Asianet Suvarna News Asianet Suvarna News

Moto G53 5G: ಅಗ್ಗದ ಮೊಟೊ ಜಿ53 5ಜಿ ಫೋನ್ ಲಾಂಚ್, ಬೆಲೆ ಎಷ್ಟು?

*ಎಂಟ್ರಿ ಲೇವಲ್‌ ಸೆಗ್ಮೆಂಟ್‌ನಲ್ಲಿ 5ಜಿ ಫೋನ್ ಅನ್ನು ಕಡಿಮೆ ಬೆಲೆ ನೀಡುತ್ತಿದೆ ಮೊಟೊರೊಲಾ
*ಮೊಟೊ ಜಿ53 5ಜಿ ಫೋನ್ ಸದ್ಯ ಚೀನಾದಲ್ಲಿ ಬಿಡುಗಡೆಯಾಗಿದ್ದು, ಭಾರತಕ್ಕೂ ಕಾಲಿಡಬಹುದು
*ಕ್ಯಾಮೆರಾ, ಬ್ಯಾಟರಿ ಸೇರಿದಂತೆ ಅನೇಕ ಫೀಚರ್ಸ್‌ಗಳು ಗಮನ ಸೆಳೆಯುತ್ತವೆ

Motorola launches its new Moto G53 5G phone in China
Author
First Published Dec 17, 2022, 5:12 PM IST

ಜಗತ್ತಿನ ಪ್ರಮುಖ ಸ್ಮಾರ್ಟ್‌ಫೋನ್ ಉತ್ಪಾದಕ ಕಂಪನಿಗಳಲ್ಲಿ ಮೊಟೊರೊಲಾ(Motorola) ಕಂಪನಿಯು ತನ್ನ ಬಜೆಟ್ ಹಾಗೂ ಪ್ರೀಮಿಯಂ ಫೋನುಗಳ ಮೂಲಕ ಹೆಚ್ಚು ಪ್ರಸಿದ್ಧಿಯಾಗಿದೆ. ವಿವಿಧ ಹಂತಗಳಲ್ಲಿ ಹಲುವಾರ ಫೋನ್ ಲಾಂಚ್ ಮಾಡಿರುವ ಕಂಪನಿ ಇದೀಗ, 5ಜಿ ಕೆಟಗರಿಯಲ್ಲಿ ಹೊಸ ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ಕಂಪನಿಯು ಮೊಟೊ ಜಿ53 5ಜಿ (Moto G53 5G) ಸ್ಮಾರ್ಟ್‌ಫೋನ್ ರಿಲೀಸ್ ಮಾಡಿದೆ. ಈ ಫೋನ್ ತನ್ನ ವಿಶಿಷ್ಟ ಫೀಚರ್ಸ್ ಹಾಗೂ ತಂತ್ರಜ್ಞಾನದಿಂದಾಗಿ ಹೆಚ್ಚು ಗಮನ ಸೆಳೆಯುತ್ತಿದೆ. ಈ ಹೊಸ ಫೋನ್ ಸದ್ಯಕ್ಕೆ ಚೀನಾ ಮಾರುಕಟ್ಟೆಯಲ್ಲಿ ಮಾತ್ರವೇ ಬಿಡುಗಡೆಯಾಗಿದ್ದು, ಅಲ್ಲಿನ ಗ್ರಾಹಕರಿಗೆ ದೊರೆಯಲಿದೆ. ಬಹುಶಃ ಮುಂದಿನ ವರ್ಷ ಈ ಫೋನ್ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು ಪ್ರವೇಶಿಸಬಹುದು ಎಂದು ಅಂದಾಜಿಸಿಲಾಗಿದೆ. 

ಈ ಹೊಸ ಫೋನ್ ಮಾರುಕಟ್ಟೆಯಲ್ಲಿ  Moto G52 4G ಅನ್ನು ಬದಲಿಸಿದರೂ ಸಹ, Moto G53 ಕಡಿಮೆ ಪ್ರಭಾವಶಾಲಿ ವಿಶೇಷತೆಗಳನ್ನು ಹೊಂದಿದೆ. ಈ ಕಾರಣದಿಂದಾಗಿಯೇ ಹಳೆಯ ಆವೃತ್ತಿಯ ಫೋನ್ ಬೆಲೆಗಿಂತಲೂ ಈ ಹೊಸ ಮಾದರಿಯ ಫೋನ್ ಬೆಲೆ ಕಡಿಮೆ ಇರಬಹುದು ಎಂದು ಅಂದಾಜಿಸಲಾಗುತ್ತಿದೆ. ಉದಾಹರಣೆಗೆ ಹೇಳಬೇಕೆಂದರೆ,  ಈ ಫೋನ್ POLED ಡಿಸ್‌ಪ್ಲೇಗಿಂತ G52 LCD ಡಿಸ್‌ಪ್ಲೇಯನ್ನು ಹೊಂದಿದೆ. ಸೆಲ್ಫಿ ಕ್ಯಾಮೆರಾವನ್ನು ಬದಲಿಸಲಾಗಿದ್ದು, 16 ಪಿಕ್ಸೆಲ್ ಕ್ಯಾಮೆರಾ ಬದಲಿಗೆ 8 ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ಮುಂದಿನ ಪೀಳಿಗೆಯ Motorola X40, Qualcommನ ಅತ್ಯಂತ ಪ್ರಬಲವಾದ Qualcomm Snapdragon 8 Gen 2 ಪ್ರೊಸೆಸರ್‌ನಿಂದ ನಡೆಸಲ್ಪಡುತ್ತಿದೆ, ಇದನ್ನು Lenovo ಮಾಲೀಕತ್ವದ ಕಂಪನಿಯು ಮಾರುಕಟ್ಟೆಗೆ ಪರಿಚಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಯೂಸರ್‌ ಫ್ರೇಂಡ್ಲಿ ಮಾಡುವ ಟೆಲಿಗ್ರಾಮ್‌ನ ಈ ನಾಲ್ಕು ಫೀಚರ್ಸ್!

