ಕೈಗೆಟಕುವ ದರದಲ್ಲಿ ಒಪ್ಪೋ ಎ74 5ಜಿ ಸ್ಮಾರ್ಟ್‌ಫೋನ್!

ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿರುವ ಒಪ್ಪೋ ಎ74 5ಜಿ ಸ್ಮಾರ್ಟ್‌ಫೋನ್ ಅಗ್ಗದ 5ಜಿ ಸ್ಮಾರ್ಟ್ ಎನಿಸಿಕೊಳ್ಳಲಿದೆ. ಈ ಸ್ಮಾರ್ಟ್‌ಫೋನ್ ಹಲವು ವಿಶಿಷ್ಟ ವೈಶಿಷ್ಟ್ಯಗಳನ್ನು ಹೊಂದಿದೆ. ಜತೆಗೆ, ಈ 5ಜಿ ಸ್ಮಾರ್ಟ್ ಫೋನ್ ಬೆಲೆ 20 ಸಾವಿರ ರೂಪಾಯಿ ಒಳಗೆ ಇರಲಿದೆ ಎನ್ನಲಾಗುತ್ತಿದೆ. ಹಾಗಾಗಿ, ಇದು ಒಪ್ಪೋ ಕಂಪನಿಯ ಅಗ್ಗದ 5ಜಿ ಸ್ಮಾರ್ಟ್ ಫೋನ್ ಆಗಲಿದೆ.

Oppo A74 5G smartphone will be launched to Indian market

ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಪ್ರಮುಖ ಕಂಪನಿಯಾಗಿರುವ ಒಪ್ಪೋ ಹಲವು ಸ್ಮಾರ್ಟ್‌ಫೋನ್‌ಗಳ ಮೂಲಕ ಬಳಕೆದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ. ಕಂಪನಿ ಇದೇ ಮೊದಲ ಬಾರಿಗೆ, 5ಜಿ ತಂತ್ರಜ್ಞಾನಕ್ಕೆ ಬೆಂಬಲಿಸುವ ಕೈಗೆಟುಕುವ ದರದ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿದೆ.

ಜೆಬ್ರಾನಿಕ್ಸ್‌ನಿಂದ ಹೊಸ ಫಿಟ್ನೆಸ್ ಬ್ಯಾಂಡ್ ಬಿಡುಗಡೆ, ಸಖತ್ ಫೀಚರ್ಸ್

ಒಪ್ಪೋ ಎ74 5ಜಿ ಸ್ಮಾರ್ಟ್‌ಫೋನ್ ಇದು ಕೈಗೆಟುಕುವ ದರದಲ್ಲಿ ದೊರೆಯುವ ಫೋನ್ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಯಾಕೆಂದರೆ, ಈ ಫೋನ್ ಬೆಲೆ 20 ಸಾವಿರ ರೂ.ಒಳಗೇ ಇರಲಿದೆ ಎನ್ನಲಾಗುತ್ತಿದೆ. ಹಾಗಾಗಿ, ಇದು ಒಪ್ಪೋ ಕಂಪನಿಯ ಅಗ್ಗದ 5ಜಿ ಸ್ಮಾರ್ಟ್‌ಫೋನ್ ಎನಿಸಿಕೊಳ್ಳಲಿದೆ. ಕೆಲವು ದಿನಗಳ ಹಿಂದೆ ಒಪೋ ಈ ಎ74 5ಜಿ ಸ್ಮಾರ್ಟ್ ಫೋನ್ ಬಿಡುಗಡೆಯ ಬಗ್ಗೆ ಮಾಹಿತಿ ನೀಡಿತ್ತು. ಇದರಲ್ಲಿ ಫೋನ್ ಬೆಲೆ ಬಗ್ಗೆಯೂ ತಿಳಿಸಲಾಗಿತ್ತು. ಜತೆಗೆ ಕೆಲವು ತಾಂತ್ರಿಕ ವಿಶೇಷತೆಗಳ ಬಗ್ಗೆಯೂ ಮಾಹಿತಿ ನೀಡಲಾಗಿತ್ತು.

