ಭಾರತೀಯರಲ್ಲಿ ಸೆಕ್ಸ್ ಬಗ್ಗೆ ಇರುವ ಅಭಿಪ್ರಾಯಗಳು, ಒಂದಿಷ್ಟು ಕುತೂಹಲ ಮಾಹಿತಿಗಳು

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 25, May 2018, 1:54 PM IST
Sex in India: What data shows
Highlights

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಕಳೆದ ವರ್ಷ ಎಲ್ಲ ರಾಜ್ಯದವರನ್ನು ಒಳಗೊಂಡು ಒಂದು ಸಮೀಕ್ಷೆ ನಡೆಸಿತ್ತು. ಈ ಸಮೀಕ್ಷೆಯ ವರದಿಯಲ್ಲಿ ಭಾರತೀಯರಲ್ಲಿರುವ ಸೆಕ್ಸ್ ಅಭಿಪ್ರಾಯಗಳು ವ್ಯಕ್ತವಾಗಿತ್ತು. ವರದಿಯ ಸಂಕ್ಷಿಪ್ತ ಅಂಶಗಳು ಇಂತಿವೆ.

ಮುಂಬೈ/ನವದೆಹಲಿ(ಮೇ.25):  ಭಾರತೀಯರ ಬಗ್ಗೆ ಇರುವ ಸೆಕ್ಸ್ ವ್ಯಾಮೋಹ ಹಾಗೂ ಸರಾಸರಿ ವರದಿಗಳ ಬಗ್ಗೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಕಳೆದ ವರ್ಷ ಎಲ್ಲ ರಾಜ್ಯದವರನ್ನು ಒಳಗೊಂಡು ಒಂದು ಸಮೀಕ್ಷೆ ನಡೆಸಿತ್ತು. ಈ ಸಮೀಕ್ಷೆಯ ವರದಿಯಲ್ಲಿ ಭಾರತೀಯರಲ್ಲಿರುವ ಸೆಕ್ಸ್ ಅಭಿಪ್ರಾಯಗಳು ವ್ಯಕ್ತವಾಗಿತ್ತು. ವರದಿಯ ಸಂಕ್ಷಿಪ್ತ ಅಂಶಗಳು ಇಂತಿವೆ.

