ಮಂಡ್ಯ [ನ.04]: ಕಾಲುಜಾರಿ ನಾಲೆಗೆ ಬಿದ್ದು ಉಪನ್ಯಾಸಕರೋರ್ವರು ಸಾವಿಗೀಡಾದ ಘಟನೆ ಮಂಡ್ಯದಲ್ಲಿ ನಡೆದಿದೆ. 

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಭೈರಾಪುರ ಗ್ರಾಮದಲ್ಲಿ, ಮದ್ದೂರು ತಾಲೂಕಿನ ಆನೆದೊಡ್ಡಿಯ ತುಳಸಿ ಪ್ರಸಾದ್ [32] ನಾಲೆಗೆ ಬಿದ್ದು ಸಾವಿಗೀಡಾಗಿದ್ದಾರೆ. 

ಮದ್ದೂರಿನ ಬೆಸಗರಹಳ್ಳಿಯ ಮಾನಸ ವಿದ್ಯಾಸಂಸ್ಥೆಯಲ್ಲಿ ಉಪನ್ಯಾಸಕರಾಗಿ ತುಳಸಿ ಪ್ರಸಾದ್ ಕಾರ್ಯ ನಿರ್ವಹಿಸುತ್ತಿದ್ದರು. 

ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತನ್ನ ಸಹೋದರಿ ಮನೆಗೆಂದು ಭೈರಾಪುರಕ್ಕೆ ಆಗಮಿಸಿದ್ದು ಈ ವೇಳೆ  ಸಾಹುಕಾರ ಚೆನ್ನಯ್ಯ ನಾಲೆಗೆ ತೆರಳಿದ್ದು ಈ ವೇಳೆ ಕಾಲು ಜಾರಿ ಬಿದ್ದು ಕೊಚ್ಚಿ ಹೋಗಿದ್ದರು. ಬಳಿಕ ಮೃತದೇಹವನ್ನು ನಾಲೆಯಿಂದ ಹೊರ ತೆಗೆಯಲಾಗಿದೆ.

ಈ ಸಂಬಂಧ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.