ಫ್ರಿಡ್ಜ್‌ ಇಲ್ದಿದ್ರೂ ತಂಪಾದ ನೀರು ಕುಡಿಯೋಕೆ ಹಳ್ಳಿಗರು ಎಂಥಾ ಸೂಪರ್ ಐಡಿಯಾ ಮಾಡಿದ್ದಾರೆ ನೋಡಿ!

ದೇಶಾದ್ಯಂತ ಬಿಸಿಲಿನ ತಾಪ ಹೆಚ್ಚಾಗಿದೆ. ಈ ಬಿಸಿಲಿನ ತಾಪದಲ್ಲಿ ಜನರು ತಂಪು ಕುಡಿಯಲು ಇಷ್ಟಪಡುತ್ತಾರೆ. ಆದ್ರೆ ಕೋಲ್ಡ್‌ ವಾಟರ್‌ ಕುಡಿಯೋಕೆ ಫ್ರಿಡ್ಜ್‌ ಇಲ್ಲದ ಹಳ್ಳಿಗರಯ ತಂಪಾದ ನೀರು ಕುಡಿಯೋಕೆ ಎಂಥಾ ಐಡಿಯಾ ಮಾಡಿದ್ದಾರೆ ನೋಡಿ. ಇದು ಮಣ್ಣಿನ ಮಡಕೆ ಬಳಸೋ ಟೆಕ್ನಿಕ್ ಅಲ್ಲ..

Woman Shows Village style Technique To Cool Water In Summer, viral video Vin

ದೇಶಾದ್ಯಂತ ಬಿಸಿಲಿನ ತಾಪ ಹೆಚ್ಚಾಗಿದೆ. ದೇಶದ ಕೆಲವೆಡೆ ತಾಪಮಾನ ಈಗಾಗಲೇ 45 ಡಿಗ್ರಿ ಸೆಲ್ಸಿಯಸ್‌ ತಲುಪಿದೆ. ಸುಡುವ ಬಿಸಿಲಿಗೆ ಜನರು ಮನೆಯಿಂದ ಹೊರಬರೋಕೆ ಹಿಂದೇಟು ಹಾಕುವಂತಾಗಿದೆ. ಈ ಬಿಸಿಲಿನ ತಾಪದಲ್ಲಿ ಜನರು ತಂಪು ಕುಡಿಯಲು ಇಷ್ಟಪಡುತ್ತಾರೆ. ಎಷ್ಟು ಕೋಲ್ಡ್‌ ವಾಟರ್‌, ಜ್ಯೂಸ್‌ ಕುಡಿದ್ರೂ ಸಾಕಾಗ್ತಿಲ್ಲ. ತಣ್ಣಗಾದ ಕುಡಿಯುವ ನೀರನ್ನು ಪಡೆಯಲು ಸಾಮಾನ್ಯವಾಗಿ ಎಲ್ಲರೂ ರೆಫ್ರಿಜರೇಟರ್‌ನ್ನು ಬಳಸುತ್ತಾರೆ. ಆದರೆ ಬಡವರಿಗೆ ಫ್ರಿಡ್ಜ್‌ನ್ನು ಕೊಳ್ಳುವ ಶಕ್ತಿಯಿರುವುದಿಲ್ಲ ಲಕ್ಷಾಂತರ ಜನರು ರೆಫ್ರಿಜರೇಟರ್‌ಗಳನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ. ಹೀಗಿರುವ ಹಳ್ಳಿಯ ಜನರು ಸಾಮಾನ್ಯವಾಗಿ ತಣ್ಣೀರು ಮಾಡಿಕೊಳ್ಳಲು ಬೇರೆ ಬೇರೆ ವಿಧಾನಗಳನ್ನು ಅನ್ವಯಿಸುತ್ತಾರೆ. ಅಂಥಾ ದೇಸಿ ವಿಧಾನವೊಂದು ಇತ್ತೀಚಿಗೆ Instagramನಲ್ಲಿ ವೈರಲ್ ಆಗಿದೆ.

ಯಾವುದೇ ರೆಫ್ರಿಜರೇಟರ್ ಬಳಸದೆ ತಣ್ಣೀರು ಹೇಗೆ ಪಡೆಯಬಹುದು ಎಂಬುದನ್ನು ಹಳ್ಳಿಯ ಮಹಿಳೆ ವೀಡಿಯೊದಲ್ಲಿ ತೋರಿಸಿದ್ದಾರೆ. ವೀಡಿಯೋಗೆ 'ದೇಸಿ ಫ್ರೀಜ್‌ ಇನ್ ಬಾಟಲ್‌' ಎಂದು ಶೀರ್ಷಿಕೆ ನೀಡಲಾಗಿದೆ. ಈ ವಿಶಿಷ್ಟ ತಂತ್ರವನ್ನು ನೋಡಿದ ನೆಟಿಜನ್‌ಗಳು ಆಶ್ಚರ್ಯಚಕಿತರಾಗಿದ್ದಾರೆ. 

