Asianet Suvarna News Asianet Suvarna News

ಭಾರತದಲ್ಲಿ ರಿಯಲ್‌ಮಿ ಸಿ30 ಫೋನ್ ಲಾಂಚ್, ಏನೆಲ್ಲ ವಿಶೇಷತೆಗಳಿವೆ, ಬೆಲೆ ಎಷ್ಟು?

*ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಹೊಸ ಫೋನ್ ಲಾಂಚ್ ಮಾಡಿದ ರಿಯಲ್‌ಮಿ
*ಯೂನಿಸೊಕ್ ಟಿ612 ಚಿಪ್, 5,000ಎಂಎಚ್ ಬ್ಯಾಟರಿ ಈ ಹೊಸ ಫೋನ್‌ನಲ್ಲಿದೆ
*ಕ್ಯಾಮೆರಾ ಮತ್ತು ಬ್ಯಾಟರಿ ದೃಷ್ಟಿಯಿಂದ ಕಡಿಮೆ ಬಜೆಟ್‌ನಲ್ಲಿ ಅತ್ಯುತ್ತಮ ಫೋನ್ ಇದು

Realme C30 launched in India and check details
Author
Bengaluru, First Published Jun 21, 2022, 2:30 PM IST

ರಿಯಲ್‌ಮಿ (Realme) ತನ್ನ ಬಜೆಟ್ ಹಾಗೂ ಪ್ರೀಮಿಯಿಂ ಸ್ಮಾರ್ಟ್‌ಫೋನ್‌ಗಳ ಮೂಲಕ ಭಾರತವು ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನವನ್ನು ಹೊಂದಿದೆ. ಇದೀಗ ಕಂಪನಿಯು ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಜೆಟ್ ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ಹೊಸದಾಗಿ ಬಿಡುಗಡೆಯಾಗಿರುವ ಈ ಆಂಡ್ರಾಯ್ಡ್ ರಿಯಲ್‌ಮಿ ಸಿ30 (Realme C30) ಸ್ಮಾರ್ಟ್‌ಫೋನ್ ಸಾಕಷ್ಟು ಗಮನ ಸೆಳೆಯುತ್ತಿದೆ. ಹೊಸ Realme C30 ಫೋನ್ 20:9 ಅನುಪಾತದ ಪ್ರದರ್ಶಕದೊಂದಿಗೆ ಬರುತ್ತದೆ ಮತ್ತು ಆಕ್ಟಾ-ಕೋರ್ Unisoc SoC ನಿಂದ ಚಾಲಿತವಾಗಿದೆ. Realme C30 3GB RAM ಅನ್ನು ಸಹ ಒಳಗೊಂಡಿದೆ. ಫೋನ್‌ನ ಇತರ ಪ್ರಮುಖ ಮುಖ್ಯಾಂಶಗಳ ಪೈಕಿ 1TB ಸಂಗ್ರಹಣೆಯ ವಿಸ್ತರಣೆ ಮತ್ತು ಮೂರು ವಿಭಿನ್ನ ಬಣ್ಣದ ಆಯ್ಕೆಗಳು ನಿಮ್ಮ ಗಮನ ಸೆಳೆಯುತ್ತವೆ. ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ರೆಡ್‌ಮಿ 10 ಎ (Redmi 10A), ಟೆಕ್ನೋ ಸ್ಪಾರ್ಕ್ ಗೋ 2022 (Tecno Spark Go 2022), ಸ್ಯಾಮ್ಸಂಗ್ ಗ್ಯಾಲಕ್ಸಿ ಎ03 ಕೋರ್‌ (Samsung Galaxy A03 Core) ಸ್ಮಾರ್ಟ್‌ಫೋನ್‌ಗಳಿಗೆ ರಿಯಲ್ ಮಿ ಸಿ 30 ಭಾರೀ ಪೈಪೋಟಿ ನೀಡುವ ಸಾಧ್ಯತೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

3 GB RAM ಮತ್ತು 8 ಮೆಗಾ ಪಿಕ್ಸೆಲ್ ಕ್ಯಾಮೆರಾ
ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ರಿಯಲ್ ಮಿ ಸಿ30 ಆಂಡ್ರಾಯ್ಡ್ 11 (Realme C30 Android 11) ಅನ್ನು Realme UI Go ಆವೃತ್ತಿಯೊಂದಿಗೆ ರನ್ ಆಗುತ್ತದೆ.  ಮತ್ತು 6.5-ಇಂಚಿನ HD+ (720x1,600 ಪಿಕ್ಸೆಲ್‌ಗಳು) ಡಿಸ್‌ಪ್ಲೇಯನ್ನು 20:9 ಆಕಾರ ಅನುಪಾತ ಮತ್ತು 88.7 ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದೆ. ಫೋನ್ 3 GB RAM ಜೊತೆಗೆ 1.82 GHz ನಲ್ಲಿ ಆಕ್ಟಾ-ಕೋರ್ Unisoc T612 SoC ನೊಂದಿಗೆ ಬರುತ್ತದೆ. Realme C30 ಒಂದೇ, 8-ಮೆಗಾ ಪಿಕ್ಸೆಲ್ ಹಿಂಬದಿಯ ಕ್ಯಾಮೆರಾದೊಂದಿಗೆ ಬರುತ್ತದೆ, ಇದು LED ಫ್ಲ್ಯಾಷ್‌ನೊಂದಿಗೆ ಜೋಡಿಸಲ್ಪಟ್ಟಿದೆ. ಕ್ಯಾಮೆರಾವು HDR ಮೋಡ್‌ಗೆ ಬೆಂಬಲವನ್ನು ಸಹ ಒಳಗೊಂಡಿದೆ. ಜತೆಗೆ, ಸೆಲ್ಫಿ ಮತ್ತು ವಿಡಿಯೋ ಚಾಟಿಂಗ್‌ಗಾಗಿ ಕಂಪನಿಯು 5 ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ಒದಗಿಸಿದೆ. 

