ಬಿಡುಗಡೆಯಾಗುತ್ತಿದೆ 5G ಸಪೋರ್ಟ್ ರಿಯಲ್‌ಮಿ X7 ಫೋನ್!

ಆ್ಯಪಲ್ ಸೇರಿದಂತೆ ಹಲವು ಬ್ರ್ಯಾಂಡೆಡ್ ಫೋನ್‌ಗಳು 5G ಫೋನ್ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಇದರ ನಡುವೆ ರಿಯಲ್‌ಮಿ X7 ಸಿರೀಸ್ ಫೋನ್ ಬಿಡುಗಡೆ ಮಾಡಲು ರೆಡಿಯಾಗಿದೆ. ಇದು 5G ಸಪೋರ್ಟ್  ಫೋನ್ ಆಗಿದೆ.

Realme set to introduce indias first 5G support smartphone ckm

ನವದೆಹಲಿ(ನ.16): ಭಾರತದಲ್ಲಿ 4G ಫೋನ್ ಬಳಸುತ್ತಿದ್ದ ಮಂದಿ ಇದೀಗ 5G ಫೋನ್‌ಗೆ ಶಿಫ್ಟ್ ಆಗಲು ರೆಡಿಯಾಗುತ್ತಿದ್ದಾರೆ. ಭಾರತದಲ್ಲಿ  5G ರೆಡಿ ಫೋನ್ ಲಭ್ಯವಿದ್ದರೂ, 5G ಟೆಕ್ನಾಲಜಿ ಫೋನ್ ಇನ್ನು ಬಿಡುಗಡೆಯಾಗಿಲ್ಲ. ಇದೀಗ ರಿಯಲ್‌ಮಿ X7 ಸಿರೀಸ್ ಫೋನ್ ಬಿಡುಗಡೆ ಮಾಡುತ್ತಿದೆ. ವಿಶೇಶ ಅಂದರೆ ಇದು 5G ಸಪೋರ್ಟ್ ಮಾಡಲಿದೆ.

 13,900 ರೂಪಾಯಿಯ ರಿಯಲ್‌ಮೀ C17 ಫೋನ್ ಶೀಘ್ರ ಬಿಡುಗಡೆ

ರಿಯಲ್‌ಮಿ ಇಂಡಿಯಾ ಈ ಕುರಿತು ಸ್ಪಷ್ಟಪಡಿಸಿದೆ. ಭಾರತದ ಮೊತ್ತ ಮೊದಲ 5G ಫೋನ್ ಬಿಡುಗಡೆ ಮಾಡುವುದಾಗಿ ರಿಯಲ್ ಮಿ ಹೇಳಿದೆ. ರಿಯಲ್‌ಮಿX50Pro ಫೋನ್ 2021ರ ಆರಂಭದಲ್ಲೇ ಬಿಡುಗಡೆ ಮಾಡುವುದಾಗಿ ಟ್ವೀಟ್ ಮೂಲಕ ಖಚಿತಪಡಿಸಿದೆ.

4 ಕ್ಯಾಮೆರಾ, 64 ಮೆಗಾಪಿಕ್ಸೆಲ್! ರಿಯಲ್‌ಮಿಯಿಂದ ಅಗ್ಗದ ಸ್ಮಾರ್ಟ್‌ಫೋನ್

ರಿಯಲ್‌ಮಿ ಪ್ರಕಾರ ಇನ್ನೆರಡರಿಂದ ಮೂರು ತಿಂಗಳಲ್ಲಿ 5G ಫೋನ್ ಬಿಡುಗಡೆ ಮಾಡಲಿದೆ. ಸದ್ಯ ಚೀನಾದಲ್ಲಿ ರಿಯಲ್‌ಮಿ X7 ಹಾಗೂ ರಿಯಲ್‌ಮಿ X7ಪ್ರೋ ಫೋನ್ ಚೀನಾದಲ್ಲಿ ಲಭ್ಯವಿದೆ. ಇದು 5G ಸಪೋರ್ಟ್ ಫೋನ್ ಆಗಿದೆ.

ಭಾರತದಲ್ಲಿ 5ಸಪೋರ್ಟ್ ಫೋನ್‌ಗಾಗಿ ಕಾಯುವಿಕೆ ಹೆಚ್ಚಾಗಿದೆ. ರಿಯಲ್‌ಮಿ ಕೈಗೆಟುಕುವ ದರದಲ್ಲಿ 5G ಫೋನ್ ಬಿಡುಗಡೆ ಮಾಡಲು ಭರ್ಜರಿ ತಯಾರಿ ಮಾಡಿದೆ. ಈ ಮೂಲಕ ಭಾರತದ ಅತ್ಯಂತ ಕಡಿಮೆ ಬೆಲೆಯ 5G ಫೋನ್ ಇದಾಗಲಿದೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ.

Latest Videos
Follow Us:
Download App:
  • android
  • ios