Asianet Suvarna News Asianet Suvarna News

ಹೆಂಡತಿ ತವರಿಗೆ ಹೊರಟರೆ ಪತಿಗೇಕೆ ಮುನಿಸು?

ಪಾಂಪತ್ಯದಲ್ಲಿ ಪತಿ ಪತ್ನಿಯರ ನಡುವ ಮುನಿಸು ಸಹಜ. ಆದರೆ, ಇದು ಯಾವಾಗ ವ್ಯತಿರಿಕ್ತ ಪರಿಣಾಮ ಬೀರುತ್ತದ ಎಂದರೆ ಹೆಂಡತಿ ತವರಿಗೆ ಹೊರಟಾಗ. ಅದೆಷ್ಟೇ ಕ್ಲಿಷ್ಟ ಸಮಸ್ಯೆಯಾದಲೂ ಪತಿ-ಪತ್ನಿ ಜತೆಗಿದ್ದು ಸಮಸ್ಯೆ ಬಗೆಹರಿಸಲು ಯತ್ನಿಸದರೆ ದಾಂಪತ್ಯ ಮಧುರವಾಗುತ್ತದೆ.

Why husband does not like wife going her mothers place
Author
Bengaluru, First Published Sep 11, 2018, 6:11 PM IST

̈ದಂಪತಿ ಮಧ್ಯ ಪುಟಿದೇಳುವ ಸಮಸ್ಯೆಗಳಲ್ಲಿ ಹೆಂಡತಿ ತವರಿಗೆ ಹೋಗುವುದೂ ಒಂದು. ಪದೇಪದೆ ತಾಯಿ ಮನೆಗೆ ಹೋಗ್ತಾಳೆ ಎನ್ನುವ ಕಂಪ್ಲೇಂಟ್. ತವರಿಗೆ ತೆರಳಿದ ಹೆಣ್ಣಿಗೆ ಅದೇನೋ ಸುಖ. ಹಾಗಂತ ಗಂಡನ ನೆನಪು ಹಗಲಿರುಳೂ ಹಿಂಡುತ್ತಿರುತ್ತದೆ. ಆ ಪ್ರೇಮದ ಪರಿ ಅರ್ಥವಾಗದು.

ಅಭಿವ್ಯಕ್ತಗೊಳಿಸಲೂ ಹೋಗುವುದಿಲ್ಲ. ಹೆಂಡತಿಯನ್ನು ತವರಿಗೆ ಕಳುಹಿಸಿದ ಗಂಡನಿಗೆ ಬೇಡದ ತಳಮಳ, ಮುನಿಸ,. ಕಾಡುವ ಅಭದ್ರತೆ. ಈ ಮಧ್ಯ ಸುಖಾ ಸುಮ್ಮನೆ ಜಗಳ. ಹೆಣ್ಣು ತಣ್ಣಗಾಗುತ್ತಾಳೆ.

ದಂಪತಿ ಮಧ್ಯ ಪುಟಿದೇಳುವ ಸಮಸ್ಯೆಗಳಲ್ಲಿ ಹೆಂಡತಿ ತವರಿಗೆ ಹೋಗುವುದೂ ಒಂದು. ಪದೇಪದೆ ತಾಯಿ ಮನೆಗೆ ಹೋಗ್ತಾಳೆ ಎನ್ನುವ ಕಂಪ್ಲೇಂಟ್. ಅಪರೂಪಕ್ಕೊಮ್ಮೆ ಹೋದರೂ ‘ನೀನು ಬದಲಾಗಿದಿ’ ಎನ್ನುವ ಹುಸಿ ಆರೋಪ. ಜವಾಬ್ದಾರಿಗಳಿಲ್ಲದೇ ಕೆಲ ಕಾಲ ತವರಲ್ಲಿ ನೆಮ್ಮದಿಯಾಗಿದ್ದು ಬರುತ್ತಾಳೆ ಹೆಣ್ಣು. ಗಂಡನ ಮನೆಗೆ ಬಂದೊಡನೆ ತಲೆ ಮೇಲೆ ಹತ್ತಿ ಕೂರುವ ಸಾವಿರಾರು ಜವಾಬ್ದಾರಿಗಳು ಅವಳ ವರ್ತನೆ ಮೇಲೂ ಪ್ರಭಾವ ಬೀರುತ್ತವೆ. ಈ ಅಂಜಿಕೆಗಳಿಗೆ ಹೆದರಿ ತವರಿಗೇ ಹೋಗದಿದ್ದರೆ ಹೇಗೆ? ಹೆಣ್ಣಾಗಿ ಎದುರಿಸಬೇಕಾದ ನೂರಾರು ಸವಾಲುಗಳಲ್ಲಿ ತವರಿನದು ಮಗದೊಂ ದು.ಎಲ್ಲವಂತೆ ಇದನ್ನೂ ತವರು- ಮಗಳು ಸೂಕ್ಷ್ಮವಾಗಿಯೇ ನಿಭಾಯಿಸಬೇಕು.