ಎಳನೀರಿನಿಂದ ಡೈರೆಕ್ಟ್ ಆಗಿ ನೀರು ಕುಡಿಲೇಬೇಡಿ, ಕಾರಣ ಇಲ್ಲಿದೆ

ಈ ರೆಫ್ರಿಜರೇಟರ್‌ನ ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ ಇದು ಉಚಿತವಾಗಿದೆ. ಇದು ದೇಶದ ಗ್ರಾಮೀಣ ಭಾಗದ ಜನರು ತಣ್ಣೀರು ಪಡೆಯಲು ಅನುಸರಿಸುವ ಜನಪ್ರಿಯ ತಂತ್ರವಾಗಿದೆ. ವೈರಲ್ ಆಗಿರುವ ವೀಡಿಯೋದಲ್ಲಿ ದಿವ್ಯಾ ಸಿನ್ಹಾ ಎಂಬ ಮಹಿಳೆ ಈ ಬಿಸಿಲಿನ ಶಾಖದಲ್ಲಿ ರೆಫ್ರಿಜರೇಟರ್ ಬಳಸದೆ ಹೇಗೆ ತಣ್ಣೀರು ಪಡೆಯಬಹುದು ಎಂಬುದನ್ನು ವಿವರಿಸಿದ್ದಾರೆ. 

ನೀರನ್ನು ತಂಪಾಗಿಡಲು ಮಣ್ಣಿನ ಮಡಕೆಗಳನ್ನು ಬಳಸುತ್ತಿದ್ದಾರೆ ಎಂದು ನೀವು ಭಾವಿಸಿದರೆ ಅದು ತಪ್ಪು. ಏಕೆಂದರೆ ಮಣ್ಣಿನ ಪಾತ್ರೆಯಲ್ಲಿ ಶೇಖರಿಸಿದ ನೀರು ತಣ್ಣಗಾಗಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ವೀಡಿಯೊದಲ್ಲಿ, ಈ ಜನರು ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರನ್ನು ತುಂಬುತ್ತಾರೆ ಮತ್ತು ಒದ್ದೆಯಾದ ಬಟ್ಟೆಯಿಂದ ಚೆನ್ನಾಗಿ ಸುತ್ತುತ್ತಾರೆ. ಬಾಟಲಿಯನ್ನು ಸುತ್ತಿದ ನಂತರ, ಅವರು ಬಾಟಲಿಯನ್ನು ಮರಕ್ಕೆ ನೇತುಹಾಕುತ್ತಾರೆ. 10ರಿಂದ 15 ನಿಮಿಷಗಳ ನಂತರ ನೋಡಿದಾಗ ನೀರು ತಂಪು ತಂಪಾಗಿರುತ್ತದೆ.

ಬಿಸಿಲಿನಿಂದ ಚರ್ಮ ಟ್ಯಾನ್ ಆಗುತ್ತೇಂತ ಸನ್‌ಸ್ಕ್ರೀನ್ ಯೂಸ್ ಮಾಡ್ತೀರಾ, ಅಪ್ಲೈ ಮಾಡೋ ರೀತಿ ಬಗ್ಗೆಯೂ ಗೊತ್ತಿರ್ಲಿ

ಮಹಿಳೆ ವೀಡಿಯೋದಲ್ಲಿ ಕೊಲಿಂಗ್‌ ವಾಟರ್ ಹಿಂದಿನ ನೈಜ ವಿಜ್ಞಾನವನ್ನು ವಿವರಿಸಿದ್ದಾರೆ. ಒದ್ದೆಯಾದ ಬಟ್ಟೆಯ ಮೂಲಕ ಗಾಳಿಯು ಹಾದುಹೋದಾಗ ನೀರು ತಣ್ಣಗಾಗುತ್ತದೆ. ಸರಿಯಾದ ವಿದ್ಯುತ್ ಸೌಲಭ್ಯಗಳಿಲ್ಲದ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಇದು ಪರಿಣಾಮಕಾರಿ ಮಾರ್ಗವಾಗಿದೆ. ನೆಟ್ಟಿಗರು ಮಹಿಳೆಯ ಈ ಐಡಿಯಾಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

'ತುಂಬಾ ಅದ್ಭುತವಾದ ಐಡಿಯಾ', ಬ್ರಿಲಿಯಂಟ್ ಎಂದೆಲ್ಲಾ ಹೊಗಳಿದ್ದಾರೆ. ಇನ್ನು ಕೆಲವರು ಪ್ಲಾಸ್ಟಿಕ್ ಬಾಟಲ್‌ನಲ್ಲಿ ಹೀಗೆ ನೀರು ಸಂಗ್ರಹಿಸಬೇಡಿ. ಮಣ್ಣಿನ ಮಡಕೆಯ ನೀರನ್ನು ಕುಡಿಯಿರಿ ಎಂದು ಸಲಹೆ ನೀಡಿದ್ದಾರೆ.

 
 
 
 
 
 
 
 
 
 
 
 
 
 
 

A post shared by Divya Sinha (@divyasinha266)

Latest Videos
Follow Us:
Download App:
  • android
  • ios