ಹೊಸ ಮೊಟೊ ಜಿ53 5ಜಿ (Moto G53 5G)  ಸ್ಮಾರ್ಟ್‌ಫೋನ್ ಪ್ರಾಥಮಿಕ ಗುರಿಯು 5G ಸಂಪರ್ಕವನ್ನು ಉಪಯೋಗವನ್ನು ಎಂಟ್ರಿ ಲೇವಲ್ ಸ್ಮಾರ್ಟ್‌ಫೋನುಗಳಿಗ ಇಳಿಸುವುದಾಗಿದೆ. ಇದರಿಂದ ಎಂಟ್ರಿ ಲೇವಲ್ ಖರೀದಿಸುವ  ಫೋನ್ ಗ್ರಾಹಕರಿಗೆ 5ಜಿ ಸೇವೆ ಸಪೋರ್ಟ್ ಮಾಡಬೇಕು. ಈ ಹಿನ್ನೆಲೆಯಲ್ಲಿ ಈ ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹೊಸ ಮೊಟೊರೊಲಾ ಸ್ಮಾರ್ಟ್‌ಫೋನ್‌ನೊಂದಿಗೆ 6.5-ಇಂಚಿನ 120Hz LCD ಪರದೆಯನ್ನು ಸೇರಿಸಲಾಗಿದೆ. 8 GB RAM ಮತ್ತು 128 GB ಸ್ಟೋರೇಜ್‌‍‌ನೊಂದಿಗೆ ಬಹಿರಂಗಪಡಿಸದ ಕ್ವಾಲ್ಕಾಮ್ ಆಕ್ಟಾ-ಕೋರ್ CPU Moto G53 5G ಗೆ ಶಕ್ತಿ ನೀಡುತ್ತದೆ.

Moto G53 5G  ಸ್ಮಾರ್ಟ್ಫೋನ್,  Moto G52 ನ ಟ್ರಿಪಲ್ ರಿಯರ್ ಕ್ಯಾಮೆರಾ ಸಿಸ್ಟಮ್ಗೆ ವಿರುದ್ಧವಾಗಿ 50- ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಕಂಡಿದೆ. ಇದರ ಜತೆಗೆ 2-ಮೆಗಾ ಪಿಕ್ಸೆಲ್ ಸಂವೇದಕದೊಂದಿಗೆ ಡ್ಯುಯಲ್ ಬ್ಯಾಕ್ ಕ್ಯಾಮೆರಾ ಸಂಯೋಜನೆಯನ್ನು ಹೊಂದಿದೆ.  ಕನೆಕ್ಟಿವಿಟಿ ಆಯ್ಕೆಗಳ ಸಂಬಂಧಿಸಿ ಹೇಳುವುದಾದರೆ,  3.5mm ಜ್ಯಾಕ್, ಬ್ಲೂಟೂತ್, Wi-Fi, NFC ಮತ್ತು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಈ ಪಟ್ಟಿಯಲ್ಲಿವೆ. ಕೊನೆಯದಾಗಿ, Moto G53 5G 18W ಚಾರ್ಜಿಂಗ್ ಅನ್ನು ಬೆಂಬಲಿಸುವ 5000mAh ಬ್ಯಾಟರಿಯನ್ನು ಒಳಗೊಂಡಿದೆ.

2022ರ ಬೆಸ್ಟ್ ಫೋನ್ಸ್: ಐಫೋನ್‌ 14 ಪ್ರೋನಿಂದ ಹಿಡಿದು ಒನ್‌ಪ್ಲಸ್ 10ಟಿ 5ಜಿವರೆಗೆ..!

Moto G53 5G ಸ್ಮಾರ್ಟ್ಫೋನ್  ಮೂಲ ಆವೃತ್ತಿಯ ಬೆಲೆ ಚೀನಾ ಮಾರುಕಟ್ಟೆಯಲ್ಲಿ 900  CNY ಇದೆ. ಆದರೆ, ಭಾರತೀಯ ಮಾರುಕಟ್ಟೆಯಲ್ಲಿ ಅದೇ ಫೋನ್ ಬೆಲೆ ಅಂದಾಜು, 10700 ರೂ. ಆಗಿರಲಿದೆ ಎಂದು ಅಂದಾಜಿಸಲಾಗಿದೆ. ಅದೇ ರೀತಿ,  8 GB RAM ಮತ್ತು 128 GB ಸ್ಟೋರೇಜ್ ಫೋನ್ ಬೆಲೆ ಚೀನಾ ಮಾರುಕಟ್ಟೆಯಲ್ಲಿ CNY 1099 ಇದ್ದರೆ, ಭಾರತೀಯ ಮಾರುಕಟ್ಟೆಯಲ್ಲಿ ಅಂದಾಜು 13 ಸಾವಿರ ರೂಪಾಯಿ ಆಗಬಹುದು ಎಂದು ಹೇಳಲಾಗುತ್ತಿದೆ. ಆದರೆ, ಅದೇ Motorola 4G ಸಾಮರ್ಥ್ಯದ Moto G52 ಫೋನಿನ 6 GB RAM ಮತ್ತು 128 GB ಸ್ಟೋರೇಜ್ ವೆರಿಯೆಂಟ್ ಬೆಲೆ ಭಾರತದಲ್ಲಿ 12,999 ರೂಪಾಯಿ ಇದೆ ಎಂಬುದನ್ನು ಗಮನಿಸಬಹುದು.

Follow Us:
Download App:
  • android
  • ios