ಕಾಗೆಗಳ ಶವ ಸಂಭೋಗ: ಇದೆಂತಾ ವಿಚಿತ್ರ ನಡುವಳಿಕೆಯ ಪ್ರಯೋಗ!
ಬುದ್ದಿವಂತ ಪಕ್ಷಿ ಕಾಗೆಗಳ ವಿಚಿತ್ರ ನಡುವಳಿಕೆ| ಸತ್ತ ಕಾಗೆಯೊಂದಿಗೆ ಸಂಭೋಗ ನಡೆಸುವ ಕಾಗೆಗಳು| ಸ್ವಿಫ್ಟ್ ಹಾಗೂ ಇತರ ಸಂಶೋಧಕರ ತಂಡದಿಂದ ಆಘಾತಕಾರಿ ಸಂಶೋಧನೆ| ಸತ್ತ ಕಾಗೆಗಳೊಂದಿಗೆ ಸಂಭೋಗ ನಡೆಸಲು ಮುಂದಾಗುವ ಕಾಗೆಗಳು| ಕಾಗೆಗಳ ವಿಚಿತ್ರ ನಡುವಳಿಕೆ ಕಂಡು ದಂಗಾದ ಸಂಶೋಧಕರು|
ಚಿತ್ರ ಕೃಪೆ: ಕೇಲಿ ಸ್ವಿಫ್ಟ್
ಬೆಂಗಳೂರು(ಸೆ.15): ನಮಗೆ ಗೊತ್ತಿರದ ಪ್ರಾಣಿ, ಪಕ್ಷಿ ಪ್ರಪಂಚ ಸುಂದರವೂ, ಕೆಲವೊಮ್ಮೆ ಘೋರವೂ ಆಗಿರುತ್ತದೆ. ಮಾನವ ಸಮಾಜದಲ್ಲಿ ಬದುಕಲು(ಸಾಯಲೂ ಹೌದು) ಇರುವ ರೀತಿ ರಿವಾಜುಗಳಂತೆ, ಪ್ರಾಣಿ, ಪಕ್ಷಿ ಪ್ರಪಂಚದಲ್ಲೂ ಜೀವನ ಸವೆಸಲು ಹತ್ತು ಹಲವು ರಿವಾಜುಗಳಿವೆ.
ಕಾಗೆಗಳನ್ನು ತುಂಬಾ ಬುದ್ಧಿವಂತ ಪಕ್ಷಿಗಳು ಎಂದು ಹೇಳಲಾಗುತ್ತದೆ. ಆದರೆ ಇವುಗಳ ನಡವಳಿಕೆ ಬಗ್ಗೆ ಅಧ್ಯಯನ ನಡೆಸಿದಾಗ ಹಲವು ಅಚ್ಚರಿಯ ಹಾಗೂ ಅಷ್ಟೇ ರಹಸ್ಯಮಯ ಸಂಗತಿಗಳು ಹೊರಬಿದ್ದಿವೆ.
ಸಾಮಾನ್ಯವಾಗಿ ಒಂದು ನಿರ್ದಿಷ್ಟ ಜಾತಿಯ ಪಕ್ಷಿ ಅಸುನೀಗಿದರೆ ಆ ಜಾತಿಯ ಇತರ ಪಕ್ಷಿಗಳು ಅದರ ಅಂತಿಮ ಸಂಸ್ಕಾರ ನಡೆಸುತ್ತವೆ. ಕಾಗೆಗಳು ಕೂಡ ಇದಕ್ಕೆ ಹೊರತಾಗಿಲ್ಲ. ಆದರೆ ಅಂತ್ಯ ಸಂಸ್ಕಾರಕ್ಕೂ ಮೊದಲು ಕಾಗೆಗಳಲ್ಲಿ ವಿಚಿತ್ರವಾದ ವರ್ತನೆ ಸಂಶೋಧನೆಯಿಂದ ಕಂಡು ಹಿಡಿಯಲಾಗಿದೆ.
ಶವದ ಜೊತೆ ಸಂಭೋಗಕ್ಕೆ ಇಳಿಯುವಷ್ಟು ಸ್ಯಾಡಿಸ್ಟ್ ಆಗೋದು ಏಕೆ?
