Photo Rules : ಪಾಸ್ಪೋರ್ಟ್ ಸೈಜ್ ಫೋಟೋ ತೆಗೆಯುವಾಗ ಯಾಕೆ ನಗ್ಬಾರದು?
ಸುಮ್ಮನೆ ಫೋಟೋಕ್ಕೆ ಫೋಸ್ ನೀಡುವಾಗ ಸ್ಮೈಲ್ ಮಾಡುವಂತೆ ನಾವು ಪಾಸ್ಪೋರ್ಟ್ ಫೋಟೋಕ್ಕೆ ಮಾಡೋದಿಲ್ಲ. ಅದನ್ನು ತೆಗೆಯುವ ಮುನ್ನ ಕೆಲ ಸಂಗತಿಯನ್ನು ಗಮನಿಸ್ತೇವೆ. ರೂಲ್ಸ್ ತಪ್ಪಿದ್ರೆ ನಮ್ಮ ದಾಖಲೆ ರಿಜೆಕ್ಟ್ ಆಗುವ ಸಾಧ್ಯತೆ ಇರುತ್ತದೆ. ಹಾಗಾದ್ರೆ ಯಾಕೆ ಈ ಎಲ್ಲ ನಿಯಮ ಅಂತಾ ನಾವು ಹೇಳ್ತೇವೆ.
ಪಾಸ್ಪೋರ್ಟ್ ಸೈಜ್ ಫೋಟೋ ನೀಡುವಾಗ ನಾವು ಅಲರ್ಟ್ ಆಗಿರ್ತೇವೆ. ಎಲ್ಲೋ ತೆಗೆದ, ಯಾವುದೋ ಬ್ಯಾಗ್ ಗ್ರೌಂಡ್ ಇರುವ ಫೋಟೋವನ್ನು ಪಾಸ್ಪೋರ್ಟ್ ಸೈಜ್ ಮಾಡಿ ನೀಡೋದಿಲ್ಲ. ಅದಕ್ಕೆ ಕೆಲವೊಂದು ನಿಯಮಗಳಿವೆ. ಪಾಸ್ಪೋರ್ಟ್ ಸೈಜ್ ಫೋಟೋ ಕ್ಲಿಕ್ಕಿಸುವಾಗ ನಗೋದಿಲ್ಲ. ಹಿನ್ನಲೆ ಕೂಡ ಕ್ಲೀನ್ ಆಗಿರುವಂತೆ ನೋಡಿಕೊಳ್ಳಲಾಗುತ್ತದೆ. ಮುಖ ಹಾಗೂ ಕುತ್ತಿಗೆ ಭಾಗ ಕ್ಲಿಯರ್ ಆಗಿ ಬರುವಂತೆ ಗಮನ ಹರಿಸಲಾಗುತ್ತದೆ. ಫೋಟೋದಲ್ಲಿ ಮುಖ ಹಾಗೂ ದೇಹದ ಅರ್ಧ ಭಾಗ ಮಾತ್ರ ಕಾಣಿಸಬೇಕು. ಹೀಗೆ ಅನೇಕ ನಿಯಮಗಳನ್ನು ಪಾಲಿಸಿ ನಾವು ಪಾಸ್ಪೋರ್ಟ್ ಫೋಟೋ ಪಡೆಯುತ್ತೇವೆ. ಇಷ್ಟಲ್ಲ ನಿಯಮ ಯಾಕೆ ಅಂತ ನೀವು ಕೇಳ್ಬಹುದು. ಪಾಸ್ಪೋರ್ಟ್ ಫೋಟೋವನ್ನು ಅನೇಕ ದಾಖಲೆಗಳಿಗೆ ನಾವು ನೀಡುವ ಕಾರಣ ಈ ಎಲ್ಲ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಪಾಸ್ಪೋರ್ಟ್ ಫೋಟೋ ಕ್ಲಿಕ್ಕಿಸುವ ವೇಳೆ ಈ ಎಲ್ಲ ನಿಯಮ ಪಾಲಿಸೋದು ಏಕೆ ಎಂಬುದರ ಬಗ್ಗೆ ನಾವಿಂದು ಸ್ವಲ್ಪ ಮಾಹಿತಿ ನೀಡ್ತೇವೆ.
