ಮೈಸೂರು(ಅ.18): ಮಾಜಿ ಸಚಿವ ಸಾ.ರಾ. ಮಹೇಶ್‌ ಅವರು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಚಾಮುಂಡಿ ತಾಯಿ ಮುಂದೆ ಕೈ ಕಟ್ಟಿ ಕುಳಿತು ಕಣ್ಣೀರಿಟ್ಟಿದ್ದಾರೆ.

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮಾಧ್ಯಮದವರು ಪ್ರತಿಕ್ರಿಯೆ ಕೇಳುತ್ತಿದ್ದಂತೆ ಮೌನಕ್ಕೆ ಶರಣಾಗಿದ್ದಲ್ಲದೆ ಸಾರಾ ಮಹೆಶ್ ಅವರು ಕಣ್ಣೀರು ಸುರಿಸಿದ್ದಾರೆ. ಬಳಿಕ ಮುಖಂಡರು ಸಂತೈಸಿದ್ದಾರೆ.

ಎಲ್ರನ್ನೂ ಕೊಂಡ್ಕೊಳ್ಳೋಕೆ ಸಾರಾ ಮಹೇಶ್ ಏನು ಟಾಟಾ ಬಿರ್ಲಾನಾ..? ವಿಶ್ವನಾಥ್ ವ್ಯಂಗ್ಯ

ದೇವಸ್ಥಾನದ ಒಳಗೆ ಬಂದ ಸಾ.ರಾ. ಮಹೇಶ್‌ ಕೆಲ ಹೊತ್ತು ಧ್ಯಾನಸ್ಥರಾಗಿದ್ದರು. ದೇವಿಯ ಮುಂದೆ ಕೈಕಟ್ಟಿ ಕುಳಿತ ಅವರು ಕಣ್ಣೀರಿಟ್ಟಿದ್ದಾರೆ. ಈ ವೇಳೆ ಪ್ರಧಾನ ಅರ್ಚಕ ಶಶಿಶೇಖರ್‌ ದೀಕ್ಷಿತ್‌ ದೇವಿಯ ಸನ್ನಿಧಿಯಲ್ಲಿ ಕಣ್ಣೀರಿಡಬಾರದು. ಯಾವುದೋ ಸಂದರ್ಭದಲ್ಲಿ ಆಡುವ ಮಾತು ಒಳ್ಳೆಯದು, ಕೆಡಕಿಗೂ ದಾರಿಯಾಗಲಿದೆ. ತಾವು ದರ್ಶನ ಪಡೆದು ದೇವಿಯಲ್ಲಿ ಪ್ರಾರ್ಥಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

ನನ್ನನ್ನು ಕೊಂಡುಕೊಂಡ ಭೂಪನನ್ನು ನೋಡಬೇಕಿದೆ ಎಂದ್ರು ವಿಶ್ವನಾಥ್‌.