ನಾಗಮಂಗಲ [ನ.11] : ಮೆಡಿಕಲ್ ಕಾಲೇಜುಗಳನ್ನು ಕಡಲೇಕಾಯಿ ಅಂಗಡಿಗಳೆಂದು ಭಾವಿಸಿಕೊಂಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಹೋದಲ್ಲೆಲ್ಲಾ ಮೆಡಿಕಲ್ ಕಾಲೇಜು ನೀಡುವ ಭರವಸೆ ಕೊಟ್ಟು ಬರುತ್ತಿದ್ದಾರೆ ಎಂದು ಶಾಸಕ ಸುರೇಶ್ ಗೌಡ ವ್ಯಂಗ್ಯವಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿ ಯೂರಪ್ಪನವರು ಕೆ.ಆರ್.ಪೇಟೆಗೆ ಮೆಡಿಕಲ್ ಕಾಲೇಜು ನೀಡುವ ಭರವಸೆ ನೀಡಿರುವುದಕ್ಕೆ ಈ ರೀತಿಯಾಗಿ ಪ್ರತಿಕ್ರಿಯಿಸಿದರು. 

ಸಿಎಂ ಭರವಸೆ ಕೊಡುವುದನ್ನು ನೋಡಿದರೆ ಕಂಡ ಕಂಡಲೆಲ್ಲಾ ತೆರೆಯುವ ಕಡಲೇಕಾಯಿ ಅಂಗಡಿಯಷ್ಟು ಸುಲಭದಲ್ಲಿ ಮೆಡಿಕಲ್ ಕಾಲೇಜು ತೆರೆಯಬಹುದು ಎಂದುಕೊಂಡಿರಬಹುದು ಎಂದಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈಗಾಗಲೇ ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಸಿಎಂ ಶಂಕು ಸ್ಥಾಪನೆ ಮಾಡಿದ್ದಾರೆ. ಇನ್ನೊಂದೆಡೆ ಕೆ.ಆರ್ ಪೇಟೆ ತೆರಳಿದ್ದಾಗ ನಾರಾಯಣಗೌಡ ಕ್ಷೇತ್ರಕ್ಕೂ ಮೆಡಿಕಲ್ ಕಾಲೇಜು ನೀಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ. 

ಇನ್ನು ರಾಮನಗರದ ಕುದೂರಿನಲ್ಲಿ ಶಿವಕುಮಾರಸ್ವಾಮೀಜಿಗಳ ಮೂರ್ತಿ ನಿರ್ಮಾಣಕ್ಕೆ ಶಂಕಿ ಸ್ಥಾಪನೆ ವೇಳೆಯೂ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಸಮಾಧಾನ ಪಡಿಸುವ ನಿಟ್ಟಿನಲ್ಲಿ ಕನಕಪುರ ಕ್ಷೇತ್ರಕ್ಕೆ ಮೆಡಿಕಲ್ ಕಾಲೇಜು ನಿರ್ಮಾಣದ ಭರವಸೆ ನೀಡಿದ್ದರು ಸಿಎಂ ಬಿ.ಎಸ್.ಯಡಿಯೂರಪ್ಪ. 

ಇದರಿಂದ ಇದೀಗ ಶಾಸಕ ಸುರೇಶ್ ಗೌಡ ಸಿಎಂ ಯಡಿಯೂರಪ್ಪ ಬಗ್ಗೆ ವ್ಯಂಗ್ಯವಾಡಿದ್ದಾರೆ.