Asianet Suvarna News Asianet Suvarna News

ನಾವು ಸಹಜವಾಗಿ ಎದುರಿಸುವ ಪ್ರಶ್ನೆಗಳ ಸುರಿಮಳೆಗಳಿವು

ಹೆಣ್ಣು ಮಕ್ಕಳ ವಿಷಯಕ್ಕೆ ಬಂದ್ರೆ ಪ್ರಶ್ನೆಗಳ ಸುರಿಮಳೆಯೇ ಇರುತ್ತದೆ. ಎಲ್ಲಿ  ಓದುತ್ತಿರುವುದು? ಎಷ್ಟು ವಯಸ್ಸು? ಯಾವಾಗ ಓದಿ ಮುಗಿಯುತ್ತದೆ? ಮದುವೆ ಮಾಡುವುದಿಲ್ಲವಾ? ಇಲ್ಲಿ ಹುಡುಗ ಇದ್ದಾನೆ ಅಂತ ಪೋಷಕರ ತಲೆ ತಿನ್ನುವುದು.
ಮದುವೆಯ ನಂತರವೂ ಕೆಲಸಕ್ಕೆ ಹೋಗುತ್ತಾಳಾ? ಇಲ್ಲವಾ? ಹೋಗುತ್ತಾಳೆ ಅಂದ್ರೆ, ಮನೆ ಕೆಲಸ ಯಾರು ಮಾಡುತ್ತಾರೆ? ಹೀಗೆ ಪ್ರಶ್ನೆಗಳ ಸುರಿಮಳೆಯೇ ಮುಂದುವರೆಯುತ್ತದೆ. 

We are facing common facts

ಒಬ್ಬ ವ್ಯಕ್ತಿ ಬಾಲ್ಯದಿಂದ ದೊಡ್ಡವನಾಗುವವರೆಗೆ ಜೀವನದಲ್ಲಿ ಅತಿ ಹೆಚ್ಚು ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ. ಚಿಕ್ಕವರಾಗಿರುವಾಗ ನೀನು ಎಷ್ಟನೇ ಕ್ಲಾಸು? ಕ್ಲಾಸ್‌ಗೆ ಫಸ್ಟಾ? ಇದು ಪ್ರತಿ ವರ್ಷ ಕೇಳುವ ಪ್ರಶ್ನೆ. ಕೆಲವರು ಸುಮ್ಮನೆ ಪ್ರಶ್ನೆಗಳನ್ನು ಕೇಳಿದರೆ ಇನ್ನೂ ಕೆಲವರು ಇನ್ನೊಬ್ಬರ ಜೊತೆಗೆ ಹೋಲಿಸಿ ಕೇಳುತ್ತಾರೆ. ಒಬ್ಬೊಬ್ಬರ ಸಾಮರ್ಥ್ಯ ಒಂದೊಂದು ರೀತಿ ಇರುತ್ತದೆ. ಕ್ಲಾಸ್‌ಗೆ ಪ್ರಥಮ ಸ್ಥಾನ ಪಡೆಯುವವರು ಜೀವನದಲ್ಲಿ ಉನ್ನತ ಮಟ್ಟದಲ್ಲಿರುತ್ತಾರಾ? ಓದಿನಲ್ಲಿ ಸಾಮಾನ್ಯ ಎನಿಸಿಕೊಂಡವರಿಗೆ ತಿಳುವಳಿಕೆ ಇರೋದಿಲ್ಲವಾ? 

ಪ್ರಶ್ನೆಯ ಜೊತೆಗೆ ಉಚಿತ ಸಲಹೆಗಳೂ ಇರುತ್ತವೆ. ಮಗನನ್ನು ಈ ಶಾಲೆಗೆ ಸೇರಿಸಬಹುದಿತ್ತು, ಆ ಶಾಲೆ ಏನೂ ಪ್ರಯೋಜನವಿಲ್ಲ ಎಂದು ಹೇಳುವುದು. ಪೋಷಕರು ಆತಂಕಕ್ಕೆ ಒಳಗಾಗುವುದು. ಸಹಾಯ ಮಾಡುವ ಉದ್ದೇಶದಿಂದ ಯಾರೂ ಏನನ್ನೂ ಕೇಳುವುದಿಲ್ಲ. ಅದೇನೋ ಕೆಟ್ಟ ಅಭ್ಯಾಸ ರೂಢಿಸಿಕೊಂಡಿರುತ್ತಾರೆ. ಹೆಣ್ಣು ಮಕ್ಕಳ ವಿಷಯಕ್ಕೆ ಬಂದ್ರೆ ಪ್ರಶ್ನೆಗಳ ಸುರಿಮಳೆಯೇ ಇರುತ್ತದೆ. ಎಲ್ಲಿ ಓದುತ್ತಿರುವುದು? ಎಷ್ಟು ವಯಸ್ಸು? ಯಾವಾಗ ಓದಿ ಮುಗಿಯುತ್ತದೆ? ಮದುವೆ ಮಾಡುವುದಿಲ್ಲವಾ? ಇಲ್ಲಿ ಹುಡುಗ ಇದ್ದಾನೆ ಅಂತ ಪೋಷಕರ ತಲೆ ತಿನ್ನುವುದು.

