Asianet Suvarna News Asianet Suvarna News

ನಾನಾ, ನೀನಾ?: ಭಾರತ-ಇಸ್ರೇಲ್ ಮಧ್ಯೆ ಚಂದ್ರ ಜಗಳ!

ಚಂದ್ರನತ್ತ ನೌಕೆ ಕಳುಹಿಸಲು ಪೈಪೋಟಿ! ಭಾರತ-ಇಸ್ರೇಲ್ ಮಧ್ಯೆ ಮೂನ್ ವಾರ್! ಚಂದ್ರಯಾನ-2 ಯೋಜನೆ ಮುಂದಕ್ಕೆ! ತಾಂತ್ರಿಕ ತೊಂದರೆಯಿಂದ ಯೋಜನೆ ಮುಂದೂಡಿಕೆ

Chandrayaan 2 Delayed, Israel Could Beat India In Race To Moon
Author
Bengaluru, First Published Aug 4, 2018, 6:58 PM IST

ಬೆಂಗಳೂರು(ಆ.4): ಭಾರತ, ಇಸ್ರೇಲ್ ಸೇರಿದಂತೆ ಇನ್ನೂ ಹಲವು ರಾಷ್ಟ್ರಗಳು ಚಂದ್ರನತ್ತ ದೃಷ್ಟಿ ನೆಟ್ಟು ಕೂತಿವೆ. ಈ ನಡುವೆ ಚಂದ್ರನ ಮೇಲೆ ನೌಕೆ ಇಳಿಸಲು ಭಾರತ ಮತ್ತು ಇಸ್ರೇಲ್ ನಡುವೆ ಭಾರೀ ಪೈಪೋಟಿ ಶುರುವಾಗಿದೆ. 

ಭಾರತದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2 ಈ ವರ್ಷದ ಅಕ್ಟೋಬರ್‌ನಲ್ಲಿ ಪ್ರಾರಂಭವಾಗಬೇಕಿತ್ತು. ಆದರೆ ತಾಂತ್ರಿಕ ತೊಂದರೆಗಳಿಂದ ಈ ಯೋಜನೆ 2019 ಕ್ಕೆ ಮುಂದೂಡಲ್ಪಟ್ಟಿದೆ.

ಇದೇ ಸಮಯಕ್ಕಾಗಿ ಕಾಯುತ್ತಿದ್ದ ಇಸ್ರೇಲ್, ಭಾರತಕ್ಕೂ ಮೊದಲೇ ಚಂದ್ರನ ಮೇಲೆ ನೌಕೆ ಇಳಿಸಲು ಸಜ್ಜಾಗಿದೆ.  ಇಸ್ರೇಲ್ ನ SpaceIL ಎಂಬ ಖಾಸಗಿ ಕಂಪನಿ ಚಂದ್ರನ ಮೇಲೆ ನೌಕೆ ಇಳಿಸುವ ಜವಾಬ್ದಾರಿ ಹೊತ್ತುಕೊಂಡಿದ್ದು, ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ಭಾರತಕ್ಕೂ ಎರಡು ಹೆಜ್ಜೆ ಮುಂದೆ ಹೋಗಿದೆ. 

ಅಮೆರಿಕದ ಫಾಲ್ಕನ್-9 ಅತ್ಯಾಧುನಿಕ ರಾಕೆಟ್ ಸಹಾಯದಿಂದ 2019 ರ ಫೆಬ್ರುವರಿ 13 ರಂದು ಇಸ್ರೇಲ್ ಚಂದ್ರನತ್ತ ನೌಕೆ ಕಳುಹಿಸಲಿದೆ. ಈ ಮಧ್ಯೆ ಭಾರತ ತನ್ನ ಚಂದ್ರಯಾನ-2 ಯೋಜನೆಯನ್ನು ಇದಕ್ಕೂ ಮೊದಲೇ ಕೈಗೆತ್ತಿಕೊಳ್ಳಲಿದೆಯೇ ಅಥವಾ ಇಲ್ಲವೋ ಎಂಬುದು ಕುತೂಹಲ ಮೂಡಿಸಿದೆ.

Follow Us:
Download App:
  • android
  • ios