Asianet Suvarna News Asianet Suvarna News

1616 ಸಿರಿಂಜ್ ಬಳಸಿ ಹುಟ್ಟಿದ 'ಮಿರಾಕಲ್ ಬೇಬಿ' ಪೋಟೊ ವೈರಲ್

ಹುಟ್ಟಿದ ಮಗುವಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುವುದು ಕಾಮನ್. ಆದರೆ, ಕಂದಮ್ಮನ ಹುಟ್ಟಿಗೆ ಕಾರಣವಾದ 1617 ಸಿರಿಂಜ್‌‌ಗಳೊಂದಿಗೆ ಮಗುವಿನ ಫೋಟೋವನ್ನು ಈ ಮಹಾತಾಯಿ ಅಪ್‌ಲೋಡ್ ಮಾಡಿದ್ದು, ಇದೀಗ ವೈರಲ್ ಆಗಿದೆ

New born baby enter world under influence of 1616 shots goes viral
Author
Bengaluru, First Published Aug 18, 2018, 4:06 PM IST

ಮಗುವಿನ ಜನನದ ಹಿಂದಿನ ಕಥೆ ಹೇಳಿಸ ನೆಟ್ಟಿಗರ ಮನ ಗೆದ್ದಿದ್ದಾರೆ ಈ ದಂಪತಿ. ಮಗುವಿನ ಹುಟ್ಟಿಗೆ ಇಷ್ಟು ಸಿರಿಂಜ್ ಹೇಗೆ ಕಾರಣವೆಂಬುದನ್ನೂ ವಿವರಿಸಿದ್ದು, ಎಂಥವರ ಕಣ್ಣಲ್ಲೂ ನೀರು ಬರುವಂತೆ ಮಾಡುತ್ತದೆ.

4 ವರ್ಷಗಳ ಪ್ರಯತ್ನಕ್ಕೆ ಜೀವನವಿಡೀ ಸಂತೋಷ ಪಡುವಂಥ ಸಂತಸದಲ್ಲಿದ್ದಾರೆ ಈ ದಂಪತಿ. ಆದರೆ, ಆ ಸಂತೋಷಕ್ಕಾಗಿ ಅವರ ಅನುಭವಿಸಿದ ನೋವು ಅಷ್ಟಿಷ್ಟಲ್ಲ. 4 ವರ್ಷಗಳಲ್ಲಿ 7 ಬಾರಿ ಗರ್ಭ ಕಟ್ಟಲು ಯತ್ನಿಸಿ, 3 ಬಾರಿ ಗರ್ಭಪಾತವಾಗಿದೆ ಈ ಮಗುವಿನ ತಾಯಿಗೆ. ನಂತರ 1616 ಸಿರಿಂಜ್ ಬಳಸಿದ ನಂತರ ಈ ಮಗು ಈ ಸುಂದರ ಪ್ರಪಂಚವನ್ನು ನೋಡಿದೆ. 'ವಿಟ್ರೊ ಫರ್ಟೆಲೈಸೇಷನ್' (ಐವಿಫ್) ಹಾಗೂ'ಐಯುಐ' ಚಿಕಿತ್ಸೆ ಮೂಲಕ ಈ ದಂಪತಿ, ಮುದ್ದಾದ ಮಗುವಿಗೆ ಜನ್ಮ ನೀಡಿದ್ದು, ಆ ಸಿರಿಂಜ್‌ಗಳನ್ನು ಮಗುವಿನ ಸುತ್ತ ಹೃದಯ ಆಕಾರದಲ್ಲಿ ಜೋಡಿಸಿ ಫೋಟೋ ತೆಗೆದಿದ್ದಾರೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದು, 55 ಸಾವಿರೇ ಶೇರ್ ಆಗಿದ್ದು, 70 ಸಾವಿರ ಮಂದಿ ಪ್ರತಿಕ್ರಿಯೆ ನೀಡಿದ್ದಾರೆ.

 

Follow Us:
Download App:
  • android
  • ios