ಒಪ್ಪೋ ಎ74 5ಜಿ ಸ್ಮಾರ್ಟ್ ಫೋನ್ 90Hz ಡಿಸ್‌ಪ್ಲೇಯೊಂದಿಗೆ ಬರಲಿದೆ. ಇದರ ಜತೆಗೆ ಇನ್ನೂ ಹಲವಾರು ಫೀಚರ್‌ಗಳು, ಸೌಲಭ್ಯಗಳನ್ನು ಈ ಸ್ಮಾರ್ಟ್ ಫೋನ್ ಹೊಂದಿದೆ ಎಂದು ಹೇಳಬಹುದು. ಈ ಫೋನ್ ಮಂಗಳವಾರ ಬಿಡುಗಡೆಯಾಗುತ್ತಿದೆ.

ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಒಪ್ಪೋ ಎ74 5ಜಿ ಸ್ಮಾರ್ಟ್‌ಫೋನ್ ಹೊಸ ಫೋನ್ ಏನಲ್ಲ. ಹೀಗೆ ಹೇಳಿದ ತಕ್ಷಣ ಹಳೆಯ ಫೋನ್ ಎಂದು ಭಾವಿಸಬೇಕಿಲ್ಲ. ಯಾಕೆಂದರೆ, ಕಂಪನಿ ಈ ಒಪ್ಪೋ ಎ74 5ಜಿ ಸ್ಮಾರ್ಟ್ ಫೋನ್ ಅನ್ನು ಕಳೆದ ತಿಂಗಳವಷ್ಟೇ ಥಾಯ್ಲೆಂಡ್ ಮತ್ತು ಕಾಂಬೋಡಿಯಾ ಮಾರುಕಟ್ಟೆಗಳಿಗೆ ಬಿಡುಗಡೆ ಮಾಡಿತ್ತು ಮತ್ತು ಬಳಕೆದಾರರಿಂದ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಈ ಹಿನ್ನೆಲೆಯಲ್ಲೇ ಕಂಪನಿ ಅದೇ ಸ್ಮಾರ್ಟ್ ಫೋನ್ ಅನ್ನು ಇದೀಗ ಭಾರತೀಯ ಮಾರುಕಟ್ಟೆಗೆ ಪರಿಚಯಸಿತ್ತಿದೆ.

Oppo A74 5G smartphone will be launched to Indian market

ಕಾಂಬೋಡಿಯಾ ಮತ್ತು ಥಾಯ್ಲೆಂಡ್ ಮಾರುಕಟ್ಟೆಗೆ ಕಳದೆ ತಿಂಗಳು ಬಿಡುಗಡೆಯಾದ ಒಪ್ಪೋ ಎ74 5ಜಿ ಸ್ಮಾರ್ಟ್‌ಫೋನ್ ಅನ್ನು ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆಯಾದರೂ, ಈ ಸ್ಮಾರ್ಟ್‌ ಫೋನ್‌ನ ವಿಶೇಷತೆಗಳಲ್ಲಿ ಒಂದಿಷ್ಟು ವ್ಯತ್ಯಾಸಗಳನ್ನು ಕಾಣಬಹುದಾಗಿದೆ ಎಂದು ಹೇಳಬಹುದು.

ಅನ್‌ಲಿಮಿಟೆಡ್ ಡೇಟಾ, ಕಾಲ್‌ ಸೇವೆ ಒದಗಿಸುವ STV ಪ್ಲ್ಯಾನ್ ವಿಸ್ತರಿಸಿದ BSNL

ಒಪ್ಪೋ 74 5ಜಿ ಸ್ಮಾರ್ಟ್ ಫೋನ್‌ನ ಬ್ಯಾಟರಿ ಅಥವಾ ಕ್ಯಾಮೆರಾಗಳಲ್ಲಿ ಈ ವ್ಯತ್ಯಾಸವನ್ನು ಕಾಣಬಹುದಾಗಿದೆ ಎಂದು ಹೇಳಲಾಗುತ್ತಿದೆ. ಆದರೆ,  ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಫೋನ್ ಬಿಡುಗಡೆ ಬಳಿಕ ಸಂಪೂರ್ಣವಾದ ಮಾಹಿತಿ ಸಿಗಲಿದೆ. ಹೀಗಿದ್ದಾಗ್ಯೂ, ಒಪ್ಪೋ ಎ74 5ಜಿ ಸ್ಮಾರ್ಟ್‌ಫೋನ್‌ನಲ್ಲಿ  ಕ್ವಾಲಕಾಂ ಸ್ನ್ಯಾಪ್‌ಡ್ರಾಗನ್ 480 ಪ್ರೊಸೆಸರ್, 5ಜಿ ಸಪೋರ್ಟ್ ಸೇರಿದಂತೆ ಇನ್ನಿತರ ತಾಂತ್ರಿಕ ವಿಶೇಷತೆಗಳನ್ನು ನೋಡಬಹುದಾಗಿದೆ.

