ಮಂಡ್ಯ [ನ.08]: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿ ಬಿಡುಗಡೆಯಾದ ಬಳಿಕ ಮೊದಲ  ಬಾರಿಗೆ ಮಂಡ್ಯಕ್ಕೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಭೇಟಿ ನೀಡಿದ್ದಾರೆ. 

ಮಂಡ್ಯದ ಹಲವು ದೇವಾಲಯಗಳಿಗೆ ಡಿಕೆಶಿ ಭೇಟಿ ನೀಡುತ್ತಿದ್ದು ಇದೇ ವೇಳೆ ಮಂಡ್ಯದ  ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ್ದಾರೆ. 

ಆದಿ ಚುಂಚನಗಿರಿ ಮಠದಲ್ಲಿ ಸಚಿವರಾದ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಚಿವ ಸಾ.ರಾ ಮಹೇಶ್ ಅವರನ್ನು ಭೇಟಿ ಮಾಡಿ ರಹಸ್ಯ ಮಾತುಕತೆ ನಡೆಸಿದ್ದಾರೆ. 

ಇಬ್ಬರೇ ಪ್ರತ್ಯೇಕವಾಗಿ ಕೊಠಡಿಯಲ್ಲಿ ಕುಳಿತು ರಹಸ್ಯವಾಗಿ ಮುಖಂಡರು ಮಾತುಕತೆ ನಡೆಸಿದ್ದಾರೆ. ಈ ವೇಳೆ ಶಾಖಾ ಮಠದ ಪೀಠಾಧಿಪತಿ ಶ್ರೀ ಸೋಮನಾಥ ಸ್ವಾಮೀಜಿಯವರನ್ನು ಹೊರಗಿಟ್ಟು ಇಬ್ಬರ ನಡುವೆ ಮಾತುಕತೆ ನಡೆದಿದೆ. 

ಜೈಲಿನಲ್ಲಿದ್ದಾಗ ಮಣ್ಣನ್ನು ತಲೆಗೆ ಹಾಕ್ಕೊಳ್ತಿದ್ರಂತೆ ಡಿಕೆಶಿ.....

ಈ ವೇಳೆ ಮಾಜಿ ಶಾಸಕ ವಾಸು ಅವರು ಸ್ವಾಮೀಜಿ ಅವರೊಂದಿಗೆ ಹೊರಗೆ ಕುಳಿತಿದ್ದು, ಆದರೆ ಇವರಿಬ್ಬರ ಮಾತುಕತೆ ವಿಚಾರದ ಬಗ್ಗೆ ಭಾರೀ ಕುತೂಹಲ ಸೃಷ್ಟಿಯಾಗಿದೆ. ಇಬ್ಬರ ನಡುವಿನ ಮಾತುಕತೆ ಬಗ್ಗೆ ಯಾವುದೇ ವಿಚಾರ ಹೊರಬಿದ್ದಿಲ್ಲ.