ಬೆಂಗಳೂರು(ಅ.29): ಜೆಡಿಎಸ್‌ನಿಂದ ನಮಗೇನೂ ಲಾಭವಿಲ್ಲ. ಜೆಡಿಎಸ್‌ ನಾಯಕರೇ ಡಿ.ಕೆ.ಶಿವಕುಮಾರ್‌ ಅವರಿಂದ ಲಾಭ ಪಡೆಯಲು ಪ್ರಯತ್ನಿಸುತ್ತಿರಬಹುದು ಎಂದು ಮಾಜಿ ಸಚಿವ ಚೆಲುವರಾಯಸ್ವಾಮಿ ವ್ಯಂಗ್ಯವಾಡಿದ್ದಾರೆ.

ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿದ್ದ ಡಿ.ಕೆ.ಶಿವಕುಮಾರ್‌ ಅವರು ಜಾಮೀನು ಪಡೆದು ದೇವನಹಳ್ಳಿ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಮೆರವಣಿಗೆ ಮೂಲಕ ಬರುವ ವೇಳೆ ಜೆಡಿಎಸ್‌ ಬಾವುಟ ಹಿಡಿದಿದ್ದ ವಿಡಿಯೋ ವೈರಲ್‌ ಆಗಿತ್ತು. ಸೋಮವಾರ ಈ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಚೆಲುವರಾಯಸ್ವಾಮಿ, ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಅಥವಾ ಡಿ.ಕೆ.ಶಿವಕುಮಾರ್‌ ಅವರಿಗೆ ಏನೂ ಲಾಭವಿಲ್ಲ. ಆದರೆ, ಜೆಡಿಎಸ್‌ ನಾಯಕರು ಇವರಿಂದ ಲಾಭ ಪ್ರಯತ್ನ ಮಾಡುತ್ತಿರಬಹುದು ಎಂದಿದ್ದಾರೆ.

ಗದ್ದುಗೆ ಮುಂದೆ ಶಕ್ತಿಗಾಗಿ ಪ್ರಾರ್ಥಿಸಿದ ಡಿಕೆಶಿ

ಜೆಡಿಎಸ್‌ ನಾಯಕರು ಬಿಜೆಪಿಯವರ ಸಹವಾಸ ಬೇಡ, ಅವರಿಂದ ತೊಂದರೆ ಆಗಿದೆ ಎನ್ನುತ್ತಾರೆ. ಆದರೆ, ಇತ್ತೀಚೆಗೆ ಈ ಸರ್ಕಾರ ಬೀಳುವುದಕ್ಕೆ ಬಿಡುವುದಿಲ್ಲ ಅಂದಿದ್ದಾರೆ. ಹೀಗೆ ಅಲ್ಲೊಂದು ಇಲ್ಲೊಂದು ಮಾತನಾಡುತ್ತಾರೆ. ಡಿ.ಕೆ.ಶಿವಕುಮಾರ್‌ ಪ್ರಕರಣದಲ್ಲಿ ಜೆಡಿಎಸ್‌ ಸ್ಪಂದಿಸಿರುವುದರಿಂದ ನಮಗೇನೂ ಉಪಯೋಗವಿಲ್ಲ. ಜೆಡಿಎಸ್‌ ನಾಯಕರೇ ಅದನ್ನು ಉಪಯೋಗಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆಂಬ ಚರ್ಚೆ ನಮ್ಮ ಕಾರ್ಯಕರ್ತರ ನಡುವೆ ಆಗಿರುವುದು ಬಿಟ್ಟರೆ ಇದ್ಯಾವುದೂ ದೊಡ್ಡ ವಿಚಾರವಲ್ಲ ಎಂದಿದ್ದಾರೆ.

ಡಿ.ಕೆ.ಶಿವಕುಮಾರ್‌ ಅವರಿಗೆ ಕುಮಾರಸ್ವಾಮಿ ಮತ್ತು ದೇವೇಗೌಡ ಅವರೊಂದಿಗೆ ವೈಯಕ್ತಿಕ ಸಂಬಂಧ ಇರಬಾರದು ಎಂತಲ್ಲ. ನನಗೂ ದೇವೇಗೌಡರ ಬಗ್ಗೆ ಅಭಿಮಾನ ಇದೆ. ಎಲ್ಲಾದರು ದೇವೇಗೌಡ ಅವರು ಸಿಕ್ಕಿದರೆ ಕಾರಿನಿಂದ ಇಳಿದು ವಿಶ್ವಾಸದಿಂದ ಮಾತನಾಡಿಸುತ್ತೇನೆ. ಈ ಹಿಂದೆ ಕುಮಾರಸ್ವಾಮಿ ಅವರು ಸೇಹಿತರಾಗ್ದಿರು. ಈಗ ಅದು ಇದು ಮಾತನಾಡುತ್ತಾರೆ. ಆದ್ದರಿಂದ ದೂರು ಇರುತ್ತೇನೆ. ದೇವೇಗೌಡ ಅವರಿಂದ ನಾವೇನು ದೂರ ಆಗಿಲ್ಲ. ಅಂತೆಯೇ ರೇವಣ್ಣ ಅವರು ಸಿಕ್ಕಿದರು ಮಾತನಾಡುತ್ತೇವೆ ಎಂದಿದ್ದಾರೆ.

ದೇವಸ್ಥಾನದಲ್ಲಿ ಗರಂ ಆದ ಡಿಕೆಶಿ ಪುತ್ರಿ! ಐಶ್ವರ್ಯಾಗೆ ಏನಾಯ್ತ್ರಿ?

ಶಿವಕುಮಾರ್‌ ಮತ್ತು ಕುಮಾರಸ್ವಾಮಿ ಅವರು ಮೈತ್ರಿ ಸರ್ಕಾರ ಮಾಡಿದಾಗ ಜತೆಗೆ ಇದ್ದವರು. ವಿಶ್ವಾಸ ವೈಯಕ್ತಿಕವಾಗಿ ಮುಂದುವರೆಯಲು ಯಾವುದೇ ಸಮಸ್ಯೆ ಇಲ್ಲ. ರಾಜಕಾರಣದ ವಿಷಯ ಬಂದಾಗ ನಾವೆಲ್ಲ ಕಾಂಗ್ರೆಸ್‌, ಅವರು ಜನತಾದಳ. ಅದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದರು.