ಲವ್ ಯುವರ್ ನೇಕೆಡ್‌ನೆಸ್ ಎನ್ನೋ ಕಲ್ಕಿ ಫಿಟ್‌ನೆಸ್ ಗುಟ್ಟೇನು?

First Published 10, Mar 2018, 5:27 PM IST
What kalki koechlin does maintain fitness
Highlights

'ಲವ್ ಯುವರ್ ನೇಕೆಡ್‌ನೆಸ್' ಎನ್ನೋ ಕಲ್ಕಿ ಫಿಟ್‌ನೆಸ್ ಮಂತ್ರವೇನು?

ಕಲ್ಕಿ ಕೊಚ್ಲಿನ್ ಎಂಬ ಮೂವತ್ತಮೂರರ ನಟಿ ಕಂ ಮಾಡೆಲ್ ಮೊನ್ನೆ ಮೊನ್ನೆ ಇನ್‌ಸ್ಟೆ ಗ್ರಾಂನಲ್ಲಿ ಬೆತ್ತಲೆ ಬೆನ್ನಿನ ಫೊಟೋ ಹಾಕ್ಕೊಂಡ್ರಲ್ಲಾ, ಈಗ್ಯಾಕಿದು ಬೇಕಿತ್ತು ಅಂತ ಫೋಟೋ ಕಡೆ ಕಣ್ಣು ಹಾಯಿಸಿದರೆ, ಪಕ್ಕದ ಗೋಡೆ ಮೇಲೆ ಕಾರಣ ಬರೆದಿತ್ತು. 'ಲವ್ ಯುವರ್ ನೇಕೆಡ್‌ನೆಸ್' ಅಂತ. ಹಿಂದೆ ರಾಧಿಕಾ ಆಪ್ಟೆನೂ ಇದೇ ಮಾದರಿಯ ಹೇಳಿಕೆ ಕೊಟ್ಟಿದ್ರು. 

ಆದರೆ ಹೇಗಂದರೆ ಹಾಗೆ ಯರ್ರಾಬಿರ್ರಿ ಬೆಳೆದಿರುವ ದೇಹವನ್ನು ಈ ರೀತಿ ಪ್ರದರ್ಶಿಸಲಾಗದು. ಫಿಟ್‌ನೆಸ್ ಇರುವ ದೇಹಕ್ಕಷ್ಟೇ ಆ ಯೋಗ್ಯತೆ ಬರುವುದು. ಕಲ್ಕಿ ತನಗೆ ಆ ಯೋಗ್ಯತೆ ಇದೆ ಅಂತ ಈ ಮೂಲಕ ತೋರಿಸಿಕೊಟ್ಟಿದ್ದಾಳೆ.

ಡಯೆಟ್

ಏನು ತಿಂದರೂ ಕರಗಿಸೋ ಶಕ್ತಿ ತನ್ನ ದೇಹಕ್ಕಿದೆ ಅಂತಾರೆ ಕಲ್ಕಿ. ಓಟ್ಸ್, ಜೇನುತುಪ್ಪ ಮತ್ತು ಯೊಗಾರ್ಟ್ ಮಿಶ್ರಣವಿರುವ ತಿಂಡಿ ಬೆಳಗ್ಗೆ ತಿಂತಾರೆ. ಚಿಕನ್ ಅಥವಾ ರಾಜ್ಮಾ ಜೊತೆಗೆ ಅನ್ನ ತರಕಾರಿ ದಾಲ್‌ನ ಊಟ ಮಾಡ್ತಾರೆ.

ರಾತ್ರಿ ಊಟಕ್ಕೆ ರೋಟಿ, ತರಕಾರಿ ಮಾತ್ರ.  ದಪ್ಪ ಆಗ್ತಿದ್ದೀನಿ ಅಂತನಿಸಿದಾಗ ಅನ್ನ ಸ್ಕಿಪ್ ಆಗುತ್ತಂತೆ!

ಚಾಕೊಲೇಟ್ ಕೇಕ್ ಅಂದ್ರೆ ಪ್ರಾಣ

ವರ್ಕೌಟ್


- ಜಿಮ್‌ಗೆ ಹೋಗಿ ಬೆವರು ಹರಿಸೋದು ಈಕೆಗೆ ಇಷ್ಟ ಇಲ್ಲ. ಅನಿವಾರ್ಯವಾದ್ರೆ ಮಾತ್ರ ಜಿಮ್.

- ನಿತ್ಯವೂ ಯೋಗ ಮಾಡ್ತಾರೆ.  ಖುಷಿಗೆ ಈಜ್ತಾರಂತೆ. 

- ಏರೋಬಿಕ್ಸ್, ವ್ಯಾಯಾಮ ಮಾಡೋದಿಷ್ಟ.

loader