ಮದುವೆಯ ನಂತರವೂ ಕೆಲಸಕ್ಕೆ ಹೋಗುತ್ತಾಳಾ? ಇಲ್ಲವಾ? ಹೋಗುತ್ತಾಳೆ ಅಂದ್ರೆ, ಮನೆ ಕೆಲಸ ಯಾರು ಮಾಡುತ್ತಾರೆ? ಹೀಗೆ ಮತ್ತೆ ಮುಂದುವರಿದು ಮಗು ಹೆಣ್ಣೊ ಅಥವಾ ಗಂಡೋ ಅಂತ ಮಗುವಿನ ಬಗ್ಗೆ ಮಾತನಾಡುವುದು. ಮಗನ ವಿಚಾರದಲ್ಲಾದರೆ, ಓದಿ ಆಯಿತಲ್ಲಾ, ನಿಮ್ಮ ಮಗ ಕೆಲಸಕ್ಕೆ ಹೋಗುವುದಿಲ್ಲವಾ? ಮನೆಯಲ್ಲೇ ಇರುವುದಾ? ಅಂತ ಕೇಳಿ ಅದನ್ನು ಎಲ್ಲರ ಬಳಿ ಹೇಳುವುದು. ಜನರು ಸ್ವಲ್ಪವೂ ಯೋಚನೆಯನ್ನೇ ಮಾಡುವುದಿಲ್ಲ ಬೇರೆಯವರ ಮನಸ್ಸನ್ನು ನೋಯಿಸಬಾರದೆಂದು.

ಹಿಂದಿನ ಕಾಲದಲ್ಲಿ ಓದು ತಲೆಗೆ ಹತ್ತಲ್ಲಿಲ್ಲ ಅಂದ್ರೆ ಅಥವಾ ಕೆಲಸ ಸಿಗಲ್ಲಿಲ್ಲ ಅಂದ್ರೆ ವ್ಯವಸಾಯ ಮಾಡುವುದು, ಯಾವುದಾದರೊಂದು ಕರ-ಕುಶಲದಲ್ಲಿ ತಮ್ಮನ್ನು  ತೊಡಗಿಸಿಕೊಂಡು ಜೀವನ ನಡೆಸುತ್ತಿದ್ದರು.ಅದರಲ್ಲಿ ಹೆಮ್ಮೆ ಮತ್ತು ಗೌರವ ಇರುತ್ತಿತ್ತು. ಈಗಿನ ಕಾಲದಲ್ಲಿ ವಿದ್ಯಾವಂತರು ಜಾಸ್ತಿ ಅಂತ ಹೇಳುತ್ತಾರೆ. ಆದರೆ ಈ ತರಹದ ಕುಟುಕು ಪ್ರಶ್ನೆಗಳನ್ನು ಕೇಳಿ ಬೇರೆಯವರ ಮನಸ್ಸು ನೋಯಿಸುವವರ ಸಂಖ್ಯೆ ಇತ್ತೀಚೆಗೆ ಜಾಸ್ತಿ ಆಗುತ್ತಿದೆ. ಇದಕ್ಕೆಲ್ಲ ಕೊನೆ ಯಾವಾಗ ಎಂದು ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳಬೇಕಿದೆ.

ಬೇರೆಯವರ ವೈಯುಕ್ತಿಕ ವಿಷಯಕ್ಕೆ ತಲೆ ಹಾಕದಿರುವುದು. ಹಾಗೆ ನಮ್ಮ ಕೈಲಾದರೆ ಸಹಾಯ ಮಾಡುವುದು. ನಮ್ಮ ಸುತ್ತಲಿರುವವರನ್ನು ನೆಮ್ಮದಿಯಿಂದ ಬದುಕಲು ಬಿಡುವುದು. ಅವರ ಸಂತೋಷದಲ್ಲಿ ಖುಷಿ ಪಡುವುದು. ಇವುಗಳು ಮಾನವ ಸಹಜ ಗುಣಗಳು. ಈ ಸಂದರ್ಭದಲ್ಲಿ ಮಂಕುತಿಮ್ಮನ ಕಗ್ಗವನ್ನು ನೆನಪಿಸಿಕೊಳ್ಳುತ್ತೇನೆ. ನಗುವು ಸಹಜದ ಧರ್ಮ ನಗಿಸುವುದು ಪರಧರ್ಮ ನಗುವ ಕೇಳುತ ನಗಿಸುವುದು ಅತಿಶಯದ ಧರ್ಮ ನಗುವ ನಗಿಸುವ ನಗಿಸಿ ನಗುತ ಬಾಳುವವರಮಿಗೆ ನೀನು ಬೇಡಿಕೊಳ್ಳೊ ಮಂಕುತಿಮ್ಮ  ನಗುವಿನಿಂದ ಕೂಡಿದ ಜೀವನ ಎಷ್ಟು ಸುಂದರವಾಗಿರುತ್ತದೆ. ನಮ್ಮ ಜೀವನಕ್ಕೆ ಇಂಥ ಮಾರ್ಗದರ್ಶನ ಬೇಕು. ಅನುಭವವೇ ದೊಡ್ಡ ಪಾಠವಾಗಬೇಕು. ಜನ ಕೇಳೋ ಪ್ರಶ್ನೆಗಳಿಗೆ
ತಲೆಕೆಡಿಸಿಕೊಳ್ಳದೇ ನಮ್ಮಲ್ಲಿರುವ ವಿವೇಕದಿಂದ ಮುಂದೆ ಸಾಗೋಣ. 

Follow Us:
Download App:
  • android
  • ios