OnePlus 10 Pro ಈಗ ಭಾರತದಲ್ಲಿ ಖರೀದಿಗೆ ಲಭ್ಯ: ಕಂಪನಿಯಿಂದ ಹಲವು ಆಫರ್ಸ್‌, ಕ್ಯಾಶ್‌ಬ್ಯಾಕ್!

OnePlus 10 Pro ನ ಆರಂಭಿಕಮಾರಾಟವು ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್, ಪುಣೆ ಮತ್ತು ಚೆನ್ನೈನಲ್ಲಿ  ಪಾಪ್-ಅಪ್‌ಗಳ ಮೂಲಕ ಆಯ್ದ ಒನ್‌ಪ್ಲಸ್‌ನ ಪ್ರಮುಖ ಮಳಿಗೆಗಳಲ್ಲಿ ನಡೆಯಲಿದೆ 

OnePlus 10 Pro early sale in India in selected cities including Bengaluru discounts cashbacks mnj

OnePlus 10 Pro early sale: OnePlus 10 Pro ಭಾರತದಲ್ಲಿ ಏಪ್ರಿಲ್ 5 ರಂದು ಮಾರಾಟವಾಗಲಿದೆ, ಆದರೆ ನೀವು ಇಂದು ಒನ್‌ ಪ್ಲಸ್‌ನ ಹೊಚ್ಚಹೊಸ ಫ್ಲ್ಯಾಗ್‌ಶಿಪ್  ಫೋನ್‌ ಖರೀದಿಬಹುದು. ಆಯ್ದ ನಗರಗಳಲ್ಲಿ ಒನ್‌ಪ್ಲಸ್ ಪಾಪ್-ಅಪ್ ಸ್ಟೋರ್‌ಗಳಿಗೆ ಭೇಟಿ ನೀಡುವ ಮೂಲಕ OnePlus 10 Pro ನಿಮ್ಮದಾಗಿಸಿಕೊಳ್ಲಬಹುದು ಎಂದು ಒನ್‌ಪ್ಲಸ್ ತಿಳಿಸಿದೆ. ಏಪ್ರಿಲ್ 5 ರಂದು ನಿಯಮಿತ ಮಾರಾಟ ಪ್ರಾರಂಭವಾಗುವ ಮೊದಲು OnePlus 10 Pro ಖರೀದಿಸಲು ನೀವು ಒನ್‌ಪ್ಲಸ್ ಫ್ಲ್ಯಾಗ್‌ಶಿಪ್ ಸ್ಟೋರ್‌ಗೆ ಹೋಗಬೇಕಾಗುತ್ತದೆ. OnePlus 10 Pro ಖರೀದಿಯೊಂದಿಗೆ ಕಂಪನಿಯು ವಿಶೇಷವಾದ "OnePlus goodies"ಸಹ ನೀಡಲಿದೆ. 

ಒನ್‌ಪ್ಲಸ್ ಖರೀದಿಸಲು ಹೊರಡುವ ಮುನ್ನ ಒಂದು ವಿಷಯವನ್ನು ಗಮನದಲ್ಲಿರಿಸಿ. OnePlus 10 Proನ ಆರಂಭಿಕ ಮಾರಾಟವು ಆಯ್ದ ಒನ್‌ಪ್ಲಸ್ ಪ್ರಮುಖ ಮಳಿಗೆಗಳಲ್ಲಿ ನಡೆಯುತ್ತದೆ. ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್, ಪುಣೆ ಮತ್ತು ಚೆನ್ನೈನಲ್ಲಿ ಮಾತ್ರ ಒನ್‌ಪ್ಲಸ್ ಆರಂಭಿಕ ಪ್ರವೇಶ ಪಾಪ್-ಅಪನ್ನು ಹೋಸ್ಟ್ ಮಾಡುತ್ತಿವೆ. 

ಈ ನಗರಗಳಲ್ಲಿನ ಸಂಬಂಧಿತ ಒನ್‌ಪ್ಲಸ್ ಪ್ರಮುಖ ಮಳಿಗೆಗಳನ್ನು OnePlus Connaught Place, OnePlus High Street Phoenix, OnePlus Boulevard, OnePlus Nizam Place, OnePlus JM Road ಮತ್ತು OnePlus VR ಮಾಲ್ ಎಂದು ಕರೆಯಲಾಗುತ್ತದೆ. ಹೀಗಾಗಿ ಸದ್ಯಕ್ಕೆ ಈ ಮಳಿಗೆಗಳಲ್ಲಿ ಮಾತ್ರ ನೀವು  OnePlus 10 Pro ಖರೀದಿಬಹುದಾಗಿದೆ

OnePlus 10 Pro ಬೆಲೆ: ಹೊಚ್ಚಹೊಸ OnePlus 10 Pro ಇದೀಗ ಮಾರುಕಟ್ಟೆಯಲ್ಲಿ ಅತ್ಯುತ್ತಮ ಆಂಡ್ರಾಯ್ಡ್ ಫ್ಲ್ಯಾಗ್‌ಶಿಪ್ ಫೋನ್‌ಗಳಲ್ಲಿ ಒಂದಾಗಿದೆ ಮತ್ತು ಇದು ಪ್ರೀಮಿಯಂ ಬೆಲೆಯೊಂದಿಗೆ ಬರುತ್ತದೆ. OnePlus 10 Pro ನ ಆರಂಭಿಕ ಬೆಲೆ ರೂ 66,999 ಆಗಿದೆ, ಇದು ಯಾವುದೇ ರೀತಿಯಲ್ಲಿ ಪಾಕೆಟ್ ಸ್ನೇಹಿಯಾಗಿಲ್ಲದಿದ್ದರೂ, Samsung Galaxy S22 ಅಥವಾ Apple iPhone 13 ಬೆಲೆಗಿಂತ ಇನ್ನೂ ಕಡಿಮೆಯಾಗಿದೆ. OnePlus 10 Proನ ಸಂಪೂರ್ಣ ಬೆಲೆ ಪಟ್ಟಿ ಇಲ್ಲಿದೆ:

- OnePlus 10 Pro 8GB, 128GB ಆವೃತ್ತಿಯ ಬೆಲೆ 66,999 ರೂ.
- OnePlus 10 Pro 12GB, 256GB ಆವೃತ್ತಿಯ ಬೆಲೆ 71,999 ರೂ.

OnePlus 10 Pro ಆಫರ್ಸ್:‌ OnePlus 10 Pro  66,999 ರೂ ಬೆಲೆಯಲ್ಲಿ ಉತ್ತಮ ವೈಶಿಷ್ಟ್ಯಗಳನ್ನು ನೀಡುತ್ತಿದೆ, ಹೀಗಾಗಿ ಪ್ರಿಮಿಯಂ ಸ್ಮಾರ್ಟ್‌ಫೋನ್‌ ಖರೀದಿಸುವ ಯೋಚನೆಯಲ್ಲಿ ನೀವಿದ್ದರೆ ಇದು ಉತ್ತಮ ಆಯ್ಕೆಯಾಗಬಹುದು.  OnePlus 10 Pro ಖರೀದಿಸಲು ಕಂಪನಿಯು ನಿಮಗಾಗಿ ಹಲವಾರು ಕೊಡುಗೆಗಳನ್ನು ನೀಡುತ್ತಿದೆ. 

*ಮುಂಗಡ ಮತ್ತು  ಇಎಮ್‌ಐ ಪಾವತಿಗಳಿಗಾಗಿ ಎಸ್‌ಬಿಐ ಕ್ರೆಡಿಟ್ ಕಾರ್ಡನ್ನು ಬಳಸುವುದರಿಂದ, ನೀವು OnePlus 10 Pro ಮೇಲೆ 4,500 ರೂಗಳ ತ್ವರಿತ ರಿಯಾಯಿತಿಯನ್ನು ಪಡೆಯಬಹುದು, ಸ್ಮಾರ್ಟ್‌ಫೋನಿನ ಮೂಲ ರೂಪಾಂತರಕ್ಕಾಗಿ ವೆಚ್ಚವನ್ನು ರೂ 62,499 ಕ್ಕೆ ಇಳಿಸಬಹುದು.

*ಹಳೆಯ, ಬಳಸಿದ ಆಂಡ್ರಾಯ್ಡ್ ಫೋನ್‌ಗಳು ಮತ್ತು ಐಫೋನ್‌ಗಳ ಮೇಲೆ 5,000 ರೂಪಾಯಿಗಳ ಹೆಚ್ಚುವರಿ ವಿನಿಮಯ ಬೋನಸ್ ಇದೆ. ನೀವು ಹಳೆಯ ಒನ್‌ಪ್ಲಸ್ ಫೋನ್ ಹೊಂದಿದ್ದರೆ, ಕಂಪನಿಯು ನಿಮ್ಮನ್ನು Legacy OnePlus ಬಳಕೆದಾರರೆಂದು ಪರಿಗಣಿಸುತ್ತದೆ ಮತ್ತು ಹೆಚ್ಚುವರಿ ವಿನಿಮಯ ಬೋನಸ್‌ಗಿಂತ ಹೆಚ್ಚುವರಿ 2,000 ರೂಗಳನ್ನು ನೀಡುತ್ತದೆ, ಅಂದರೆ ಒಟ್ಟು ರೂ 7,000 ಬೋನಸ್. ಈ ಬೋನಸ್ ನಿಮ್ಮ ಹಳೆಯ, ಬಳಸಿದ ಫೋನ್‌ನ ನಿಜವಾದ ವಿನಿಮಯ ಮೌಲ್ಯಕ್ಕಿಂತ ಹೆಚ್ಚಾಗಿರುತ್ತದೆ.

*ಅಮೇರಿಕನ್ ಎಕ್ಸ್‌ಪ್ರೆಸ್ ಕ್ರೆಡಿಟ್ ಕಾರ್ಡ್ ಬಳಕೆದಾರರು OnePlus 10 Pro ಖರೀದಿಯ ಮೇಲೆ ಶೇಕಡಾ 10 ರಷ್ಟು ಕ್ಯಾಶ್‌ಬ್ಯಾಕ್ ಪಡೆಯಬಹುದು. ಆಯ್ದ ಕ್ರೆಡಿಟ್ ಕಾರ್ಡ್‌ಗಳು ಮಾತ್ರ ಈ ಆಫರ್‌ಗೆ ಅರ್ಹವಾಗಿವೆ ಎಂಬುದನ್ನು ನೆನಪಿನಲ್ಲಿಡಿ.

*OnePlus 10 Pro ಜೊತೆಗೆ ನೀವು ಆಯ್ದ Jio ಪ್ರಿಪೇಯ್ಡ್ ಯೋಜನೆಗಳನ್ನು ಖರೀದಿಸಿದಾಗ ರೂ 7,200 ಮೌಲ್ಯದ ಪ್ರಯೋಜನಗಳನ್ನು ಕಂಪನಿ ನೀಡುತ್ತಿದೆ.

*ನೀವು ರೆಡ್ ಕೇಬಲ್ ಸದಸ್ಯರಾಗಿದ್ದರೆ, ಖರೀದಿಯ ಮೇಲೆ ನೀವು ಹೆಚ್ಚುವರಿ 2,000 ರೂ ರಿಯಾಯಿತಿ ಪಡೆಯುತ್ತಿರಿ.  ನೀವು ಸದಸ್ಯರಲ್ಲದಿದ್ದರೆ, ಒನ್‌ ಪ್ಲಸ್ ವೆಬ್‌ಸೈಟ್, ಸ್ಟೋರ್‌ಗಳು ಮತ್ತು ಅಮೆಝಾನ್‌ನಿಂದ ರೆಡ್ ಕೇಬಲ್ ಲೈಫ್ ಪ್ಲಾನ್‌ಗಾಗಿ ರೂ. 1,999 ಸದಸ್ಯತ್ವ ಶುಲ್ಕವನ್ನು ಪಾವತಿಸುವ ಮೂಲಕ ಸದಸ್ಯರಾಗಬಹುದು. 

ರೆಡ್ ಕೇಬಲ್ ಕ್ಲಬ್ ಎನ್ನುವುದು ಒನ್‌ಪ್ಲಸ್ ಸಮುದಾಯವನ್ನು ಗುರುತಿಸಲು ಮತ್ತು ಪುರಸ್ಕರಿಸಲು ಸದಸ್ಯತ್ವ ಕಾರ್ಯಕ್ರಮವಾಗಿದೆ.   ಸದಸ್ಯತ್ವವು ನಿಮಗೆ 1TB ಕ್ಲೌಡ್ ಸ್ಟೋರೇಜ್, 12 ತಿಂಗಳ ಹೆಚ್ಚುವರಿ ವಾರಂಟಿ ಮತ್ತು ಅಮೆಝಾನ್‌ ಪ್ರೈಮ್ ಮತ್ತು ಸ್ಪೋಟಿಫೈ ಪ್ರೀಮಿಯಂನ ಉಚಿತ ಸದಸ್ಯತ್ವಗಳನ್ನು 12 ತಿಂಗಳವರೆಗೆ ನೀಡುತ್ತದೆ.

Latest Videos
Follow Us:
Download App:
  • android
  • ios