ಕೆಮ್ಮು, ಶೀತಕ್ಕೂ ಶುಂಠಿ ಎಂಬ ಮನೆ ಮದ್ದು

Simple Ginger home remedy
Highlights

ಮಳೆಗಾಲ ಬಂತೆಂದರೆ ಹಲವಾರು ರೋಗಗಳೂ ಕಾಡುತ್ತವೆ. ಅವುಗಳಲ್ಲಿ ಮುಖ್ಯವಾಗಿ ಶೀತ ಕೆಮ್ಮು. ಇನ್ನು ಶ್ವಾಸಕೋಶದ ಸಮಸ್ಯೆ ಇರುವವರಂತೂ ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸದಿದ್ದರೆ, ಮಳೆಗಾಲದ ಈ ತೇವ ಭರಿತ ವಾತಾವರಣದಿಂದ ಅರೋಗ್ಯ ಮತ್ತಷ್ಟೂ ಬಿಗಡಾಯಿಸಬಹುದು. ಒಂದು ವೇಳೆ ನಿಮಗೆ ಶ್ವಾಸಕ್ಕೆ ಸಂಬಂಧಿಸಿದ ಸಮಸ್ಯೆ ಕಂಡು ಬಂದರೆ ಇಲ್ಲಿದೆ ಸಿಂಪಲ್ ಮನೆ ಮದ್ದು..

  • ಒಣ ಕೆಮ್ಮಿದ್ದರೆ, ಶುಂಠಿ ರಸಕ್ಕೆ ಜೇನು, ತುಳಸಿ ರಸ ಹಾಗೂ ಕರಿಮೆಣಸಿನ ಪುಡಿ ಹಾಕಿ ಸೇವಿಸಿ.
  • ಶುಂಠಿ ರಸ ಮತ್ತು ದಾಳಿಂಬೆ ರಸವನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಂಡು, ಅದಕ್ಕೆ ಒಂದಿಷ್ಟು ಜೇನು ಬೆರೆಸಿ ದಿನಕ್ಕೆ ಮೂರು ಬಾರಿ ಸೇವಿಸಿ. ಇದರಿಂದ ಅಸ್ತಮಾ ನಿಯಂತ್ರಣಕ್ಕೆ ಬರುತ್ತದೆ.
  • ಶುಂಠಿಯನ್ನು ಜಜ್ಜಿ ನೀರಿಗೆ ಹಾಕಿ ಕುದಿಸಿ, ಈ ನೀರನ್ನು ತಣ್ಣಗಾದ ಮೇಲೆ ಸೇವಿಸಿ. ಇದರಿಂದ ಕಫ ನಿವಾರಣೆಯಾಗುತ್ತದೆ. 
  • ಶುಂಠಿಯನ್ನು ಜಜ್ಜಿ ನೀರಿಗೆ ಹಾಕಿ, ಅದಕ್ಕೆ ಅರ್ಧ ಈರುಳ್ಳಿ, ಬೆಲ್ಲ, ಕರಿಮೆಣಸು ಹಾಕಿ ಕುದಿಸಿ. ಅದನ್ನು ಸೋಸಿ ಕುಡಿದರೆ ಗಂಟಲು  ನೋವು, ಕೆಮ್ಮು, ಶೀತ, ಗಂಟಲು ಕೆರೆತ ಸಮಸ್ಯೆಗಳಿಂದ ಮುಕ್ತರಾಗಬಹುದು.
  • ರಾತ್ರಿ ಮಲಗುವಾಗ ಉಸಿರಾಟದ ಸಮಸ್ಯೆ ಕಾಣಿಸಿಕೊಂಡರೆ ಇದನ್ನು ಟ್ರೈ ಮಾಡಿ. ಮೆಂತೆ ಕಾಳುಗಳನ್ನು ನೀರಿಗೆ ಹಾಕಿ ಕುದಿಸಿ ನಂತರ  ಅದಕ್ಕೆ ಅರ್ಧ ಚಮಚ ಶುಂಠಿ ರಸ ಮತ್ತು ಜೇನು ಬೆರೆಸಿ ಸೇವಿಸಿ. ರಾತ್ರ ಈ ಸಮಸ್ಯೆ ಮತ್ತೆ ಮರುಕಳಿಸುವುದಿಲ್ಲ.
  • ಕಾಲು ಕಪ್ ಹಾಲಿಗೆ ಒಂದು ಚಿಕ್ಕ ತುಂಡು ಶುಂಠಿ ಹಾಕಿ ಕುದಿಸಬೇಕು. ಉಗುರು ಬಿಸಿಯಾಗಿರುವಾಗಲೇ ಕುಡಿದರೆ ಹಲವು ಸಮಸ್ಯೆಗಳು ದೂರವಾಗುತ್ತವೆ. 
loader