ಒಪ್ಪೋ ಎ74 5ಜಿ ಸ್ಮಾರ್ಟ್‌ಫೋನ್‌ನಲ್ಲಿ 6.5 ಇಂಚ್ ಫುಲ್ ಎಚ್‌ಡಿ ಪ್ಲಸ್ ಐಪಿಎಸ್ ಎಲ್‍ಸಿಡಿ ಡಿಸ್‌ಪ್ಲೇ ಇರಲಿದೆ. 5ಜಿ ಕನೆಕ್ಟಿವಿಟಿ ತಂದಕೊಡುವ ಕ್ವಾಲಕಾಂ ಸ್ನ್ಯಾಪ್‌ಡ್ರಾಗನ್ 480 ಪ್ರೊಸೆರ್ ಇರಲಿದೆ. ಈ ಒಪ್ಪೋ ಎ74 5ಜಿ ಸ್ಮಾರ್ಟ್‌ಫೋನ್‌ನಲ್ಲಿ 6 ಜಿಬಿ ರ್ಯಾಮ್ ಮತ್ತು 128 ಸ್ಟೋರೇಜ್ ಇರಲಿದೆ. ಹಾಗೆಯೇ, ನೀವು ಮೈಕ್ರೊ ಎಸ್ ಡಿ ಕಾರ್ಡ್ ಮೂಲಕ ಮೆಮೋರಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಈ ಫೋನ್‌ನ ಬದಿಯಲ್ಲಿ ನಿಮಗೆ ಫಿಂಗರ್ ಪ್ರಿಂಟ್ ಸೆನ್ಸರ್ ಸಿಗಲಿದೆ. ಇದರಿಂದ ಬಳಕೆಗೆ ಹೆಚ್ಚು ಅನುಕೂಲವಾಗಲಿದೆ.

ಇನ್ನು ಕ್ಯಾಮೆರಾ ವಿಷಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಒಪ್ಪೋ ಎ74 5ಜಿ ಸ್ಮಾರ್ಟ್‌ಫೋನ್‌ನಲ್ಲಿ ಮೂರು ಕ್ಯಾಮೆರಾಗಳ ಸೆಟ್ ಇರಲಿದೆ. ಈ ಪೈಕಿ ಮೊದಲನೆಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರಲಿದೆ. ಇದರ ಜತೆಗೆ ಇನ್ನೆರಡು 2 ಮೆಗಾ ಪಿಕ್ಸೆಲ್ ಕ್ಯಾಮೆರಾಗಳೂ ಕೂಡಾ ಇರಲಿವೆ. ಸ್ಮಾರ್ಟ್ ಫೋನ್ ಮುಂಭಾಗದಲ್ಲಿ ಸೆಲ್ಫಿಗಾಗಿ 16 ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ಕಂಪನಿ ನೀಡುತ್ತಿದೆ.

ಒಪ್ಪೋ ಎ74 5ಜಿ ಸ್ಮಾರ್ಟ್ ಫೋನ್‌ನಲ್ಲಿ 5000 ಎಂಎಎಚ್ ಸಾಮರ್ಥ್ಯ ಬ್ಯಾಟರಿ ಇರಲಿದೆ ಎನ್ನಲಾಗುತ್ತಿದೆ. ಈ ಬ್ಯಾಟರಿಯು 18 ವ್ಯಾಟ್ ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡಲಿದೆ.

6000 mAh ಬ್ಯಾಟರಿಯ ಟೆಕ್ನೋ ಸ್ಪಾರ್ಕ್ 7 ಸ್ಮಾರ್ಟ್‌ ಫೋನ್ ಬಿಡುಗಡೆ

Latest Videos
Follow Us:
Download App:
  • android
  • ios