1] ಭಾರತೀಯರಲ್ಲಿ ಶೇ.90 ಮಂದಿ  ತಮ್ಮ ವಯಸ್ಸು 30 ದಾಟುವ ಮುನ್ನವೆ ಲೈಂಗಿಕ ಕ್ರಿಯೆ ನಡೆಸಿರುತ್ತಾರೆ. 30ರ ನಂತರ ನೀವು ಸೆಕ್ಸ್ ನಡೆಸಿರುತ್ತೀರಿ ಎಂದರೆ ತುಂಬ ಹಿಂದುಳಿದಿದ್ದೀರಿ ಎಂದರ್ಥ.
2] ಮೊದಲ ಸೆಕ್ಸ್'ಗೆ ಒಳಗಾವುದರಲ್ಲಿ ಮಹಿಳೆಯರೆ ಮುಂದು. ವಿವಾಹ - ವಿವಾಹೇತರ ಸ್ತ್ರೀಯರನ್ನು ಒಳಗೊಂಡು 15-19ರ ವಯೋಮಾನದ ಮಹಿಳೆಯರು ಲೈಂಗಿಕ ಕ್ರಿಯೆ ಹೊಂದಿರುತ್ತಾರೆ. ಪುರುಷರು ಸೆಕ್ಸ್ ಮೊದಲ ಸುಖ ಅನುಭವಿಸುವುದು 20-24ರ ವಯಸ್ಸಿನಲ್ಲಿ.
3] ಅತೀ ಚಿಕ್ಕ ವಯಸ್ಸಿನಲ್ಲಿಯೇ ಮಹಿಳೆಯರು ಲೈಂಗಿಕ ಕ್ರಿಯೆಗೆ ಒಳಗಾಗುವ ಕಾರಣ ಸಣ್ಣ ವಯಸ್ಸಿನಲ್ಲಿ ಮದುವೆಯಾಗುವುದು. ವಿದ್ಯಾಭ್ಯಾಸದ ಕೊರತೆಯು ಇದಕ್ಕೆ ಕಾರಣವಾಗುತ್ತದೆ.
4]ವಿವಾಹಪೂರ್ವ ಸೆಕ್ಸ್ ಒಳಗಾಗುದರಲ್ಲಿ  ಛತ್ತೀಸ್'ಘಡ, ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿವೆ.  ಹೆಚ್ಚು ಶಿಕ್ಷಣ ಪಡೆದುಕೊಂಡಿರುವ ಮಹಿಳೆಯರು ಮದುವೆಗೆ ಮುನ್ನ ಲೈಂಗಿಕ ಕ್ರಿಯೆಗೆ ಓಳಗಾಗುವುದು ಕಡಿಮೆ. ಆದರೆ ಸರಾಸರಿಯಲ್ಲಿ ಇವರ ಸಂಖ್ಯಾಬಲ ಕಡಿಮೆ.
5] ಸೆಕ್ಸ್'ನಲ್ಲಿ ಹೆಚ್ಚು ಸಕ್ರೀಯವಾಗಿರುವ ರಾಜ್ಯಗಳಲ್ಲಿ ಮಧ್ಯಪ್ರದೇಶ ಹಾಗೂ ರಾಜಸ್ಥಾನ ಹೆಚ್ಚು ಮುಂದಿವೆ. ಉತ್ತರ ಪ್ರದೇಶ, ದೆಹಲಿ, ಪಂಜಾಬ್, ಪಶ್ಚಿಮ ಬಂಗಾಳ ಒಳಗೊಂಡ ಉತ್ತರದ ರಾಜ್ಯಗಳು ಸಮ ಪ್ರಮಾಣದಲ್ಲಿದ್ದರೆ ದಕ್ಷಿಣದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರ ಪ್ರದೇಶ ತೀರ ಹಿಂದಿವೆ. 
6] ವಿವಾಹಪೂರ್ವ ಸೆಕ್ಸ್ ಹೊಂದಿದವರಲ್ಲಿ ಬಹುತೇಕ ತಮ್ಮ ಸ್ನೇಹಿತ, ಸ್ನೇಹಿತೆಯರನ್ನುಹೊಂದಿದ್ದರೆ  ಲೀವಿಂಗ್ ಇನ್ ರಿಲೇಷನ್ ಶಿಪ್ ಕೂಡ  ಹೊಂದಿರುವುದಾಗಿ ಸಮೀಕ್ಷೆಗೆ ಒಳಪಟ್ಟ ಕೆಲವರು ತಿಳಿಸಿದ್ದಾರೆ. 
7] ಸೆಕ್ಸ್ ನಡೆಸುವ ವಿವಾಹೇತರ ಪುರುಷರಲ್ಲಿ ಶೇ.10ಕ್ಕಿಂತ ಹೆಚ್ಚಿನವರು ಪರಿಚಯಸ್ಥರ ಜೊತೆ ಸಂಭೋಗ ನಡೆಸಿದರೆ, ಶೇ.6 ಮಂದಿ ವಾಣಿಜ್ಯ ಸೆಕ್ಸ್ ಕಾರ್ಯಕರ್ತೆಯರ ಜೊತೆ ಲೈಂಗಿಕ ಕ್ರಿಯೆಗೆ ಒಳಗಾಗುತ್ತಾರೆ.
8] ಪರಿಚಯಸ್ಥರ ಜೊತೆ ಸೆಕ್ಸ್'ಗೆ ಒಳಗಾಗುವವರಲ್ಲಿ ಶೇಕಡವಾರು ಮಹಿಳೆಯರ ಸಂಖ್ಯೆ ಕಡಿಮೆ. ಪತಿಯ ಜೊತೆ ಇಲ್ಲವೆ ತುಂಬ ಹತ್ತಿರದವರ ಜೊತೆ ಇವರು ಸೆಕ್ಸ್ ಮುಂದುವರಿಸುತ್ತಾರೆ.
 

loader