ಫೋನು ಹೀಗಿರಬೇಕು ಅಂತನ್ನಿಸಿದರೆ ತಪ್ಪೇನಿಲ್ಲ ಬಿಡಿ; ಸ್ಯಾಮ್ಸಂಗ್ ಗೆಲಾಕ್ಸಿ ಎಂ31 ಎಸ್!
ಸ್ಯಾಮ್ಸಂಗ್ ಸದ್ಯಕ್ಕೆ ಅನ್‌ಸಂಗ್ ಹೀರೋ! ಈಗ ಮಾರುಕಟ್ಟೆಗೆ ಬರುತ್ತಿರುವ ಹೊಸ ಮಾಡೆಲುಗಳ ಭರಾಟೆಯಲ್ಲಿ ಸ್ಯಾಮ್ಸಂಗು ಕೂಡ ನೋಕಿಯಾದಷ್ಟೇ ಅಪರೂಪ ಆದಂತಿದೆ. ವನ್‌ಪ್ಲಸ್, ವಿವೋ, ಶಿಯೋಮಿ- ಮುಂತಾದ ಬ್ರಾಂಡುಗಳು ಮಾಡುತ್ತಿರುವ ಸದ್ದಿನ ಮುಂದೆ ಸ್ಯಾಮ್ಸಂಗು ಕೊಂಚ ಮಂಕಾಗಿದ್ದೂ ನಿಜವೇ.
ಸ್ಯಾಮ್ಸಂಗು ಫೋನಿನ ಅಭಿಮಾನಿಗಳಿದ್ದಾರೆ. ಈಗಂತೂ ಚೀನಾ ಮಾಲಿಗೆ ಛೀಮಾರಿ ಹಾಕುವ ಭರಾಟೆಯಲ್ಲಿ ಕೊರಿಯಾದ ಸ್ಯಾಮ್ಸಂಗಿನ ಅದೃಷ್ಟಖುಲಾಯಿಸಿದಂತಿದೆ. ಕಳೆದ ಆರು ತಿಂಗಳಲ್ಲಿ ಎರಡು ಹೊಸ ಮಾಡೆಲ್ಲುಗಳನ್ನು ಅದು ಬಿಡುಗಡೆ ಮಾಡಿದೆಯಷ್ಟೇ ಅಲ್ಲ, ಮಿಕ್ಕ ಕಂಪೆನಿಗಳ ಹಾಗೆಯೇ ಅದೇ ಮಾದರಿಯ ಸುಧಾರಿತ ಆವೃತ್ತಿಯನ್ನೂ ಮಾರುಕಟ್ಟೆಗೆ ಬಿಡುವ ಚಾಳಿ ಶುರುಹಚ್ಚಿಕೊಂಡಿದೆ.
ಕೇಂದ್ರಕ್ಕೆ ಮನಸೋತ ಸ್ಯಾಮ್ಸಂಗ್; ವಿಯೆಟ್ನಾಂನಿಂದ ಇಂಡಿಯಾ ಕಡೆಗೆ 3 ಲಕ್ಷ ಕೋಟಿ ರೂ. ಹೆಜ್ಜೆ
ನಮ್ಮ ಮುಂದಿರುವ ಫೋನು . ಇದರ ವಿಶೇಷವೆಂದರೆ ಥಟ್ಟನೆ ಕಣ್ಸೆಳೆಯುವ ನಾಲ್ಕು ಹಿಂಬದಿ ಕೆಮರಾಗಳು. ಆಗಸ್ಟ್ 27ರಿಂದಲೇ ಇದು ಮೊಬೈಲ್ ಅಂಗಡಿಗಳಿಗೂ ಕಾಲಿಟ್ಟಿದೆ. ಜುಲೈ ತಿಂಗಳಿಂದ ಕೇವಲ ಆನ್‌ಲೈನ್‌ಗಳಲ್ಲಷ್ಟೇ ದೊರೆಯುತ್ತಿದ್ದ ಫೋನಿನ ಯಶಸ್ಸು ಕಂಡು ಇದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದಂತಿದೆ.
ಸರಿಸುಮಾರು 22000 ರುಪಾಯಿ ಬೆಲೆಯ ಫೋನು ಇದು. ಸ್ಯಾಮ್ಸಂಗ್ ಕಂಪೆನಿಯ ಗುಡ್‌ವಿಲ್ ಮುಂದಿಟ್ಟುಕೊಂಡು ನೋಡಿದರೆ ಇದೇನೂ ಹೆಚ್ಚಲ್ಲ. ಹಾಗಂತ ಇದು ಕಂಪೆನಿಯ ಫ್ಲಾಗ್‌ಶಿಪ್ ಫೋನೂ ಅಲ್ಲ. ತನ್ನ ಸರೀಕರ ಜತೆಗೆ ಪೈಪೋಟಿಗೆಂದೇ ಈ ಫೋನನ್ನು ಮಾರುಕಟ್ಟೆಗೆ ಬಿಟ್ಟಂತೆ ಮೇಲ್ನೋಟಕ್ಕೆ ಕಂಡರೂ ಹಿಂದುಗಡೆ ಬೇರೆಯೇ ಲೆಕ್ಕಾಚಾರ ಇರುವುದನ್ನು ವಿತ್ತವಿಶ್ಲೇಷಕರು ಗಮನಿಸಬಹುದು.
