ಮನೆಗೆ ಆಸರೆಯಾಗಿದ್ದ ಮಗ ದುಷ್ಕರ್ಮಿಗಳಿಗೆ ಬಲಿ, ಅನ್ನಾಹಾರ ಬಿಟ್ಟ ಸಾಕು ನಾಯಿ..!
ಪುಟ್ಟದೊಂದು ಹೊಟೇಲ್ ಮಾಡಿ ಜನರ ಹೊಟ್ಟೆ ತುಂಬಿಸುತ್ತಾ, ತನ್ನ ಹೊಟ್ಟೆ ಪಾಡನ್ನೂ ನೋಡಿಕೊಳ್ಳುತ್ತಿದ್ದ ಮಂಡ್ಯದ ಯುವಕನೊಬ್ಬ ದಾರುಣ ಅಂತ್ಯ ಕಂಡಿದ್ದಾನೆ. ಮನೆಗೆ ಆಸ್ರೆಯಾಗಿದ್ದ ಮಗ ಸಾವನ್ನಪ್ಪಿ ಅನಾರೋಗ್ಯ ಪೀಡಿತ ತಂದೆ ಇಳಿ ವಯಸ್ಸಿನಲ್ಲಿ ಅನಾಥರಾಗಿದ್ದಾರೆ.
ಮಂಡ್ಯ(ಅ.22): ಎರಡು ದಿನಗಳ ಹಿಂದೆ ಐವರು ದುಷ್ಕರ್ಮಿಗಳಿಂದ ನಡು ರಸ್ತೆಯಲ್ಲಿ ಭೀಕರವಾಗಿ ಕೊಲೆಯಾದ ಭಾರತೀನಗರ ಮಲ್ಲಹಳ್ಳಿ ಬಡಾವಣೆಯ ನಿವಾಸಿ ನವೀನ್ ಕುಟುಂಬ ಇಂದು ಬೀದಿಗೆ ಬಂದಿದೆ. ಅನಾರೋಗ್ಯ ಪೀಡಿರಾಗಿರುವ ನವೀನ್ ವಯೋವೃದ್ಧ ತಂದೆ ಇಂದು ಅನಾಥರಾಗಿದ್ದಾರೆ.
ತನ್ನ ಹೊಟ್ಟೆಪಾಡಿಗಾಗಿ ಇತರರ ಹಸಿವು ನೀಗಿಸಲು ಹೋಟೆಲ್ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದ ನವೀನ್ ಕೊಲೆಯಾದ ನಂತರ ಆತನ ತಂದೆ ಪಾಡು ಹೇಳತೀರದ್ದಾಗಿದೆ. ಮೆಳ್ಳಹಳ್ಳಿ ಗ್ರಾಮದ ಅವಿವಾಹಿತ ನವೀನ್ ಜೀವನ ನಿರ್ವಹಣೆಗೆ ಸಣ್ಣ ಹೊಟೇಲ… ನಡೆಸುತ್ತಿದ್ದ. ವರ್ಷಗಳ ಹಿಂದೆ ತಾಯಿಯನ್ನು ಕಳೆದುಕೊಂಡಿದ್ದ.
ಬಂಟ್ವಾಳದ ಹರೀಶ್ ಪೂಜಾರಿ ಕೊಲೆ ಸಾಕ್ಷಿಗೆ ಜೀವ ಬೆದರಿಕೆ..!
ಸಹೋದರ ಮತ್ತು ಸಹೋದರಿಯಿಂದ ದೂರ ಉಳಿದಿರುವ ನವೀನ್ ತಂದೆಯನ್ನು ಸಾಕುವ ಹೊಣೆ ಹೊತ್ತಿದ್ದ. ಮದುವೆಯಾಗಲು ಹುಡುಗಿಯ ಹುಡುಕಾಟದಲ್ಲೂ ಇದ್ದ. ಹೀಗಾಗಿ ತನ್ನ ವಯೋವೃದ್ಧ ತಂದೆಯನ್ನು ನೋಡಿಕೊಳ್ಳುವ ಜವಾಬ್ದಾರಿ ನಿರ್ವಹಣೆ ಮಾಡುತ್ತಿದ್ದ. ಮನೆಯಿಂದ ಒಂದೆರಡು ಕಿ.ಮೀ ದೂರದಲ್ಲಿರುವ ಈತನ ಹೊಟೇಲ… ನೂರಾರು ಮಂದಿಯ ಹಸಿವನ್ನು ತಣಿಸುತ್ತಿತ್ತು. ಆ ಕಾರಣಕ್ಕಾಗಿಯೇ ಹೊಟೇಲ್ ನವೀನ್ ಎಂದೇ ಫೇಮಸ್ ಆಗಿದ್ದ.
ಆದರೆ ಆತನನ್ನು ಭೀಕರವಾಗಿ ಕೊಂದ ಹಂತಕರ ಜತೆ ಒಮ್ಮೆ ನವೀನ ಜಗಳವಾಡಿ ಒಬ್ಬನ ಮೇಲೆ ಹಲ್ಲೆ ನಡೆಸಿದ್ದ. ಬಳಿಕ ಅವರೊಟ್ಟಿಗೆಯೇ ಸಖ್ಯ ಬೆಳೆಸಿದ್ದ. ಪ್ರಾಥಮಿಕ ತನಿಖೆಗಳ ಪ್ರಕಾರ ನವೀನನ್ನು ಕೊಂದ ಐವರೂ ವಿದ್ಯಾಭ್ಯಾಸವನ್ನು ಅರ್ಧಕ್ಕೇ ಮೊಟಕುಗೊಳಿಸಿದವರು. ನವೀನ್ ಸಾಲದ್ದಕ್ಕೆ ಮೈತುಂಬಾ ಸಾಲವನ್ನೂ ಮಾಡಿಕೊಂಡಿದ್ದಾರೆ. ಅಂತಹವರ ಜೊತೆ ಒಡನಾಟ ಇರಿಸಿಕೊಂಡಿದ್ದು, ನವೀನನಿಗೆ ಮುಳುವಾಯಿತು ಎನ್ನುತ್ತಾರೆ ಪೊಲೀಸರು.
ಮಂಡ್ಯ: ಕಟ್ಟಡಗಳ ದುರಸ್ತಿ ಹೆಸರಲ್ಲಿ ಹಣ ಲೂಟಿ
ನವೀನನ ಸಹೋದರ ಈಗಾಗಲೇ ಇವರಿಂದ ದೂರವಾಗಿದ್ದಾರೆ. ಕುಟುಂಬದೊಂದಿಗೆ ಮದ್ದೂರಿನಲ್ಲಿ ನೆಲೆಸಿ ಸಣ್ಣಪುಟ್ಟವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಸಹೋದರಿಯನ್ನು ಕೊಳ್ಳೇಗಾಲಕ್ಕೆ ವಿವಾಹ ಮಾಡಿಕೊಡಲಾಗಿದೆ. ಈತನ ತಂದೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ.
ಅನ್ನನೀರು ಬಿಟ್ಟನಾಯಿ:
ನವೀನ್ ಮನೆಯ ಮುಂದೆ ಅವನು ಸಾಕಿದ ಮುದ್ದಿನ ನಾಯಿ ಅವನಿಗಾಗಿ ಕಾಯುತ್ತಾ ಅನ್ನ ತಿನ್ನದೆ ಸೊರಗುತ್ತಿದೆ. ಇದನ್ನು ಕಂಡ ಸ್ಥಳಿಯರ ಮನ ಕಲಕುತ್ತಿದೆ.
ರೌಡಿಗಳ ನಿಗ್ರಹಕ್ಕೆ ಆಗ್ರಹ:
ಮಳವಳ್ಳಿ ಉಪ ವಿಭಾಗದ ವ್ಯಾಪ್ತಿಯಲ್ಲಿ ಪುಡಿ ರೌಡಿಗಳ ಉಪಟಳ ಹೆಚ್ಚಾಗಿದೆ. ಹಾಡಹಗಲೇ ಕೊಲೆಗಳಾಗುತ್ತಿವೆ. ಇತ್ತೀಚಿಗೆ ಮದ್ದೂರಿನಲ್ಲಿ ಜಾ.ದಳ ಮುಖಂಡ ಹಾಗೂ ಮಳವಳ್ಳಿ ತಾಲೂಕಿನ ಹಲಗೂರಿನಲ್ಲಿ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವಕನನ್ನು ಹಡಹಗಲೇ ಹತ್ಯೆ ಮಾಡಲಾಗಿತ್ತು.
ಜೊತೆಗೆ ಭಾರತೀನಗರದಲ್ಲಿ ಇತ್ತೀಚಿಗೆ ಮಂಡ್ಯ ರಸ್ತೆಯಲ್ಲಿ ಪುಡಿ ರೌಡಿಗಳ ಹೊಡೆದಾಟವೂ ನಡೆದಿತ್ತು. ಈ ಘಟನೆಗಳು ಮಾಸುವ ಮುನ್ನವೇ ಮತ್ತೊಂದು ಕೊಲೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಪೊಲೀಸರು ರೌಡಿಗಳನ್ನು ಮಟ್ಟಹಾಕಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮಂಡ್ಯ: ಒಂದು ಲವ್ ಸ್ಟೋರಿ.. ಮೂರು ಸಾವು...!