5ಜಿ ನೆಟ್ವರ್ಕ್, USB ಟೈಪ್ C ಚಾರ್ಜಿಂಗ್ ಬೆಂಬಲಿಸಲಿದೆ ಹೊಸ ಐಪ್ಯಾಡ್?

Realme C30 32GB ವೆರಿಯೆಂಟ್‌ ಸ್ಮಾರ್ಟ್‌ಫೋನ್‌ನಲ್ಲಿ UFS 2.2 ಸ್ಟೋರೇಜ್ ಅನ್ನು ಸ್ಟ್ಯಾಂಡರ್ಡ್‌ನಂತೆ ಹೊಂದಿದೆ, ಇದು ಮೈಕ್ರೊ SD ಕಾರ್ಡ್ ಮೂಲಕ (1TB ವರೆಗೆ) ಮೀಸಲಾದ ಸ್ಲಾಟ್ ಮೂಲಕ ವಿಸ್ತರಣೆಯನ್ನು ಬೆಂಬಲಿಸುತ್ತದೆ. ಕನೆಕ್ಟಿವಿಟಿ ಬಗ್ಗೆ ಹೇಳುವುದಾದರೆ, ಈ ಹೊಸ ಫೋನ್, 4ಜಿ ಎಲ್ಟಿಇ, ವೈಫೈ ಬ್ಲೂಟೂಥ್ ವಿ 5.0, , GPS/ A-GPS, ಮೈಕ್ರೋ ಯುಎಸ್‌ಬಿ ಮತ್ತು 3.5 ಹೆಡ್‌ಫೋನ್ ಜಾಕ್‌ಗೆ ಸಪೋರ್ಟ್ ಮಾಡುತ್ತದೆ. ಜತೆಗೆ ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಮತ್ತು ಪ್ರಾಕ್ಸಿಮಿಟಿ ಸೆನ್ಸರ್ ಸೇರಿದಂತೆ ಅನೇಕ ವೈಶಿಷ್ಟ್ಯಗಳನ್ನು ಕಾಣಬಹುದು. ಇನ್ನು ಬ್ಯಾಟರಿ ಬಗ್ಗೆ ಹೇಳುವುದಾದರೆ, ಅಗ್ಗದ ಫೋನಿನಲ್ಲಿ ಕಂಪನಿಯು ಅತ್ಯುತ್ತಮ ಸಾಮರ್ಥ್ಯದ ಬ್ಯಾಟರಿಯನ್ನು ನೀಡಿದೆ. ರಿಯಲ್‌ಮಿ ಸಿ30 ಸ್ಮಾರ್ಟ್‌ಫೋನಿನಲ್ಲಿ 5,000ಎಂಎಎಚ್ ಸಾಮರ್ಥ್ಯದ ಬ್ಯಾಟರಿಯನ್ನು ಒದಗಿಸಲಾಗಿದೆ. ಮತ್ತು 45 ದಿನಗಳವರೆಗಿನ ಸ್ಟ್ಯಾಂಡ್‌ಬೈ ಟೈಮ್ ಹೊಂದಿದೆ.

WhatsApp ಗ್ರೂಪ್ ಕಾಲಲ್ಲಿ ಮ್ಯೂಟ್, ಸಂದೇಶ ರವಾನೆ ಫೀಚರ್

ಬೆಲೆ ಎಷ್ಟು?
ಭಾರತದಲ್ಲಿ ಬಿಡುಗಡೆಯಾಗಿರುವ ರಿಯಲ್‌ಮಿ ಸಿ30 2 ಜಿಬಿ RAM ವೆರಿಯೆಂಟ್ ಬೆಲೆ 7,499 ರೂಪಾಯಿ ಇದ್ದರೆ, 3 ಜಿಬಿ ಮಾಟೆಲ್ ಫೋನ್ ಬೆಲೆ 8,299 ರೂ.ವರೆಗೂ ಇದೆ. ಈ ಫೋನ್ ಗ್ರಾಹಕರಿಗೆ ಬಂಬೂ ಗ್ರೀನ್ (Bamboo Green), ಡೆನಿಮ್ ಬ್ಲ್ಯಾಕ್ (Denim Black) ಮತ್ತು ಲೇಕ್ ಬ್ಲೂ (Lake Blue ) ಬಣ್ಣಗಳಲ್ಲಿ ದೊರೆಯಲಿದೆ.  ಜೂನ್ 27ರಂದು ಮಧ್ಯಾಹ್ನ 12 ಗಂಟೆಯಿಂದ ಮಾರಾಟಕ್ಕೆ ಸಿಗಲಿದೆ. ಗ್ರಾಹಕರು ಫೋನ್ ಅನ್ನುಫ್ಲಿಪ್‌ಕಾರ್ಟ್ ಮತ್ತು ರಿಯಲ್ ಮಿ ವೆಬ್‌ಸೈಟ್ ಮೂಲಕವೂ ಖರೀದಿಸಬಹುದಾಗಿದೆ. ಕಡಿಮೆ ಬಜೆಟ್‌ನಲ್ಲಿ ಸ್ಮಾರ್ಟ್‌ಫೋನ್ ನೋಡುತ್ತಿರುವವರಿಗೆ ಇದು ಅತ್ಯುತ್ತಮ ಆಯ್ಕೆಯಾಗಬಲ್ಲದು.

 

Realme C30 launched in India and check details

 

Follow Us:
Download App:
  • android
  • ios