4 ಕ್ಯಾಮೆರಾ, 64 ಮೆಗಾಪಿಕ್ಸೆಲ್, 6000mAh ಬ್ಯಾಟರಿ! ಸ್ಯಾಮ್ಸಂಗ್ ಅಗ್ಗದ ಮೊಬೈಲ್
ಸ್ಯಾಮ್ಸಂಗ್ ಫೋನುಗಳಿಗೆ ಹೋಲಿಸಿದರೆ ಇದರದು ಹೊಸ ವಿನ್ಯಾಸ. ಮಿಕ್ಕ ಎಂ ಸೀರೀಸ್ ಫೋನುಗಳಿಗಿಂತ ಇದು ವಿಭಿನ್ನ. ಒಂದು ಸಣ್ಣ ತೂತಿನಂತೆ ಕಾಣುವ ಫ್ರಂಟ್ ಕೆಮರಾದೊಂದಿಗೆ ಇದು 6.5 ಡಿಸ್‌ಪ್ಲೇ ಹೊಂದಿದೆ. ಥಟ್ಟನೆ ನೋಡಿದಾಗ ಭಾರೀ ಮಾಲು ಅನ್ನಿಸುವಂತಿದೆ. ಕ್ಯಾಮರಾ ಬೇರೆಯೇ ಇರಬೇಕಿತ್ತೋ, ಚುಕ್ಕಿಯಂತಿರುವುದು ಸರಿಯೋ ಅನ್ನುವುದು ಅವರವರ ಅಭಿರುಚಿಗೆ ಬಿಟ್ಟದ್ದು.
ಈ ಫೋನಿನ ಫಿಂಗರ್‌ಪ್ರಿಂಟ್ ಹಿಂಭಾಗದಲ್ಲೂ ಇಲ್ಲ, ಮುಂಭಾಗದಲ್ಲೂ ಇಲ್ಲ, ಬದಿಯಲ್ಲಿದೆ. ಇದು ಹೊಸತು. ವಾಲ್ಯೂಮ್ ಬಟನ್ನಿಗೆ ಹೊಂದಿಕೊಂಡಂತಿರುವ ಫಿಂಗರ್‌ಪ್ರಿಂಟ್ ಸ್ಕಾ್ಯನರ್ ಫೋನ್ ಕೈಗೆತ್ತಿಕೊಂಡೊಡನೇ ಆನ್ ಆಗುವಂತೆ ಮಾಡಿದೆ. ಹೀಗಾಗಿ ಎಡಗೈಗೆ ಇದು ಸಲೀಸು.
ಮಿಕ್ಕಂತೆ ಇದು ಹೇಳಿಕೇಳಿ ಗೇಮಿಂಗ್ ಫೋನು. ಆಟಕ್ಕೂ ಬೆಸ್ಟುಮಾತಿಗೂ ಬೆಸ್ಟು. ಇನ್‌ಬಿಲ್ಟ್ ಆ್ಯಪ್‌ಗಳ ಸಂಖ್ಯೆ ಸಾಕಷ್ಟಿದೆ. ಹೊಸ ಹೊಸ ಫೀಚರುಗಳೇನೂ ಥಟ್ಟನೆ ಕಣ್ಣಿಗೆ ಬೀಳಲಿಲ್ಲ. ಹುಡುಕುತ್ತಾ ಹೋದರೆ ಹಿಡನ್ ಫೀಚರುಗಳು ಸಿಕ್ಕಾವು. ಅದು ಬಳಕೆದಾರರ ಭಾಗ್ಯ. ಇತ್ತೀಚಿಗೆ ಚೀನಾದ ಕೆಲವೊಂದು ಆ್ಯಪುಗಳು ಬ್ಯಾನ್ ಆದ ಹಿನ್ನೆಲೆಯಲ್ಲಿ ಅದಕ್ಕೆ ಪರ್ಯಾಯ ಆ್ಯಪುಗಳನ್ನೂ ಇಲ್ಲಿ ಕಾಣಬಹುದು. ಆ ಮಟ್ಟಿಗೆ ಇದು ಅಪ್‌ಡೇಟೆಡ್ ಅಬ್ಬಾಯಿ.
