Asianet Suvarna News Asianet Suvarna News

ಭಾರತದಲ್ಲಿ iPhone 14 ಬಿಡುಗಡೆ, ಈ ಫೋನ್ ಖರೀದಿಸುವ ಬೆಲೆಯಲ್ಲಿ ಸುತ್ತಬಹುದು 6 ದೇಶ!

ಬಹುನಿರೀಕ್ಷಿತ iPhone 14 ಭಾರಿ ಸದ್ದು ಮಾಡುತ್ತಿದೆ.  ನೂತನ ಫೋನ್‌ನಲ್ಲಿರುವ ಅತ್ಯಾಧುನಿಕ ಫೀಚರ್ಸ್ ಭಾರಿ ಚರ್ಚೆಯಾಗುತ್ತಿದೆ.  ಇದರ ಜೊತೆಗೆ ಐಫೋನ್ 14 ಬೆಲೆ ಕುರಿತು ಭಾರಿ ಚರ್ಚೆ ನಡೆಯುತ್ತಿದೆ. iPhone 14 ಖರೀದಿಸುವ ಬೆಲೆಯಲ್ಲಿ 6 ದೇಶಗಳನ್ನು ಸುತ್ತಬಹುದು. ಈ ಕುರಿತು ಮಾಹಿತಿ ಇಲ್ಲಿದೆ.

Apple iPhone 14 series model price at rs 79900 in India this amount traveler can explore 6 international destinations ckm
Author
First Published Sep 10, 2022, 4:17 PM IST

ನವದೆಹಲಿ(ಸೆ.10): ಆ್ಯಪಲ್ ಹೊಚ್ಚ ಹೊಸ  iPhone 14 ಸೀರಿಸ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಆ್ಯಪಲ್ ಪ್ರಕಾರ ಐಫೋನ್ 14 ಸಿರೀಸ್ ಅತ್ಯುತ್ತಮ ಸ್ಮಾರ್ಟ್‌ಫೋನ್. ಮ್ಯಾಕ್ಸ್ ವೇರಿಯೆಂಟ್ ಫೋನ್‌ನಲ್ಲಿ ಅತೀ ದೊಡ್ಡ ಡಿಸ್‌ಪ್ಲೆ ಹಾಗೂ ಬ್ಯಾಟರಿ ಲೈಫ್ ನೀಡಲಾಗಿದೆ. ಹೊಚ್ಚ ಹೊಸ ಐಫೋನ್ 14 ಸಿರೀಸ್ ಫೋನ್ 13 ಪ್ರೋ ಸೇರಿದಂತೆ ಇತರ ಐಫೋನ್‌ಗೆ ಹೋಲಿಸಿದರೆ ಕಡಿಮೆ ಇದೆ. ಆದರೆ ಐ ಫೋನ್ 14 ಖರೀದಿಸುವ ಬೆಲೆಯಲ್ಲಿ 6 ದೇಶಗಳ ಪೈಕಿ ಯಾವುದಾದರೊಂದು ದೇಶವನ್ನು 4 ದಿನ ಹಾಯಾಗಿ ಸುತ್ತಿ ಬರಬಹುದು. ಹಾಗಾದರೆ ಐಫೋನ್ 14 ಅಷ್ಟು ದುಬಾರಿನಾ? ಅಥವಾ ವಿದೇಶ ಪ್ರಯಾಣ ಕೈಗೆಟುಕುವ ದರಲ್ಲಿದೆಯಾ? ಗೊಂದಲ ಬೇಡ. ಹೊಚ್ಚ ಹೊಸ ಐಫೋನ್ 14 ಬೆಲೆ ಭಾರತದಲ್ಲಿ 79,900 ರೂಪಾಯಿ. ಇದಕ್ಕಿಂತ ದುಬಾರಿ ಬೆಲೆಯ ಫೋನ್‌ಗಳು ಭಾರತದಲ್ಲಿ ಲಭ್ಯವಿದೆ. ಆದರೆ ಈ ಬೆಲೆಯಲ್ಲಿ 6 ದೇಶಗಳನ್ನು ಸುತ್ತಬಹುದು ಅನ್ನೋ ಮಾತು ಗಮನದಲ್ಲಿರಲಿ.

