ಬೆಂಗಳೂರು :  ಫಾರೇವರ್ ಸಿಂಗಲ್ ಮೀಮ್ ಗಳನ್ನು ನಿಮ್ಮ ಸಿಂಗಲ್ ಫ್ರೆಂಡ್ ಟ್ಯಾಗ್ ಮಾಡ್ತೀರಾ..?  ಹಾಗಾದ್ರೆ ಇನ್ನು ಮುಂದೆ ಹಾಗೆ ಮಾಡೋದನ್ನು ಬಿಟ್ಟು ಬಿಡಿ. ಯಾಕೆ ಗೊತ್ತಾ . ಯಾವ ಹುಡುಗರಿಗೆ ಸಾಮಾಜಿಕ ಜೀವನದ ಬಗ್ಗೆ ಅಷ್ಟೋಂದು ಕೌಶಲ್ಯ ಇರೋದಿಲ್ಲವೋ ಅವರು ಸಿಂಗಲ್ ಆಗಿ ಇರ್ತಾರೆ ಎಂದು ಸಂಶೋಧನೆಯೊಂದು ಹೇಳಿದೆ. 

ಉತ್ತರ ಅಮೆರಿಕಾ, ಯೂರೋಪ್  ಸೇರಿದಂತೆ ಅನೇಕ ಪ್ರದೇಶಗಳಲ್ಲಿ ನಿಕೋಶಿಯಾ ವಿಶ್ವವಿದ್ಯಾಲಯ ಸಮೀಕ್ಷೆಯೊಂದನ್ನು ನಡೆಸಿತ್ತು. ಈ ಸಂಶೋಧನೆಯಲ್ಲಿ 13 ಸಾವಿರ ಮಂದಿ ರಿಲೇಶನ್ ಶಿಪ್ ನಲ್ಲಿ ಇಲ್ಲದ ಯುವಕರು ಪಾಲ್ಗೊಂಡಿದ್ದು ಅವರಿಗೆ ನೀವೇಕೆ ಇನ್ನೂ ಸಿಂಗಲ್ ಆಗಿದ್ದೀರಿ ಎಂದು ಪ್ರಶ್ನೆ ಮಾಡಲಾಗಿತ್ತು. 

ಈ ಪ್ರಶ್ನೆಗೆ ಅವರು ಕೊಟ್ಟ ಉತ್ತರವೇನು ಗೊತ್ತೇ..?

ನಮಗೆ ಸಿಂಗಲ್ ಆಗಿರುವುದು ಇಷ್ಟವಿಲ್ಲ. ರಿಲೇಶನ್ ಶಿಪ್ ನಲ್ಲಿ ಇರೋದೆ ಇಷ್ಟ ಎಂದು ಹೇಳಿದ್ದಾರೆ. ಅಲ್ಲದೇ ಅವರು ಸಿಂಗಲ್ ಆಗಿರಲು 43 ಬೇರೆ ಬೇರೆ ರೀತಿಯ ಕಾರಣಗಳನ್ನು ನೀಡಿದ್ದಾರೆ. 

ಸುಂದರವಾಗಿಲ್ಲ,  ಕುಳ್ಳಗೆ, ಬಾಣಲೆ ತಲೆ,  ಕಾನ್ಫಿಡೆನ್ಸ್ ಇಲ್ಲದೇ ಇರೋದು,  ಅನೇಕ ಸಮಯದವರೆಗೂ ಸಂಬಂಧದಲ್ಲಿ ಇರಲು ಇಷ್ಟ ಇಲ್ಲದೇ ಇರೋದು,  ನಾಚಿಕೆ ಸ್ವಭಾವ, ಫ್ಲರ್ಟ್ ಮಾಡಲು ಬರೋದಿಲ್ಲ ಎನ್ನುವ ಅನೇಕ ಕಾರಣಗಳನ್ನು ನೀಡಿದ್ದಾರೆ. ಆದರೆ ಈ ಎಲ್ಲರೂ ಕೊನೆಗೆ ನೀಡಿದ ಉತ್ತರ ಮಾತ್ರ ರಿಲೇಶನ್ ಶಿಪ್ ನಲ್ಲಿ ಇರೋದೇ ಇಷ್ಟ. ಆದರೆ ಇಂತಹ ಕಾರಣಗಳಿಂದ ಸಿಂಗಲ್ ಆಗಿ ಇರುವುದಾಗಿ ಹೇಳಿದ್ದಾರೆ. 

ಅಲ್ಲದೇ ಹಳೆಯ ಸಂಬಂಧದಲ್ಲಿ ಮೋಸ ಹೋಗಿರುವುದು. ಇನ್ನೊಂದು ಸಂಬಂಧ ಬೆಳೆಸಲು ಧೈರ್ಯ ಇಲ್ಲ ಎಂದು ಹೇಳಿದ್ದಾರೆ.