ಈಗ ಡುಯಲ್ ಆ್ಯಪ್‌ಗಳ ಕಾಲ. ಸ್ವಂತಕ್ಕೊಂದು ಸ್ವಾಂತಕ್ಕೊಂದು ವಾಟ್ಸ್ಯಾಪು ಬೇಕಾದವರಿಗೆ ಇಲ್ಲಿ ಎರಡೆರಡು ಆ್ಯಪುಗಳನ್ನು ಹಾಕಿಕೊಳ್ಳಲು ಅವಕಾಶ ಉಂಟು. ನಿಮ್ಮ ಆರೋಗ್ಯ ಕಾಪಾಡಲು, ಫೋನಿನ ಆರೋಗ್ಯ ಕಾಪಾಡಲು ಕೂಡ ಇದರೊಳಗೇ ಡಾಕ್ಟರುಗಳು ಸಿಗುತ್ತಾರೆ.
ಆರು ಜಿಬಿ ರಾರಯಮ್, 128 ಜಿಬಿ ಸ್ಪೇಸು ಎಲ್ಲ ಫೋನುಗಳಲ್ಲೂ ಈಗ ಕಾಮನ್ನು. ಅದಕ್ಕಾಗಿ ಈ ಫೋನಿಗೆ ಹೆಚ್ಚಿನ ಅಂಕ ನೀಡಬೇಕಾಗಿಲ್ಲ. ಕ್ಯಾಮರಾ ಚೆನ್ನಾಗಿಲ್ಲ ಅಂದರೆ ಚೆನ್ನಾಗಿದೆ. ಚೆನ್ನಾಗಿದೆ ಅಂದರೆ ಚೆನ್ನಾಗಿಲ್ಲ. ಇದರ ಸತ್ಯವನ್ನು ಬಲ್ಲವನೇ ಬಲ್ಲ. ಬಳಸಿದರೆ ಬ್ರಹ್ಮಾಸ್ತ್ರ ಅನ್ನೋದು ಸುಳ್ಳಲ್ಲ.
ಇವು ನಿಮ್ಮ ಆರೋಗ್ಯಕ್ಕೆ ಡೇಂಜರಸ್ ಪೋನ್‌ಗಳಂತೆ! ಕೋರ್ಟ್‌ನಲ್ಲಿ ಕೇಸ್ ದಾಖಲು
ಬ್ಯಾಟರಿ ಚೆನ್ನಾಗಿದೆ. ಫೋನು ಒಯ್ದು ಚಾಜ್‌ರ್ ಮಾಡಿ ಮನೇಲಿಟ್ಟರೆ ತಿಂಗಳ ಕಾಲ ಹೊಟ್ಟೆಖಾಲಿ ಆಗದು. ಬಳಸುತ್ತಿದ್ದರೆ ಎರಡು ದಿನಕ್ಕೆ ಮೋಸವಿಲ್ಲ. ತನ್ನಿಂತಾನೇ ಬ್ಯಾಟರಿಗೆ ತಕ್ಕಂತೆ ನೆರಳುಬೆಳಕಿನಾಟ ಆಡುವುದು ಫೋನಿಗೇ ಗೊತ್ತು. ಅಗತ್ಯಬಿದ್ದರೆ ಈ 6000 ಎಂಎಎಚ್ ಬ್ಯಾಟರಿ ಫೋನಿನಿಂದ ರಿವರ್ಸ್ ಚಾರ್ಜಿಂಗ್ ಆಪ್ಶನ್ ಬಳಸಿ ನಿಮ್ಮ ಗಂಡನ ಫೋನನ್ನೂ ಚಾಜ್‌ರ್ ಮಾಡಬಹುದು. ಈ ವಿಚಾರದಲ್ಲೇ ಅರ್ಧಾಂಗಿಯ ಜತೆ ಜಗಳವಾದರೆ ಸ್ಯಾಮ್ಸಂಗಿಯಾಗಿ ಸುಖಪಡಿ.
ನಾಲ್ಕು ಕೆಮರಾಗಳ ಪೈಕಿ ಯಾವ್ಯಾವುದರ ಕೆಪಾಸಿಟಿ ಎಷ್ಟೆಷ್ಟುಅಂತ ನಾವೇಕೆ ಹೇಳೋಣ. ಈ ಕೆಮರಾಗಳ ಹಣೆಬರಹ ಗೊತ್ತಿಲ್ಲದವರು ಈಗ ಯಾರಿದ್ದಾರು? ಆದರೆ ಈ ಕಾಲದ ಮಕ್ಕಳಿಗೆ ಬೇಕಾದ ವಿಚಿತ್ರ ಎಫೆಕ್ಟುಗಳೆಲ್ಲ ಇಲ್ಲಿವೆ. ಮಜಾ ಮಾಡಿ.