Asianet Suvarna News Asianet Suvarna News

ಏರ್ಟೆಲ್, ವೊಡಾಫೋನ್ ಕರೆ ದರ ಏರಿಕೆ?

ಡಿ.1ರಿಂದ ಅನ್ವಯವಾಗುವಂತೆ ಮೊಬೈಲ್ ಕರೆದರ ಶೇ.30ರಷ್ಟು ಹೆಚ್ಚಳ| ಏರ್‌ಟೆಲ್, ವೊಡಾಪೋನ್- ಐಡಿಯಾ ಘೋಷಣೆ

Vodafone Idea Bharti Airtel to raise mobile services rates
Author
Bangalore, First Published Dec 1, 2019, 4:13 PM IST

ನವದೆಹಲಿ[ಡಿ.01]: ಡಿ.1ರಿಂದ ಅನ್ವಯವಾಗುವಂತೆ ಮೊಬೈಲ್ ಕರೆದರ ಶೇ.30ರಷ್ಟು ಹೆಚ್ಚಿಸುವುದಾಗಿ ಏರ್‌ಟೆಲ್, ವೊಡಾಪೋನ್- ಐಡಿಯಾ ಘೋಷಿಸಿದ್ದು, ಭಾನುವಾರದಿಂದ ದರ ಏರಿಕೆ ಆಗಲಿದೆಯೇ ಎಂಬ ಕುತೂಹಲಕ್ಕೆ ಕಾರಣವಾಗಿದೆ.

ಆದರೆ, ದರ ಏರಿಕೆಯ ಬಗ್ಗೆ ಟೆಲಿಕಾಂ ಕಂಪನಿಗಳ ಮಧ್ಯೆ ಸಹಮತ ಮೂಡದೇ ಇರುವ ಕಾರಣ ಏರ್‌ಟೆಲ್ ಹಾಗೂ ವೋಡಾಪೋನ್‌ನಿಂದ ಈ ಕುರಿತಾದ ಅಧಿಕೃತ ಪ್ರಕಟಣೆ ಇನ್ನೂ ಹೊರಬಿದ್ದಿಲ್ಲ.

ಫೇಸ್ಬುಕ್, ಇಸ್ಟಾಗ್ರಾಮ್ ಸೇವೆ ವ್ಯತ್ಯಯ; ಜಾಲತಾಣಿಗರಿಂದ ಆಕ್ರೋಶ

3 ತಿಂಗಳ ಪ್ಲಾನ್‌ಗೆ ಬ್ರೇಕ್: ಇದೇ ವೇಳೆ ದರ ಏರಿಕೆಗೆ ಪರ್ಯಾಯವಾಗಿ 2 ತಿಂಗಳ ಪ್ಲಾನ್ ಬದಲು, ಪ್ರತಿ ತಿಂಗಳು ರೀಚಾರ್ಚ್ ಮಾಡುವ ಯೋಜನೆ ಜಾರಿಗೆ ಜಿಯೋ ಉದ್ದೇಶಿಸಿದೆ.

ಕಾರಣ ಏನು?

ರಿಲಯನ್ಸ್‌ ಜಿಯೋ ಮಾರುಕಟ್ಟೆಪ್ರವೇಶದ ಬಳಿಕ ದರ ಸಮರದ ಹೊಡೆತಕ್ಕೆ ಸಿಕ್ಕು ಮೊಬೈಲ್‌ ಕರೆ ದರ ಸೇರಿದಂತೆ ವಿವಿಧ ರೀತಿಯ ಸೇವೆಗಳ ದರ ಇಳಿಸಿದ್ದ ವಿವಿಧ ಟೆಲಿಕಾಂ ಕಂಪನಿಗಳು ಮತ್ತೆ ದರ ಏರಿಕೆಯ ಘೋಷಣೆ ಮಾಡಿವೆ. ಡಿಸೆಂಬರ್‌ನಿಂದಲೇ ಎಲ್ಲಾ ರೀತಿಯ ಮೊಬೈಲ್‌ ಸೇವೆಗಳ ಶುಲ್ಕವನ್ನು ಹೆಚ್ಚಿಸುವುದಾಗಿ ಭಾರ್ತಿ ಏರ್‌ಟೆಲ್‌ ಮತ್ತು ವೊಡಾಫೋನ್‌- ಐಡಿಯಾ ಕಂಪನಿಗಳು ಸೋಮವಾರ ಪ್ರಕಟಿಸಿವೆ. ಟೆಲಿಕಾಂ ಕಂಪನಿಗಳು ಕರೆ ಮತ್ತು ಡಾಟಾ ಶುಲ್ಕ ಏರಿಸುತ್ತಿರುವುದು ಸುಮಾರು 3 ವರ್ಷಗಳ ಬಳಿಕ.  ಹೀಗಾಗಿ ಹಲವು ವರ್ಷಗಳ ಬಳಿಕ ಮತ್ತೆ ಗ್ರಾಹಕರಿಗೆ ಮೊಬೈಲ್‌ ದರ ಏರಿಕೆಯ ಬಿಸಿ ತಟ್ಟುವುದು ಖಚಿತವಾಗಿದೆ.