ಎಲ್ಲ ದೇಶ (Country) ದಲ್ಲೂ ಇದೆ ಈ ನಿಯಮ : ಬರೀ ಭಾರತ (India) ದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿ ಕೂಡ ದಾಖಲೆಗಳಿಗೆ ನೀಡುವ ಫೋಟೋ ಬಗ್ಗೆ ಒಂದಿಷ್ಟು ನಿಯಮವಿದೆ. ಯಾವುದೇ ಕಾರಣಕ್ಕೂ ದಾಖಲೆಗಳಿಗೆ ನೀಡುವ ಪಾಸ್ಪೋರ್ಟ್ (Passport) ಸೈಜ್ ಫೋಟೋಕ್ಕೆ ನೀವು ಎಕ್ಸ್ಪ್ರೆಶನ್ ನೀಡಬಾರದು. 2009ರಲ್ಲಿ ಫ್ರೆಂಚ್ ನಾಗರಿಕನೊಬ್ಬನ ಪಾಸ್ಪೋರ್ಟ್ ಸೈಜ್ ಫೋಟೋ ತಿರಸ್ಕರಿಸಲ್ಪಟ್ಟಿತ್ತು. ಈ ಫೋಟೋದಲ್ಲಿ ಆತ ಎಕ್ಸ್ಪ್ರೆಶನ್ ನೀಡಿದ್ದೇ ಕಾರಣವಾಗಿತ್ತು. ಆತ ಫೋಟೋದಲ್ಲಿ ಸ್ವಲ್ಪ ನಕ್ಕಿದ್ದ. ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ವ್ಯಕ್ತಿ ಮೇಲ್ಮನವಿ ಸಲ್ಲಿಸಿದ್ರೂ ಯಾವುದೇ ಪ್ರಯೋಜನ ಆಗಿರಲಿಲ್ಲ.
ಪ್ರಪಂಚದ ಈ ಸ್ಥಳಗಳ ರಹಸ್ಯ ಕಂಡು ಹಿಡಿಯೋಕೆ ಯಾರಿಂದಲೂ ಆಗೋಲ್ಲ
ಪಾಸ್ಪೋರ್ಟ್ ಸೈಜ್ ಫೋಟೋದಲ್ಲಿ ನಗಬಾರದು ಏಕೆ ? : ನೀವು ನಗ್ತಿದ್ದರೆ ನಿಮ್ಮ ಫೋಟೋವನ್ನು ಎಡಿಟ್ ಮಾಡೋದು ಸುಲಭ. ಹಾಗೆಯೇ ನಿಮ್ಮ ಮುಖದ ಭಾವ ಅರ್ಥಮಾಡಿಕೊಳ್ಳೋದು ಕಷ್ಟವಾಗುತ್ತದೆ. ಪಾಸ್ಪೋರ್ಟ್ ನಂತ ದಾಖಲೆಗೆ ಬೇಕಾಗುವ ಫೋಟೋದಲ್ಲಿ ಕೆಲವೊಮ್ಮೆ ಮೂಗಿನಿಂದ ಗಲ್ಲದವರೆಗಿನ ಫೋಟೋವನ್ನು ಮಾತ್ರ ತೆಗೆದುಕೊಳ್ಳಲಾಗುತ್ತದೆ. ಒಂದ್ವೇಳೆ ಮೋಸ ನಡೆದ್ರೂ ಮುಖದ ವೈಶಿಷ್ಟ್ಯಗಳ ಸಹಾಯದಿಂದ ಗುರುತು ಪತ್ತೆ ಮಾಡಲಾಗುತ್ತದೆ. ಮುಖದ ಭಾವಕ್ಕೆ ಯಾವುದೋ ಅಡ್ಡಿಯಾಗಬಾರದು ಎನ್ನುವ ಕಾರಣಕ್ಕೆ ನಗದಂತೆ ಸಲಹೆ ನೀಡಲಾಗುತ್ತದೆ. ಹಲ್ಲು ಬಿಟ್ಟು ನಗೋದಿರಲಿ ಮುಗುಳುನಗೆ ಕೂಡ ಇಲ್ಲಿ ನಿಷಿದ್ಧ.
