠ್ ಅವರನ್ನು ಗೆಲ್ಲಿಸುವಾಗ ೪ ಸಾವಿರ ಸೈಟ್ ನೀಡುತ್ತೇನೆ ಎಂದಿದ್ದೆ. ಆಗ ಸಚಿವರಾಗಿದ್ದ ಎಚ್. ವಿಶ್ವನಾಥ್ ಮುಖ್ಯಮಂತ್ರಿಗಳಿಗೆ ಹೇಳಿ ರದ್ದುಪಡಿಸಿದರು. ನಾನು ಜೈಲಿಗೆ ಹೋದಾಗ ಅವರೂ ಕುಟುಕಿ ದ್ದಾರೆ ಎಂದು ಡಿಕೆಶಿ ಆರೋಪಿಸಿದ್ದಾರೆ.

ಮಂಡ್ಯ: ಅನರ್ಹ ಶಾಸಕ ನಾರಾಯಣಗೌಡ ಹತ್ಯೆಗೆ ಸುಪಾರಿ..?

ಜೈಲಿಂದ ಬಿಡುಗಡೆಯಾದ ಬಳಿಕ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ ಅವರು ರೈಲ್ವೆ ನಿಲ್ದಾಣದಿಂದ ತೆರೆದ ವಾಹನ ಮೇಲೆ ಮೆರವಣಿಗೆ ಬಂದು ಕಾಂಗ್ರೆಸ್ ಕಚೇರಿ ಆವರಣದಲ್ಲಿ ಆಯೋಜಿ ಸಿದ್ದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.

ಡಿಕೆಶಿ ಅದ್ಧೂರಿ ಮೆರವಣಿಗೆ:

ಮೈಸೂರಿಗೆ ಶತಾಬ್ದಿ ರೈಲಿನಲ್ಲಿ ಆಗಮಿಸಿದ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ರೈಲ್ವೆ ನಿಲ್ದಾಣದಲ್ಲಿ ಸ್ವಾಗತಿಸಿದರು. ಅಲ್ಲಿಂದ ತೆರೆದ ವಾಹನದಲ್ಲಿ ಕಾಂಗ್ರೆಸ್ ಕಚೇರಿಗೆ ಮೆರವಣಿಗೆ ಮೂಲಕ ಕರೆತರಲಾಯಿತು.

ಸಿದ್ದರಾಮಯ್ಯ ಸಿಎಂ ಆದಾಗ 8 ತಿಂಗಳು ಅಧಿಕಾರವಿರಲಿಲ್ಲ. ಆದರೆ ಯಾರ ವಿರುದ್ಧವೂ ನಾನು ಮಾತನಾಡಿಲ್ಲ. ನಾನು ಜೈಲಿಗೆ ಹೋಗಾದಗಲೂ ಪ್ರತಿಭಟನೆ ಮಾಡಿದ, ದೇವರ ಬಳಿ ಹರಕೆ ಮಾಡಿಕೊಂಡ ಜನರಿಗೂ ಸಹಾಯ ಮಾಡಿಲ್ಲ. ಆದರೂ ಅವರೆಲ್ಲರೂ ದೊಡ್ಡ ಸಹಾಯ ಮಾಡಿದ್ದಾರೆ ಎಂದು ಸ್ಮರಿಸಿದ್ದಾರೆ. ಶಾಸಕ ತನ್ವೀರ್ ಸೇಠ್, ಡಾ. ಯತೀಂದ್ರ ಸಿದ್ದರಾ ಮಯ್ಯ, ಅನಿಲ್ ಚಿಕ್ಕಮಾದು, ಆರ್. ಧರ್ಮಸೇನ, ಮಾಜಿ ಸಂಸದ ಆರ್. ಧ್ರುವನಾರಾಯಣ್, ಮಾಜಿ ಶಾಸಕ ವಾಸು, ಕಳಲೆ ಕೇಶವಮೂರ್ತಿ, ಎಸ್. ಬಾಲ ರಾಜು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ನಗರಾಧ್ಯಕ್ಷ ಆರ್. ಮೂರ್ತಿ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪಾವತಿ ಅಮರ ನಾಥ್, ಜಿಪಂ ಸದಸ್ಯ ಡಿ.ರವಿಶಂಕರ್, ಮಾಜಿ ಮೇ ಯರ್ ಬಿ.ಕೆ. ಪ್ರಕಾಶ್, ದಕ್ಷಿಣಾಮೂರ್ತಿ, ಮುಖಂ ಡರಾದ ಡಿ. ತಿಮ್ಮಯ್ಯ, ಶ್ರೀನಾಥ್ ಬಾಬು, ಎಂ.ಕೆ. ಅಶೋಕ್, ಮಂಜುನಾಥ ನಾಯ್ಕ, ಈಶ್ವರ ಚಕ್ಕಡಿ, ಪ್ರೇಮ್‌ಕುಮಾರ್ ಮತ್ತಿತರರು ಹಾಜರಿದ್ದರು.

ಜೈಲಿನಲ್ಲಿದ್ದಾಗ ಮಣ್ಣನ್ನು ತೆಗೆದು ತಲೆ ಮೇಲೆ ಹಾಕ್ತಿದ್ರು ಡಿಕೆಶಿ..!