ಸದ್ಯ ಮಾರುಕಟ್ಟೆಯಲ್ಲಿ ಏರ್‌ಟೆಲ್‌, ವೊಡಾಫೋನ್‌ ಹೊರತುಪಡಿಸಿದರೆ ಉಳಿದಿರುವ ಪ್ರಮುಖ ಕಂಪನಿಗಳೆಂದರೆ ರಿಲಯನ್ಸ್‌ ಜಿಯೋ ಮತ್ತು ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌. ಈ ಪೈಕಿ ಜಿಯೋ ಕೆಲ ದಿನಗಳ ಹಿಂದಷ್ಟೇ ತನ್ನ ನೆಟ್‌ವರ್ಕ್ನಿಂದ ಬೇರೆ ನೆಟ್‌ವರ್ಕ್ಗಳಿಗೆ ಮಾಡುವ ಕರೆಗಳಿಗೆ ಪ್ರತಿ ನಿಮಿಷಕ್ಕೆ 6 ಪೈಸೆಯಂತೆ ದರ ವಿಧಿಸುವ ಯೋಜನೆ ಜಾರಿಗೆ ತಂದಿದೆ. ಹೀಗಾಗಿ ಅದು ಮತ್ತೊಂದು ಸುತ್ತಿನಲ್ಲಿ ತಕ್ಷಣಕ್ಕೆ ಶುಲ್ಕ ಹೆಚ್ಚಳ ಮಾಡುವ ಸಾಧ್ಯತೆ ಕಡಿಮೆ. ಇನ್ನು ಇತ್ತೀಚೆಗಷ್ಟೇ ಕೇಂದ್ರ ಸರ್ಕಾರದಿಂದ ಪುನರುಜ್ಜೀವನ ಪ್ಯಾಕೇಜ್‌ ಪಡೆದುಕೊಂಡಿರುವ ಬಿಎಸ್‌ಎನ್‌ಎಲ್‌ ಕೂಡಾ ದರ ಏರಿಕೆ ಹಾದಿ ತುಳಿದರೆ ಅಚ್ಚರಿ ಇಲ್ಲ ಎನ್ನಲಾಗಿದೆ.

ಟೆಲಿಕಾಂ ಕಂಪನಿಗಳೇಕೆ ನಷ್ಟದಲ್ಲಿ ಮುಳುಗಿವೆ? ಜಿಯೋ ಕಾರಣವೋ?

ದರ ಏರಿಕೆ: ರಿಲಯನ್ಸ್‌ ಜಿಯೋದ ದರ ಸಮರಕ್ಕೆ ಸಿಕ್ಕಿಬಿದ್ದು ಭಾರೀ ನಷ್ಟಅನುಭವಿಸಿದ್ದ ವೊಡಾಫೋನ್‌- ಐಡಿಯಾ ಮತ್ತು ಏರ್‌ಟೆಲ್‌ ಕಂಪನಿಗಳು ಡಿಸೆಂಬರ್‌ ತಿಂಗಳಿನಿಂದ ಕರೆ ಮತ್ತು ಡಾಟಾ ದರ ಹೆಚ್ಚಿಸುವುದಾಗಿ ಪ್ರಕಟಿಸಿವೆ. ಈ ಬಗ್ಗೆ ಸೋಮವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ವೊಡಾಫೋನ್‌-ಐಡಿಯಾ ದೂರ ಸಂಪರ್ಕ ಸಂಸ್ಥೆ, ಗ್ರಾಹಕರಿಗೆ ವಿಶ್ವದರ್ಜೆಯ ಡಿಜಿಟಲ್‌ ಸೇವೆಯನ್ನು ನಿರಂತರವಾಗಿ ಮುಂದುವರಿಸುವ ನಿಟ್ಟಿನಲ್ಲಿ, ಡಿಸೆಂಬರ್‌ 1ರಿಂದ ಜಾರಿಗೆ ಬರುವಂತೆ ಸೇವೆಯ ದರಗಳನ್ನು ಏರಿಕೆ ಮಾಡಲಾಗುತ್ತದೆ ಎಂದು ಹೇಳಿದೆ. ಆದಾಗ್ಯೂ, ಯಾವ ಸೇವೆಗೆ ಎಷ್ಟುಪ್ರಮಾಣದ ದರ ಏರಿಕೆ ಮಾಡಲಾಗುತ್ತದೆ ಎಂಬುದರ ಬಗ್ಗೆ ವೊಡಾಫೋನ್‌ ಬಹಿರಂಗಪಡಿಸಿಲ್ಲ.

ಡಿಸೆಂಬರ್ 1ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Follow Us:
Download App:
  • android
  • ios