ಮೂಗು ತೋರಿಸೋ ದ್ಯಾಕೆ?
- ‘ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ’ ಎಂದು ಸದಾ ಮೂರನೆಯವಳಂತೆ ನೋಡುವ ತವರು ಮಗಳನ್ನು ಮದುವೆ ಮಾಡಿ ಕೊಟ್ಟ ಮೇಲೆ ವಿಶೇಷ ಮಮಕಾರ ಉಕ್ಕೇರುತ್ತೆ. ‘ಅಯ್ಯೋ ಗಿಣಿ ಹಂಗೆ ಸಾಕಿ, ಗಿಡುಗನ ಕೈಲಿ ಕೊಟ್ವಿ’ ಎನ್ನುವ ಅರ್ಥ ಬರೋ ಮಾತುಗಳು ದಾಂಪತ್ಯದಲ್ಲಿ ಹುಳಿ ಹಿಂಡುತ್ತೆ.  ಮದುವೆಯಾಗಿ, ಮಗುವಾ ದರೂ ಮಗಳಿಗೆ ಕಷ್ಟ. ಬಾಣಂತನಕ್ಕೆ ಬಂದು ವರ್ಷವಾದರೂ ಗಂಡನ ಮನೆಗೆ ಕಳುಹಿಸಲು ತವರಿಗೆ ಮನಸ್ಸಿಲ್ಲ. ಗಂಡನೂ
ಮಗುವಿನ ಲಾಲನೆ ಪಾಲನೆಯಲ್ಲಿ ಭಾಗಿಯಾಗಬೇಕು.
- ಮಗಳೂ ಸ್ವತಂತ್ರ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಎಲ್ಲವಕ್ಕೂ ತವರು ಕಲ್ಲು ಹಾಕುತ್ತೆ. ಜತೆ ಜತೆಗೇ ಮಗು ದಂಪತಿಯ ಬಾಂಧವ್ಯಕ್ಕೆ ಮುನ್ನುಡಿ ಬರೆಯಬೇಕು. ವಿನಾಕಾರಣ ಇಂಥದೊಂದು ಸದವಕಾಶದಿಂದಲೇ ವಂಚಿತರನ್ನಾಗಿಸುತ್ತದೆ ತವರು.
- ಗಂಡ ಹೆಂಡತಿ ಅಂದಮೇಲೆ ಜಗಳವೂ ಕಾಮನ್. ಅದನ್ನೆಲ್ಲ ಮಗಳು ತವರಲ್ಲಿ ಚರ್ಚಿಸಬಾರದು. ಆದರೂ ಚರ್ಚಿಸುತ್ತಾಳೆ. ಆಗ ಬಾರದು ಆಗಿದೆ ಎಂಬಂತೆ ತವರು ರಿಯಾಕ್ಟ್ ಮಾಡುತ್ತದೆ. ಅದು ಉಂಡು ಮಲಗಿದ ಮೇಲೂ ಬಗೆಹರಿಯದ ಸಮಸ್ಯೆ.
- ಅವರವರ ಜೀವನ ಅವರವರಿಗೆ. ಮಗಳ ಕೌಟುಂಬಿಕ ಸಮಸ್ಯೆಗಳಲ್ಲಿ ತವರಿಗೇನು ಕೆಲಸ? ಅವಳೇ ಎಲ್ಲವನ್ನೂ ಬಗೆಹರಿಸಿಕೊಳ್ಳುವಂತೆ ಮಾಡ ಬಾರದಾ? 
