ಮೈಸೂರು [ಅ.18 ] :  ನಮ್ಮ ಶಾಸಕರಿಗೆ ನಂಬಿಕೆ ಇಲ್ಲದಿದ್ದರೆ ನನಗೆ ಯಾವುದೇ ರೀತಿಯ ಅಧಿಕಾರ ಬೇಡ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಎಚ್. ಡಿ.  ಕುಮಾರಸ್ವಾಮಿ ಹೇಳಿದ್ದಾರೆ. 

ಮೈಸೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ ನನಗೆ ಅಧಿಕಾರವೇ ಬೇಡ.  JDS ಶಾಸಕರು ಬೇರೆ ನಾಯಕನನ್ನು ಆಯ್ಕೆ ಮಾಡಿಕೊಳ್ಳಲಿ ಎಂದು ಹೇಳಿದರು. 

ನನ್ನ ಅಧಿಕಾರವನ್ನು ನಾನು ಬಿಟ್ಟುಕೊಡುವುದಕ್ಕೆ ಸಿದ್ಧನಿದ್ದೇನೆ. ಪ್ರೀತಿ, ವಿಶ್ವಾಸದಿಂದ ನಡೆಸಿಕೊಳ್ಳುವ ವ್ಯಕ್ತಿಯನ್ನು ಅವರು ಆರಿಸಿಕೊಳ್ಳಲಿ ಎಂದು ಕುಮಾರಸ್ವಾಮಿ ಹೇಳಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನಾನು ಯಾವುದೇ ಅಧಿಕಾರದಲ್ಲಿಯೂ ಕೂಡ ಗೂಟ ಹೊಡೆದು ಕೂರುವುದಿಲ್ಲ, ನನಗೆ ಅಧಿಕಾರವೂ ಬೇಕಿಲ್ಲ. 13 ವರ್ಷದಿಂದ ನೋಡಿದ್ದೇನೆ, ಗೌಡರಿಗೂ ಇದನ್ನೇ ಹೇಳುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.