Asianet Suvarna News Asianet Suvarna News

ಮಂಡ್ಯ ರಾಜಕೀಯದಲ್ಲಿ ಭಿನ್ನರಾಗ : ಸಿಎಂ ನೇಮಕದ ವಿರುದ್ಧ ಅಸಮಾಧಾನ

ಮಂಡ್ಯ ರಾಜಕೀದಲ್ಲಿ ಈಗ ಭಿನ್ನರಾಗ ಕೇಳಿ ಬಂದಿದೆ. ಸಿಎಂ ನೇಮಕದ ಬಗ್ಗೆ ಸ್ವ ಪಕ್ಷೀಯರಿಂದಲೇ ಅಸಮಾಧಾನ ಹೊರಬಿದ್ದಿದೆ.

Mandya BJP Leaders Unhappy over CM Bs Yediyurappa
Author
Bengaluru, First Published Nov 2, 2019, 2:26 PM IST

ಮಂಡ್ಯ [ನ.02] : ಬಳ್ಳಾರಿ ಬುಡಾ ಅಧ್ಯಕ್ಷರ ನೇಮಕ ವಿವಾದದ ಬೆನ್ನಲ್ಲೇ ಇದೀಗ ಮಂಡ್ಯ ಮೂಡಾ ಅಧ್ಯಕ್ಷರ ನೇಮಕದ ಬಗ್ಗೆ ವಿವಾದ ಭುಗಿಲೆದ್ದಿದೆ. 

"

 ಅನರ್ಹ ಶಾಸಕ ನಾರಾಯಣ ಗೌಡ ಬೆಂಬಲಿಗರಾಗಿರುವ ಶ್ರೀನಿವಾಸ್ ಅವರನ್ನು ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೆಂದು ಸಿಎಂ ಯಡಿಯೂರಪ್ಪ ಆದೇಶ ನೀಡಿದ್ದಾರೆ. 

ಮಂಡ್ಯದ ಮೂಡಾ ಅಧ್ಯಕ್ಷರಾಗಿ ಸಿಎಂ ಬಿ ಎಸ್ ಯಡಿಯೂರಪ್ಪ, ಕೆ.ಶ್ರೀನಿವಾಸ್ ಅವರನ್ನು ನೇಮಕ ಮಾಡಿದ ಹಿನ್ನೆಲೆ ಈ ನೇಮಕಕ್ಕೆ ಮೂಲ ಬಿಜೆಪಿಗರಿಂದ ವಿರೋಧ ವ್ಯಕ್ತವಾಗಿದೆ. 

ಉಪಚುನಾವಣೆಗೆ ಸುಮಲತಾ ಬೆಂಬಲ ಯಾರಿಗೆ ? : ಸಂಸದೆ ಮಾಸ್ಟರ್ ಪ್ಲಾನ್...

ಕೆ.ಆರ್.ಪೇಟೆ ಕಾರ್ಯಕರ್ತರಿಗೂ ಮಂಡ್ಯಕ್ಕೂ ಏನು ಸಂಬಂಧ.  ಹೊರಗಿನವರಿಗೆ ಮಣೆ ಹಾಕಿದ್ದೇಕೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಸ್ವ ಪಕ್ಷದ ವಿರುದ್ದ ಮಂಡ್ಯ ಬಿಜೆಪಿ ನಗರ ಸಭಾಧ್ಯಕ್ಷ ಅರವಿಂದ್ ಗುಡುಗಿದ್ದು, ಅನರ್ಹ ಶಾಸಕರಿಗೆ ಸಿಎಂ ಅತಿಯಾಗಿ ತಲೆಬಾಗುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದ್ದಾರೆ.

ನವೆಂಬರ್ 2ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Follow Us:
Download App:
  • android
  • ios