Asianet Suvarna News Asianet Suvarna News

ಬಳಸೋ ನೀರಿನ ಬಾಟಲ್ ಸಹ ತರುತ್ತೆ ಜ್ವರ

ದೇಹಕ್ಕೆ ಅಗತ್ಯದಷ್ಟು ನೀರು ಕುಡಿಯದಿದ್ದರೆ ಒಂದಲ್ಲೊಂದು ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅದಕ್ಕೆ ದಿನಕ್ಕೆ 2-3 ಲೀ. ನೀರನ್ನಾದರೂ ಕುಡೀಬೇಕು. ಆದರೆ, ಈ ನೀರು ಕುಡಿಯಲು ಬಳಸೋ ಬಾಟಲ್ ಅನಾರೋಗ್ಯ ತರಬಹುದು.

Plastic water bottles can cause sickness

ಮಾರ್ಕೆಟ್‌ನಲ್ಲಿ ಸಿಗೋ ಕಲರ್‌ಫುಲ್ ಬಾಟಲ್‌ ನಮ್ಮ ಆರೋಗ್ಯಕ್ಕೂ ತರಬಹುದು ಕುತ್ತು. ಅದರ ಬಣ್ಣ, ಕ್ವಾಲಿಟಿ ಎಲ್ಲವೂ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರೋ ಸಾಧ್ಯತೆ ಇರುತ್ತೆ. ಜ್ವರದಂಥ ರೋಗಕ್ಕೂ ಕಾರಣವಾಗುತ್ತದೆ. 

'ಸೇ ನೋ ಟು ಪ್ಲಾಸ್ಟಿಕ್' ಎಂದರೂ ಬಳಸೋದ ಬಿಡೋಲ್ಲ. ಹೊರಗಡೆ ಸಿಗೋ ನೀರು, ಜ್ಯೂಸ್ ಬಾಟಲ್‌ಗಳನ್ನೂ ಮನೆಗೆ ತಂದು ಪದೆ ಪದೇ ಬಳಸುತ್ತೇವೆ. ಇದು ಬ್ಯಾಕ್ಟಿರೀಯಾವನ್ನು ಹೆಚ್ಚಿಸುತ್ತದೆ. ಇದು ಆರೋಗ್ಯಕ್ಕೆ ಒಳಿತಲ್ಲ. ಆರೋಗ್ಯದ ದೃಷ್ಟಿಯಿಂದ ಯಾವ ರೀತಿ ಬಾಟಲ್ ಬಳಸಿದರೆ ಒಳಿತು?

  •  ಅಕಸ್ಮಾತ್ ನೀರು, ಜ್ಯೂಸ್ ಬಾಟಲ್ ಬಳಸಿದರೂ ದಿನಕ್ಕೊಮ್ಮೆಯಾದರೂ ಬ್ರಷ್ ಬಳಸಿ,  ಸ್ವಚ್ಛಗೊಳಿಸಬೇಕು. 
  • ಬಾಟಲ್ ಮೇಲೆ ರೀ ಸೈಕಲ್ ಚಿಹ್ನೆ ಇದ್ದು, ಮರು ಬಳಸಲು ಯೋಗ್ಯವಾಗಿದ್ದರೆ ಮಾತ್ರ ಮರು ಬಳಸಿ. ಅದರ ಮೇಲೆ 1-7 ಅಂಕಗಳಿರುತ್ತವೆ. ಇದು ಯಾವುದಕ್ಕೆ ಬಳಸಬಹುದೆಂಬುವುದನ್ನು ಸೂಚಿಸುತ್ತದೆ.

#1 - ಹಣ್ಣಿನ ಜ್ಯೂಸ್, ನೀರು ಮತ್ತು ಅಡುಗೆ ಎಣ್ಣಿ ಇಡಲು ಬಳಸಬಹುದು. 

#2 - ಸಾಬೂನು, ಶ್ಯಾಂಪೂ ಮತ್ತು ಡಿಟರ್ಜೆಂಟ್‌ಗೆ. 

#3 - ತರಕಾರಿ ಮತ್ತು ಹಣ್ಣು ಪ್ಯಾಕ್ ಮಾಡಲು.

#4 - ಶಾಪಿಂಗ್ ಬ್ಯಾಗ್, ಕುರುಕಲು ತಿಂಡಿಗಳನ್ನಿಡಬಹುದು.

#5 - ಪ್ಯ್ಲಾಸ್ಟಿಕ್ ಗೊಂಬೆ, ಕಾರಿನ ಹೊರ ಭಾಗದ ವಸ್ತು ಮತ್ತು  ಫರ್ನಿಚರ್‌ ತಯಾರಿಕೆಗೆ ಬಳಸೋ ಪ್ಲಾಸ್ಟಿಕ್ ಇದು.

#6 - ಗೊಂಬೆ, ಒಡವೆ ಮತ್ತು ಇತರೆ ಗಟ್ಟಿ ವಸ್ತುಗಳಿಗೆ ಬಳಸೋ ಪ್ಲಾಸ್ಟಿಕ್.

#7 - ಗಾಜು, ಬಟ್ಟೆ ಮತ್ತು ಬಣ್ಣದ ವಸ್ತುಗಳನ್ನು ಇಡೋ ಪ್ಲಾಸ್ಟಿಕ್ .

ಪ್ಲಾಸ್ಟಿಕ್ ಬಾಟಲ್‌‌ನಲ್ಲಿಟ್ಟ ನೀರು ಕುಡಿದರೆ ಏನಾಗುತ್ತೆ?

  • ಹಾನಿ ಉಂಟು ಮಾಡುವ ರಸಾಯನಿಕವನ್ನು ಇದು ಬಿಡುಗಡೆ ಮಾಡುತ್ತದೆ.
  • ಪ್ಲಾಸ್ಟಿಕ್ ಹೆಚ್ಚು ಬಳಸೋ ಪುರುಷರ ಸಂತಾನೋತ್ಪತ್ತಿ ಸಾಮರ್ಥ್ಯ ಕುಂದಬಹುದು.
  • ಹೃದಯ ತೊಂದರೆ ಮತ್ತು ರಕ್ತ ಸಂಚಾರಕ್ಕೂ ತರುತ್ತೆ ಕುತ್ತು. 
  • ಪಿ-5 ಪ್ಯ್ಲಾಸ್ಟಿಕ್ ಬಾಟಲ್ ಆರೋಗ್ಯಕ್ಕೆ ಹೆಚ್ಚು ಹಾನಿಯನ್ನುಂಟು ಮಾಡುವುದಿಲ್ಲ. ರೀ ಯೂಸ್ ಮಾಡಬಹುದು.
Follow Us:
Download App:
  • android
  • ios