ಮುಂಬೈ: ಮೀ ಟೂ ಆಂದೋಲನದಲ್ಲಿ ಲೈಂಗಿಕ ಆರೋಪಕ್ಕೆ ಗುರಿಯಾಗಿರುವ ಸಂಗೀತ ಸಂಯೋಜಕ ಅನು ಮಲಿಕ್ ಅವರು ಇಂಡಿಯನ್ ಐಡಲ್ ಎಂಬ ಸಂಗೀತ ರಿಯಾಲಿಟಿ ಶೋನ ಜಡ್ಜ್ ಸ್ಥಾನದಿಂದ ಕೆಳಗಿಳಿದಿದ್ದಾರೆ. 

ಈ ಬಗ್ಗೆ ಭಾನುವಾರ ಪ್ರಕಟಣೆ ಹೊರಡಿಸಿರುವ ಸೋನಿ ವಾಹಿನಿ, ‘ಇಂಡಿಯಾ ಐಡಲ್ ರಿಯಾಲಿಟಿ ಶೋನ ಜಡ್ಜ್ ಸ್ಥಾನಕ್ಕೆ ಅನು ಮಲಿಕ್ ಅವರು ರಾಜೀನಾಮೆ ನೀಡಿದ್ದಾರೆ. ಅವರ ಸ್ಥಾನಕ್ಕೆ ವಿಶಾಲ್ ದಡ್ಲಾನಿ ಹಾಗೂ ನೇಹಾ ಕಕ್ಕರ್ ಅವರನ್ನು ಆಯ್ಕೆ ಮಾಡಲಾಗಿದೆ. ಐಡಲ್ ಸೀಸನ್ -10 ನೇ ಆವೃತ್ತಿ ನಿಗದಿಯಂತೆ ನಡೆಯಲಿದೆ,’ ಎಂದು ಸ್ಪಷ್ಟಪಡಿಸಿದೆ. 

ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಮಲಿಕ್, ‘2004 ರಿಂದಲೂ ಐಡಲ್ ಸೀಸನ್‌ನಲ್ಲಿ ಜಡ್ಜ್ ಆಗಿ ಕಾರ್ಯ ನಿರ್ವಹಿಸಿದ್ದೆ. ಆದರೆ, ನನ್ನ ಕೆಲಸಗಳ ಮೇಲೆ ನಿಗಾ ವಹಿಸಲು ಅಸಾಧ್ಯವಾಗುತ್ತಿರುವುದರಿಂದ, ರಿಯಾಲಿಟಿ ಶೋನಿಂದ ಹೊರರುತ್ತಿರುವೆ’ ಎಂದು ತಿಳಿಸಿದ್ದಾರೆ.