Asianet Suvarna News Asianet Suvarna News

Realme GT Neo 3T ಬಿಡುಗಡೆ, ಏನೆಲ್ಲ ವಿಶೇಷತೆಗಳಿವೆ?

*ಅಂತಾರಾಷ್ಟ್ರೀಯ ಮಾರುಕಟ್ಟೆಗೆ ರಿಯಲ್‌ಮಿ ಜಿಟಿ ನಿಯೋ 3ಟಿ ಫೋನ್ ಲಾಂಚ್
*ಭಾರತೀಯ ರೂಪಾಯಿ ಲೆಕ್ಕದಲ್ಲಿ ಫೋನ್ ಬೆಲೆ 35,600 ರೂ.ನಿಂದ ಆರಂಭ
*ನಮ್ಮ ದೇಶದಲ್ಲಿ ಯಾವಾಗ ಬಿಡುಗಡೆಯಾಗಲಿದೆ ಎಂಬ ಖಚಿತ ಮಾಹಿತಿಗಳಿಲ್ಲ

Realme GT Neo 3T smartphone launched and check details
Author
Bengaluru, First Published Jun 9, 2022, 9:53 AM IST

ಸ್ಮಾರ್ಟ್‌ಫೋನ್ ಉತ್ಪಾದನೆಯಲ್ಲಿ ಪ್ರಮುಖ ಬ್ರ್ಯಾಂಡ್ ಆಗಿರುವ ರಿಯಲ್‌ಮಿ (Realme) ತನ್ನ ಉತ್ಪನ್ನಗಳ ಮೂಲಕ ಮಾರುಕಟ್ಟೆಯಲ್ಲಿ ಪ್ರಾಬಲ್ಯವನ್ನು ಸಾಧಿಸುತ್ತಿದೆ. ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ತನ್ನದೇ ಪಾಲು ಹೊಂದಿದೆ. ತನ್ನ ಈಗಿನ ಸ್ಥಿತಿಯನ್ನು ಇನ್ನಷ್ಟು ಗಟ್ಟಿ ಮಾಡಿಕೊಳ್ಳುವುದಕ್ಕಾಗಿ ಹೊಸ ಹೊಸ ಸ್ಮಾರ್ಟ್‌ಫೋನ್ ಲಾಂಚ್ ಮಾಡುತ್ತದೆ. ಇದೀಗ ಕಂಪನಿಯ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ರಿಯಲ್ ಮಿ ಜಿಟಿ ನಿಯೋ 3 ಟಿ (Realme GT Neo 3 T) ಎಂಬ ಹೊಸ ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ.  ಕಂಪನಿಯು ತನ್ನ ಬಜೆಟ್ ಹಾಗೂ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಮೂಲಕ  ಹೆಚ್ಚಿನ ಗ್ರಾಹಕರನ್ನು ತನ್ನತ್ತ ಸೆಳೆದುಕೊಳ್ಳಲು ಯಶಸ್ವಿಯಾಗಿದೆ.  ತಿಂಗಳ ಹಿಂದೆ ರಿಯಲ್ ಮಿ ಭಾರತದಲ್ಲಿ ರಿಯಲ್‌ಮಿ ಜಿಟಿ ನಿಯೋ 3 (Realme GT Neo 3) ಬಿಡುಗಡೆ ಮಾಡಿತ್ತು. ಆ ಬಳಿಕ ಈಗ ಕಂಪನಿಯು ರಿಯಲ್‌ಮಿ ಜಿಟಿ  ನಿಯೋ 3ಟಿ (Realme GT Neo 3T) ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ.  ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 870 CPU, 120Hz ಪ್ರದರ್ಶಕ ಮತ್ತು ಇತರ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ  ಲಗ್ಗೆ ಹಾಕಿದೆ. ಪ್ರಸ್ತುತ Realme GT Neo 3T ಜೊತೆಗೆ, Realme GT Neo 3 ಮತ್ತು Realme Buds Air 3 ಅನ್ನು ಸಹ ಬಿಡುಗಡೆ ಮಾಡಿದೆ.