ಭಾರತದಲ್ಲಿ ಐಫೋನ್(iphone 14 ) ಸಿರೀಸ್ ಬೇಸ್ ಮಾಡೆಲ್ ಬೆಲೆ 79,900 ರೂಪಾಯಿ. ಈ ಬೆಲೆಯಲ್ಲಿ(Apple iPhone 14 series) ಯಾವೆಲ್ಲಾ ದೇಶ ಸುತ್ತಬಹುದು? ಈ ಬೆಲೆಯಲ್ಲಿ 6 ಅಂತಾರಾಷ್ಟ್ರೀಯ ದೇಶಗಳ ಪೈಕಿ ಯಾವುದಾದರೊಂದು ದೇಶಕ್ಕೆ ಪ್ರಯಾಣ(Travel ಮಾಡಿ ಅಲ್ಲಿ ಸುತ್ತಿ ಮರಳಿ ಭಾರತಕ್ಕೆ ಬರಬಹುದು.

iPhone 14: ನೂತನ ಫೋನ್‌ಗಳ ಬಿಡುಗಡೆ ವಿರುದ್ಧ ಕಿಡಿ ಕಾರಿದ ಸ್ಟೀವ್‌ ಜಾಬ್ಸ್‌ ಪುತ್ರಿ

ವಿಯೆಟ್ನಾಂ
ವಿಯೆಟ್ನಾಂ(Vietnam) ಅತ್ಯಂತ ಸುಂದರ ದೇಶ. ನೀರು, ಬೆಟ್ಟ, ವಾಟರ್ ಸ್ಪೋರ್ಟ್ಸ್ ಸೇರಿದಂತೆ ಹಲವು ಕಾರಣಗಳಿಂದ ವಿಯೆಟ್ನಾಂ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಇಲ್ಲಿನ ವಿಭಿನ್ನ ಸಂಸ್ಕೃತಿ, ಆಹಾರ ಸೇರಿದಂತೆ ಹಲವು ಕಾರಣಗಳಿಂದ ಪ್ರವಾಸಿಗರು ಮತ್ತೆ ಮತ್ತೆ ವಿಯೆಟ್ನಾಂಗೆ ಭೇಟಿ ನೀಡುತ್ತಲೆ ಇರುತ್ತಾರೆ. ವಿಯೆಟ್ನಾಂ ಪ್ರವಾಸಕ್ಕೆ 80,000 ರೂಪಾಯಿ ಸಾಕು. 

ಥಾಯ್ಲೆಂಡ್
ವಿದೇಶ ಪ್ರವಾಸ ಎಂದ ತಕ್ಷಣ ನೆನಪಿಗೆ ಬರುವ ಹೆಸರು ಥಾಯ್ಲೆಂಡ್(Thailand) ಪ್ರಾಕೃತಿಕವಾಗಿ ಅತ್ಯಂತ ಸುಂದರ ದೇಶ. ರಜಾ ದಿನ ಮಜಾ ಅನುಭವಿಸಲು ಥಾಯ್ಲೆಂಡ್ ಪ್ರವಾಸ ಮಾಡಬೇಕು ಅನ್ನೋ ಮಾತಿದೆ. ಸಮುದ್ರ, ಪ್ರಾಕೃತಿಕ ಸೌಂದರ್ಯ, ಗತಕಾಲದ ದೇವಸ್ಥಾನ, ಸ್ಮಾರಕಗಳು ಅತ್ಯಂತ ಪ್ರಸಿದ್ಧವಾಗಿದೆ. 4 ರಿಂದ 5 ದಿನದ ಥಾಯ್ಲೆಂಡ್ ಪ್ರವಾಸಕ್ಕೆ 80,000 ರೂಪಾಯಿ ಸಾಕು.

