Asianet Suvarna News Asianet Suvarna News

ಮನೆಗೆ ಹೋದ ಅಧಿಕಾರಿಗಳನ್ನು ವಾಪಸ್ ಕರೆಸಿ ಸಂಸದೆ ತರಾಟೆ

ಮನೆಗೆ ಹೋದ ಅಧಿಕಾರಿಗಳನ್ನು ವಾಪಸ್ ಕರೆಸಿ ಸಂಸದೆ ಸುಮಲತಾ ಅಂಬರೀಶ್ ತರಾಟೆಗೆ ತೆಗೆದುಕೊಂಡಿದ್ದಾರೆ.

MP Sumalatha Ambareesh Slams Officers In Mandya
Author
Bengaluru, First Published Oct 12, 2019, 3:14 PM IST

ನಾಗಮಂಗಲ [ಅ.12]:  ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸಿ ಸರ್ಕಾರಿ ಒತ್ತುವರಿ ಜಾಗವನ್ನು ತೆರವುಗೊಳಿಸಿ, ರೈಲ್ವೆ ನಿಲ್ದಾಣಕ್ಕೆ ರಾಜ್ಯ ರಸ್ತೆ ಸಾರಿಗೆ ಬಸ್ ಸಂಪರ್ಕ ವ್ಯವಸ್ಥೆ ಮಾಡಿ, ಮನೆ ದುರಸ್ತಿಗೊಳಿಸಲು ಸಹಾಯ, ಪಟ್ಟಣದಲ್ಲಿ ವಾಜಪೇಯಿ ಮನೆ ನಿರ್ಮಾಣದ ಅನುದಾನ ಬಂದಿಲ್ಲ ಹೀಗೆ ಹತ್ತಾರು ಸಮಸ್ಯೆಗಳನ್ನು ಸಂಸದೆ ಸುಮಲತಾಗೆ ತಾಲೂಕಿನ ಜನರು ಮನವಿ ಮಾಡಿದರು.

ತರಾಟೆಗೆ ತೆಗೆದುಕೊಂಡ ಸಂಸದೆ: ತಾಲೂಕಿನ ಬೆಳ್ಳೂರು ಕ್ರಾಸ್ ನಲ್ಲಿ ರೈಲ್ವೆ ನಿಲ್ದಾಣವಿದ್ದು, ವಾಹನದ ಸೌಕರ್ಯವಿಲ್ಲ. ಬಸ್ ಹಾಕುವಂತೆ ಶಿಕ್ಷಕ ನಟರಾಜ್ ಮನವಿ ಮಾಡಿದರು. ಈ ವೇಳೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳನ್ನು ಸಂಪರ್ಕ ಮಾಡಲು ಸಂಸದರು ಪ್ರಯತ್ನಿಸಿದಾಗ, ಸ್ಥಳದಲ್ಲಿ ಅಧಿಕಾರಿ ಇಲ್ಲದಿರುವುದು ಸಂಸದರ ಗಮನಕ್ಕೆ ಬಂತು, ತಕ್ಷಣವೇ ಅಧಿಕಾರಿಯನ್ನು ದೂರವಾಣಿ ಮೂಲಕ ಕರೆಸಿ, ರಸ್ತೆ ಸಾರಿಗೆ ಅಧಿಕಾರಿಗೆ ನಾನು ಇನ್ನೂ ಇಲ್ಲೇ ಇರುವಾಗ ನೀವು ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸು ವುದನ್ನು ಬಿಟ್ಟು ಮನೆಗೆ ಹೋದರೆ ಹೇಗೆಂದು ತರಾಟೆಗೆ ತೆಗೆದುಕೊಂಡರು.

ನಾನು ಬಡವ ಜೊತೆಗೆ ಅಂಗವಿಕಲ ನನಗೆ ಸ್ವಂತ ಉದ್ಯೋಗ ಮಾಡಲು ಅರ್ಥಿಕ ಸಹಾಯ ಮಾಡಿ ಯಾವುದಾದರೊಂದು ಯೋಜನೆಯಲ್ಲಿ ನನಗೆ ಸಹಾಯಹಸ್ತ ನೀಡಿ ಎಂದು ಕಾಳೇನಹಳ್ಳಿಯ ಗೋಪಾಲ್ ಮನವಿ ಮಾಡಿದರೇ, ತಾಲೂಕಿನ ತಿರುಗನಹಳ್ಳಿ ಗ್ರಾಮದ ಈರಾಚಾರಿ ನನ್ನ ಮನೆ ಮಳೆಯಿಂದ ಕುಸಿದು ಬಿದ್ದಿದೆ, ನನಗೆ ಇರಲು ಮನೆ ಇಲ್ಲ, ದುರಸ್ಥಿಗೊಳಿಸಲು ಹಣವೂ ಇಲ್ಲ ನಾನೊಬ್ಬ ಬಡವ ನನಗೆ ಆರ್ಥಿಕ ಸಹಾಯ ಮಾಡಿ ಎಂದು ಮನವಿ ಮಾಡಿ ಕಣ್ಣೀರಿಟ್ಟರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದಕ್ಕೆ ಸ್ಪಂದಿಸಿದ ಸಂಸದರು, ಸ್ಥಳದಲ್ಲಿ ಇದ್ದ ತಾಪಂ ಇಓ ಅವರಿಗೆ ಇವರಿಗೆ ಶೀಘ್ರವೇ ಸಹಾಯ ಮಾಡಿ, ಅವರಿಗೆ ಪುನರ್ವಸತಿಗೆ ಅವಕಾಶ ಮಾಡಿ ಎಂದು ಸೂಚನೆ ನೀಡಿದರು. ಪಟ್ಟಣದಲ್ಲಿ ವಾಜಪೇಯಿ ಯೋಜನೆಯಡಿ ಮನೆ ನಿರ್ಮಾಣ ಮಾಡಿದೆ. ಇದುವರೆವಿಗೂ ಕೇಂದ್ರದಿಂದ ಸಹಾಯಧನ ಬಂದಿಲ್ಲ. ಈ ಬಗ್ಗೆ ಗಮನ ಹರಿಸಿ ಎಂದು ಸಂಸದರನ್ನು ಸ್ಥಳೀಯ ಮಹೇಶ್ ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿ ದ ಸಂಸದರು, ಅಗತ್ಯ ದಾಖಲಾತಿಗಳೊಂದಿಗೆ ತಮ್ಮ ಗಮನಕ್ಕೆ ತನ್ನಿ ಮುಂದಿನ ಕ್ರಮವಹಿಸುತ್ತೇನೆ ಸ್ಥಳದಲ್ಲಿದ್ದ ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್ ಗೆ ಸೂಚಿಸಿದರು. ಸಮಸ್ಯೆಗಳನ್ನು ಆಯಾ ಇಲಾಖೆಯ ಅಧಿಕಾರಿಗಳಿಗೆ ನೀಡಿ ಶೀಘ್ರವೇ ಬಗೆ ಹರಿಸಿ, ತಮಗೆ ಮಾಹಿತಿ ನೀಡುವಂತೆ ಸೂಚನೆ ನೀಡಿದರು. ಸಭೆಯಲ್ಲಿ ಪಾಂಡವಪುರ ಉಪವಿಭಾಗಾಧಿ ಕಾರಿ ಶೈಲಜಾ, ತಹಶೀಲ್ದಾರ್ ಎಂ.ವಿ.ರೂಪ, ತಾಪಂ ಇಒ ಅನಂತರಾಜು ಹಾಜರಿದ್ದರು.

ಅಕ್ಟೋಬರ್ 12ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ;

Follow Us:
Download App:
  • android
  • ios