ಕಾಗೆಗಳಲ್ಲಿ ಅಸಾಮಾನ್ಯ ಎನಿಸುವಂತೆ ವರ್ತನೆ ಕಂಡು ಬಂದಿದ್ದು, ಸತ್ತ ಕಾಗೆಯ ಶವದೊಂದಿಗೆ ಇತರ ಕಾಗೆಗಳು ಸಂಭೊಗ ನಡೆಸುತ್ತವೆ. ಶವಸಂಭೋಗ ಕಾಗೆ ಪ್ರಜಾತಿಯಲ್ಲಿ ಕಂಡು ಬರುವ ಅಸಾಮಾನ್ಯ ವರ್ತನೆಯಾಗಿದೆ.
ಈ ಕುರಿತು ಅಧ್ಯಯನ ನಡೆಸಿರುವ ಕೇಲಿ ಸ್ವಿಫ್ಟ್ ಹಾಗೂ ಇತರ ಸಂಶೋಧಕರು, ಸತ್ತ ಕಾಗೆಯೊಂದಿಗೆ ಭೇರೊಂದು ಕಾಗೆ ಸಂಭೋಗ ನಡೆಸುವ ವಿಚಿತ್ರ ನಡುವಳಿಕೆಯನ್ನು ದಾಖಲಿಸಿದ್ದಾರೆ.
ಮರದ ಕೆಳಗೆ ಸತ್ತ ಕಾಗೆಯ ಕಳೆಬರಹವನ್ನು ಇಟ್ಟು, ಕಾಗೆಗಳ ವರ್ತನೆ ಕುರಿತು ತಿಳಿಯಲು ಸ್ವಿಫ್ಟ್ ಮತ್ತು ತಂಡ ಮುಂದಾಯಿತು.
ಆಗ ಕಾಗೆಯ ಕಳೆಬರದ ಬಳಿ ಬಂದ ಇತರ ಕಾಗೆಗಳು, ಸತ್ತ ಕಾಗೆಯೊಂದಿಗೆ ಶವಸಂಭೋಗ ನಡೆಸುತ್ತಿರುವುದನ್ನು ನೋಡಿ ಸ್ವಿಫ್ಟ್ ಮತ್ತು ತಂಡ ದಂಗಾಗಿ ಹೋಗಿದೆ.
ಶವದ ಜೊತೆ ಸಂಭೋಗ: ವಿಕೃತ ಕಾಮಿಗೆ ಜೈಲು
ಕಾಗೆಯ ಶವ ನೋಡಿದ ಇನ್ನೊಂದು ಕಾಗೆ ಕಳೆಬರಹ ಬಳಿ ಬಂದು ಸಾಮಾನ್ಯವಾಗಿ ಕಾಗೆಗಳು ಲೈಂಗಿಕ ಕ್ರಿಯೆ ಮಾಡುವಂತೆ ತನ್ನ ರೆಕ್ಕೆಗಳನ್ನು ಇಳಿಸಿ, ಬಾಲ ನಿಲ್ಲಿಸಿ ಸತ್ತ ಕಾಗೆಯೊಂದಿಗೆ ಸಂಭೋಗ ನಸಡೆಸಲು ಪ್ರಾರಂಭಿಸಿದೆ. ’
ಸ್ವಿಫ್ಟ್ ಹೇಳುವಂತೆ ಶೇ.24ರಷ್ಟು ಸಂದರ್ಭಗಳಲ್ಲಿ ಪಕ್ಷಿಗಳು ಸತ್ತಿರುವ ಪಕ್ಷಿಯನ್ನು ಸ್ಪರ್ಶಿಸಬಹುದು, ಎಳೆಯಬಹುದು ಅಥವಾ ಶವದ ಮೇಲೆ ಕುಳಿತುಕೊಳ್ಳಬಹುದು. ಆದರೆ ಶೇ.4 ರಷ್ಟು ವಿಶೇಷ ಸಂದರ್ಭಗಳಲ್ಲಿ ಕಾಗೆಗಳು ಸತ್ತ ಕಾಗೆಯೊಂದಿಗೆ ಲೈಂಗಿಕ ಕ್ರೀಯೆಗೆ ಮುಂದಾಗುತ್ತವೆ.