ಫಲವತ್ತತೆ ಕಳೆದುಕೊಂಡ ಅಂಡಾಶಯದ ಜಾಗಕ್ಕೆ ಶಸ್ತ್ರಚಿಕಿತ್ಸೆ ಮೂಲಕ ಈ ತ್ರೀಡಿ ಪ್ರಿಂಟೆಡ್ ಅಂಡಾಶಯ ಸೇರಿಸಿ ಮಗು ಪಡೆಯುವ ಲೇಟೆಸ್ಟ್ ತಂತ್ರಜ್ಞಾನ ಇದು. ಮಗು ಪಡೆಯುವ ಆಶಯ ಹೊಂದಿರುವವರಿಗೆ, ಈ ತಂತ್ರಜ್ಞಾನದ ಮೂಲಕ ಗರ್ಭ ಕಟ್ಟುವಂತೆ ಮಾಡುವುದು ಸುಲಭವಾಗಲಿದೆ.

ಮಗುವಾಗಲ್ಲ ಅಂತ ಸಂಕಟಪಡೋ ಹೆಣ್ಮಕ್ಕಳಿಗೆ ಸಿಹಿಸುದ್ದಿ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇನ್ನೊಂದು ಸ್ವಲ್ಪ ವರ್ಷದಲ್ಲೇ ತ್ರೀಡಿ ಪ್ರಿಂಟೆಡ್ ಅಂಡಾಶಯ ಬರಲಿದೆ. ಇದು ಅಂಡಾಕಾರದಲ್ಲಿದ್ದು, ಯಥಾವತ್ ಹೆಣ್ಣಿನ ಅಂಡಾಶಯವನ್ನೇ ಹೋಲುತ್ತದೆ. ಫಲವತ್ತತೆ ಕಳೆದುಕೊಂಡ ಅಂಡಾಶಯದ ಜಾಗಕ್ಕೆ ಶಸ್ತ್ರಚಿಕಿತ್ಸೆಯ ಮೂಲಕ ಈ ತ್ರೀಡಿ ಪ್ರಿಂಟೆಡ್ ಅಂಡಾಶಯ ಸೇರಿಸಿ ಮಗು ಪಡೆಯುವ ಲೇಟೆಸ್ಟ್ ತಂತ್ರಜ್ಞಾನ ಇದು.

ಇತ್ತೀಚೆಗೆ ಫಿನ್‌ಬರ್ಗ್ ಯುನಿವರ್ಸಿಟಿ ಇಂಟೆರೆಸ್ಟಿಂಗ್ ಪ್ರಯೋಗವೊಂದನ್ನು ಮಾಡಿತ್ತು. ಈ ಪ್ರಯೋಗ ನಡೆದದ್ದು ಇಲಿಯ ಮೇಲೆ. ಹೆಣ್ಣಿನಲ್ಲಿನ ಅಂಡಾಶಯವನ್ನು ತೆಗೆದು ಆ ಜಾಗಕ್ಕೆ ತ್ರೀಡಿ ಪ್ರಿಂಟೆಡ್ ಅಂಡಾಶಯ ಸೇರಿಸಿದರು. ಅದನ್ನು ಗಂಡಿಲಿಯೊಂದಿಗೆ ಬೆರೆಯಲು ಬಿಟ್ಟರು. ಹೆಣ್ಣಿಲಿ ಮೊದಲಿನಂತೇ ಸಂತಾನೋತ್ಪತ್ತಿ ಕ್ರಿಯೆಯಲ್ಲಿ ತೊಡಗಿದ್ದಲ್ಲದೇ ಆರೋಗ್ಯವಂತ ಮರಿಗಳಿಗೂ ಜನ್ಮನೀಡಿತು. 

ಆ ಹಿನ್ನೆಲೆಯಲ್ಲಿ ತ್ರೀಡಿ ಪ್ರಿಂಟೆಡ್ ಅಂಡಾಶಯದ ಪ್ರಯೋಗದ ಮೊದಲ ಪರೀಕ್ಷಾ ಹಂತ ಯಶಸ್ವಿಯಾಗಿದೆ. ಆಧುನಿಕ ದಿನಗಳಲ್ಲಿ ಫಲಿತಗೊಳ್ಳದ ಅಂಡಾಶಯದ ತೊಂದರೆಯಿಂದ ಸಂತಾನಹೀನತೆ ಹೆಚ್ಚುತ್ತಿದೆ.