ಬಯೋಮೆಟ್ರಿಕ್ ಫೋಟೋ ತೆಗೆಯುವಾಗಲೂ ಈ ನಿಯಮವನ್ನು ಅನುಸರಿಸಲಾಗುತ್ತದೆ. ಆಗಲೂ ನೀವು ಯಾವುದೇ ಭಾವನೆ ವ್ಯಕ್ತಪಡಿಸುವಂತಿಲ್ಲ. ಪಾಸ್‌ಪೋರ್ಟ್ ಅನ್ನು ಎಚ್ಚರಿಕೆಯಿಂದ ಗಮನಿಸಿದ್ರೆ ತಿಳಿಯುತ್ತೆ, ಅದ್ರಲ್ಲಿ ಕೆಲವು ಗುರುತುಗಳಿರುತ್ತವೆ. ತಂತ್ರಜ್ಞಾನದಲ್ಲಿ (Technology) ಈಗ ಮತ್ತಷ್ಟು ಬದಲಾವಣೆಯಾಗಿದೆ. ನೀವು ಈ ಫೋಟೋಗಳಿಗೆ ಸಣ್ಣ ತಿದ್ದುಪಡಿ (Editing) ಮಾಡಿದ್ರೂ ಅದನ್ನು ಪತ್ತೆ ಮಾಡಬಹುದಾಗಿದೆ. ಈ ಸಾಫ್ಟವೇರ್ ಬಯೋಮೆಟ್ರಿಕ್ ಫೋಟೋವನ್ನು (Software Bio metric Photo) ಸ್ಕ್ಯಾನ್ ಮಾಡುತ್ತದೆ. ಪಾಸ್ಪೋರ್ಟ್ ಫೋಟೋವನ್ನು ನಿಮ್ಮ ಮುಖದೊಂದಿಗೆ ಹೋಲಿಸಲಾಗುತ್ತದೆ. ನೀವು ನಗ್ತಿದ್ದರೆ, ಬಯೋಮೆಟ್ರಿಕ್ ಗೊಂದಲಕ್ಕೊಳಗಾಗುತ್ತವೆ. ನಿಮ್ಮ ಪಾಸ್‌ಪೋರ್ಟ್ ಗಾತ್ರದ ಫೋಟೋ ಎಕ್ಸ್ ಪ್ರೆಶನ್ ಇಲ್ಲದೆ ಇರಲು ಇದೇ ಕಾರಣ.
Unknown Facts: ಹಗಲಿಗಿಂತ ರೈಲು ರಾತ್ರಿ ಹೊತ್ತು ಫಾಸ್ಟ್ ಆಗಿ ಹೋಗೋದ್ಯಾಕೆ?
ಪಾಸ್ಪೋರ್ಟ್ ಸೈಜ್ ಫೋಟೋಕ್ಕೆ ಸಂಬಂಧಿಸಿದ ಇನ್ನಷ್ಟು ನಿಯಮ ಏನು? :
• ಬಣ್ಣದ ಫೋಟೋ ಆಗಿರಬೇಕು.
• ಬ್ಯಾಗ್ ಗ್ರೌಂಡ್ ಬಿಳಿ ಅಥವಾ ಒಂದೇ ಬಣ್ಣದಲ್ಲಿ ಇರಬೇಕು.
• 6 ತಿಂಗಳಿಗಿಂತ ಹಳೆಯ ಫೋಟೋ ಮಾನ್ಯವಾಗುವುದಿಲ್ಲ.
• ಫೋಟೋ ಹಾಳಾಗಿರಬಾರದು.
• ಕಂಪ್ಯೂಟರ್ ಸಾಫ್ಟ್ ವೇರ್‌ನಿಂದ ತಯಾರಿಸಿದ ಫೋಟೋ ಆಗಿರಬಾರದು.
• ಹೆಚ್ಚು ಫ್ಲಾಶ್ ಮಾಡಿದ ಫೋಟೋ ಆಗಿರಬಾರದು.
• ಕನ್ನಡಕ ಹಾಕಿಕೊಂಡು ಫೋಟೋ ತೆಗೆದಿದ್ದರೆ ಅದ್ರಲ್ಲಿ ರಿಪ್ಲೇಶನ್ ಇರದಂತೆ ನೋಡಿಕೊಳ್ಳಬೇಕು.