- ಪ್ರತಿಯೊಂದಕ್ಕೂ ತವರಿನ ಬೆಚ್ಚಗಿನ ಅನುಭೂತಿಯೊಂದಿಗೆ ಗಂಡನ ಮನೆಯನ್ನು ಹೆಣ್ಣು ಹೋಲಿಸುತ್ತಾಳೆ. ಬದಲಾವಣೆ ಜಗದ ನಿಯಮ. ಗಂಡನ ಮನೆಯಲ್ಲಿ ಹೆಚ್ಚುವ ಜವಾಬ್ದಾರಿಗಳು ಎಂದೆಂದಿಗೂ ಬೆಚ್ಚಗಿನ ಅನುಭವವನ್ನು ನೀಡೊಲ್ಲ. ಪರಿಸ್ಥಿತಿಯನ್ನು ಹೇಗಿದ್ಯೋ ಹಾಗೇ ಸ್ವೀಕರಿಸಿ. ನಿಭಾಯಿಸಿ.
- ಹಾಗಂತ ಗಂಡನ ಮನೆಯಲ್ಲಿ ತಡೆಯಲಾರದಷ್ಟು ಮಗಳು ಶೋಷಣೆಗೆ ಒಳಗಾಗುತ್ತಿದ್ದರೆ ಅದನ್ನೂ ಕೋರ್ಟ್, ಕಚೇರಿಯನ್ನದೇ ನಿಭಾಯಿಸಲು ಸಾಧ್ಯವಾ ನೋಡಿ. ಎಂಥದ್ದೇ ಸಮಸ್ಯೆಯಾದರೂ ದಾಂಪತ್ಯವನ್ನು ಹದುಬಸ್ತಿಗೆ ತರಬಹುದು.
- ತವರನ್ನು ಹೀಯಾಳಿಸಿದಾಗ ಹೆಣ್ಣಿಗೆ ಕೋಪ ನೆತ್ತಿಗೇರುತ್ತೆ. ಹಾಗಂತ ಅವಳೂ ಗಂಡನ ಮನೆಯವರನ್ನು ಹೀಯಾಳಿಸಲು ಹೋದರೆ ರಂಪರಾದ್ಧಾಂತ. ಕಾಲವೇ ಎಲ್ಲವಕ್ಕೂ ಉತ್ತರಿಸುತ್ತೆ. ಸಹನೆಯಿರಲಿ.
- ಹೆಣ್ಣು  ಬೌದ್ಧಿಕವಾಗಿ  ಬೆಳೆದಷ್ಟೂ ತವರು-ಗಂಡನ ಮನೆಯ ಸಂಘರ್ಷ ಕಡಿಮೆಯಾಗುತ್ತೆ. ಮಗಳು ಅಂಥ ಗಟ್ಟಿತನ ಬೆಳೆಸಿಕೊಳ್ಳಲು ತವರು ಸಹಕರಿಸಬೇಕು.
- ದಾಂಪತ್ಯ ಸೊಗಸು ಅನಿಸೋದು ಕೆಲವು ವರ್ಷಗಳ ನಂತರವೇ. ಆರಂಭದಲ್ಲಿ ಎಲ್ಲವೂ ಸಿಹಿಯಾಗಿರೋಲ್ಲ. ಆ ಪಾಠವನ್ನು ತವರು ಮಗಳಿಗೆ ಕಲಿಸ ಬೇಕು.
- ಅದ್ಭುತವಾದ ದಾಂಪತ್ಯ ಎಂಬ ಸಂಬಂಧ ಅರಳುವಂತೆ ತವರು ವರ್ತಿಸಬೇಕು. ಅದು ಬಿಟ್ಟು ಹುಳಿ ಹಿಂಡುವ ಕಾರ್ಯಕ್ಕೆ ಮುಂದಾಗಬಾರದು.
- ದಾಂಪತ್ಯದಲ್ಲಿ ಏಳು ಬೀಳು ಕಾಮನ್. ಬಿದ್ದಾಗ ಮತ್ತಷ್ಟು ಕುಸಿಯ ಬೇಡಿ. ಎಲ್ಲ ನೋವಿಗೂ ಟೈಂ ಸೂಕ್ತ ಪರಿಹಾರ ನೀಡಬಲ್ಲದು ಎಂಬುದನ್ನು ಮಗಳು ಮನಗಾಣಬೇಕು.

Follow Us:
Download App:
  • android
  • ios