ಅದ್ಭುತ ಬಣ್ಣಗಳು: ಸ್ಮಾರ್ಟ್ಫೋನ್ ಮೂರು ಬಣ್ಣಗಳಲ್ಲಿ ಲಭ್ಯವಿದೆ. ಡ್ಯಾಶ್ ಹಳದಿ (Dash Yellow), ಡ್ರಿಫ್ಟಿಂಗ್ ವೈಟ್ (Drifting White) ಮತ್ತು ಶೇಡ್ ಬ್ಲಾಕ್ (Shade Black). Realme GT Neo 3T ಭಾರತದಲ್ಲಿ ಯಾವಾಗ ಬಿಡುಗಡೆಯಾಗುತ್ತದೆಯೇ ಅಥವಾ ಇಲ್ಲವೇ ಎಂಬುದು ತಿಳಿದಿಲ್ಲ.

ಕೈಗೆಟುಕುವ ಬೆಲೆ: ರಿಯಲ್ ಮಿ ಜಿಟಿ ನಿಯೋ 3ಟಿ (Realme GT Neo 3T) ಮೂಲ 8 GB RAM + 128 GB ಸ್ಟೋರೇಜ್ ಆಯ್ಕೆ ಬೆಲೆ 470 ಡಾಲರ್ (ಸುಮಾರು ರೂ 36,500) ಗೆ ಲಭ್ಯವಿದೆ. ಹಾಗೆ ನೋಡಿದರೆ, ಭಾರತದ ಮಾರುಕಟ್ಟೆಯಲ್ಲಿ ಈ ಫೋನ್ ಅನ್ನು ಪ್ರೀಮಿಯಂ ಕೆಟಗರಿಗೆ ಸೇರಿಬಹದು. Realme GT Neo 3T 8GB RAM + 256GB ಸ್ಟೋರೇಜ್ ಮಾದರಿಯ ಬೆಲೆ 510 ಡಾಲರ್. (ಸುಮಾರು 39,600 ರೂ.)

ಅದ್ಭುತ ಕ್ಯಾಮೆರಾ: Realme GT Neo 3T 64- ಮೆಗಾ ಪಿಕ್ಸೆಲ್ ಪ್ರಾಥಮಿಕ ಸಂವೇದಕ, 8- ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್‌ನೊಂದಿಗೆ ಟ್ರಿಪಲ್ ಬ್ಯಾಕ್ ಕ್ಯಾಮೆರಾ ಕಾನ್ಫಿಗರೇಶನ್ ಅನ್ನು ಹೊಂದಿದೆ. Realme GT Neo 3T ಮುಂಭಾಗದಲ್ಲಿ 16- ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಆಪಲ್ watchOS 9 ಅನಾವರಣ, ಏನೆಲ್ಲ ವಿಶೇಷತೆಗಳಿವೆ?

RAM ಮತ್ತು ಆಂತರಿಕ ಸಂಗ್ರಹಣೆ: Qualcomm Snapdragon 870 CPU ಅನ್ನು 8GB RAM ಮತ್ತು 256 GB ವರೆಗಿನ ಆಂತರಿಕ ಸಂಗ್ರಹಣೆಯೊಂದಿಗೆ ಸಂಯೋಜಿಸಲಾಗಿದೆ. ಸ್ಟೋರೇಜ್ ಸಾಮರ್ಥ್ಯವನ್ನು ಮೈಕ್ರೋ SD ಕಾರ್ಡ್ ಸ್ಲಾಟ್ ಮೂಲಕ ವಿಸ್ತರಿಸಬಹುದಾಗಿದೆ. ಸ್ಮಾರ್ಟ್‌ಫೋನ್ 5,000mAh ಬ್ಯಾಟರಿಯನ್ನು ಹೊಂದಿದ್ದು ಅದು 80W ಕ್ಷಿಪ್ರ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಡಿಸ್‌ಪ್ಲೇ: Realme GT Neo 3T 6.62-ಇಂಚಿನ ಪೂರ್ಣ-HD E4 AMOLED ಪ್ರದರ್ಶಕವನ್ನು 120 Hz ನ ರಿಫ್ರೆಶ್ ದರ ಮತ್ತು 1,300 nits ನ ಗರಿಷ್ಠ ಹೊಳಪನ್ನು ಹೊಂದಿದೆ.

M2 ಚಿಪ್‌ನೊಂದಿಗೆ ಆಪಲ್ ಮ್ಯಾಕ್‌ಬುಕ್ ಏರ್ ಲಾಂಚ್, ಹೇಗಿದೆ ಈ ಲ್ಯಾಪ್‌ಟ್ಯಾಪ್?

Follow Us:
Download App:
  • android
  • ios