ಸಿಂಗಾಪೂರ
ಭಾರತದಲ್ಲಿನ ಪ್ರತಿಯೊಬ್ಬರು ಸಿಂಗಾಪುರದ(Singapore) ಕುರಿತು ಕೇಳಿರುತ್ತಾರೆ. ಆಧುನಿಕತೆ, ವ್ಯವಸ್ಥಿತವಾದ ನಗರ, ರಸ್ತೆ, ಅತ್ಯಾಧುನಿಕ ಮೂಲ ಸೌಕರ್ಯ ಸೇರಿದಂತೆ ಒಂದು ದೇಶವನ್ನು ಅತೀ ಸುಂದರವಾಗಿ ವ್ಯವಸ್ಥಿತವಾಗಿ ಹೇಗೆ ಕಟ್ಟಬಹುದು ಅನ್ನೋದಕ್ಕೆ ಸಿಂಗಾಪುರ ಉದಾಹರಣೆಯಾಗಿದೆ. ಇಲ್ಲಿನ ಆಹಾರಗಳು ಅಷ್ಟೇ ಪ್ರಸಿದ್ಧಿಯಾಗಿದೆ. ಸಿಂಗಾಪುರ ಪ್ರವಾಸಕ್ಕೆ 80,000 ರೂಪಾಯಿ ಸಾಕು.

 

ಆಪಲ್ ಐಫೋನ್ 15 ಭಾರತದಲ್ಲೇ ಉತ್ಪಾದನೆ, ಎಷ್ಟು ನಿಜ?

ಇಂಡೋನೇಷಿಯಾ
ಏಷ್ಯಾ ರಾಷ್ಟ್ರಗಳ ಪೈಕಿ ಸುಂದರ ದೇಶ ಇಂಡೋನೇಷಿಯಾ(Indonesia). ಬಾಲಿ ಬೀಚ್ ಸೇರಿದಂತೆ ಹಲವು ಪ್ರದೇಶಗಳು ಅತೀ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಿದೆ. 75,000 ರಿಂದ 80,000 ರೂಪಾಯಿಯಲ್ಲಿ ಇಂಡೋನೇಷಿಯಾ ಪ್ರವಾಸ ಮಾಡಬಹುದು.

ಶ್ರೀಲಂಕಾ
80,000 ರೂಪಾಯಿಯಲ್ಲಿ ಶ್ರೀಲಂಕಾ(Sri lanka) ಪ್ರವಾಸವನ್ನು ಅದ್ಧೂರಿಯಾಗಿ ಮಾಡಬಹುದು. ಸಾಮಾನ್ಯವಾಗಿ 40 ರಿಂದ 60 ಸಾವಿರ ರೂಪಾಯಿಯಲ್ಲಿ 3 ರಿಂದ 4 ದಿನದ ಲಂಕಾ ಪ್ರವಾಸ ಮಾಡಬಹುದು. ಶ್ರೀಲಂಕಾ ಕರೆನ್ಸಿಗಿಂತ ಭಾರತದ ರೂಪಾಯಿ ಮೌಲ್ಯ ಹೆಚ್ಚಾಗಿದೆ. ಹೀಗಾಗಿ ಲಂಕಾ ಪ್ರವಾಸ ಅದ್ಧೂರಿಯಾಗಿ ಮಾಡಬುಹುದು.

ಸೌತ್ ಕೊರಿಯಾ
ಸೌತ್ ಕೊರಿಯಾ(South Korea) ಅಂದ ತಕ್ಷಣ ಮಿಸೈಲ್, ಕಿಮ್ ಜಾಂಗ್ ಉನ್, ನಿಯಮ ಮೀರಿದರೆ ಅಲ್ಲೆ ಶಿಕ್ಷೆಗಳೇ ನೆನಪಾಗುತ್ತದೆ. ಆದರೆ ಸೌತ್ ಕೊರಿಯಾ ಅತ್ಯಂತ ಸುಂದರ ದೇಶ. ವಿದೇಶಿ ಪ್ರವಾಸಿಗರು ಸೌತ್ ಕೊರಿಯಾಗೆ ಪ್ರವಾಸ ಮಾಡುವ ಸಂಖ್ಯೆ ವಿರಳ. ಕಾರಣ ಕೊರಿಯಾ ಆಡಳಿತ ಹಾಗೂ ವಿದೇಶಾಂಗ ನೀತಿ. ಆದರೆ 80,000ರೂಪಾಯಿಯಲ್ಲಿ ಸೌತ್ ಕೊರಿಯಾ ಸುತ್ತಿ ಬರಹುದು.

Follow Us:
Download App:
  • android
  • ios