Asianet Suvarna News Asianet Suvarna News

World Soil Day: ವಿಶ್ವ ಮಣ್ಣಿನ ದಿನದ ಇತಿಹಾಸ ಮತ್ತು ಮಹತ್ವ

ವಿಶ್ವ ಮಣ್ಣಿನ ದಿನವನ್ನು ಡಿಸೆಂಬರ್ 5ರಂದು ಆಚರಿಸಲಾಗುತ್ತದೆ. ಮನುಷ್ಯನಿಗೆ ಅಗತ್ಯವಿರುವಂತೆ ಮಣ್ಣಿಗೂ ಪೋಷಕಾಂಶದ ಅಗತ್ಯವಿರುತ್ತದೆ. ನಮ್ಮ ಆಹಾರದ ಮುಖ್ಯ ಮೂಲ ಮಣ್ಣು. ಈ ಮಣ್ಣಿನ ದಿನ ಆಚರಣೆ ಮೂಲಕ ಮಣ್ಣಿನ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ.
 

History Importance And Theme Of World Soil Day 2022 Vin
Author
First Published Dec 5, 2022, 11:11 AM IST

ಮಣ್ಣಿನ ಮಹತ್ವ ಮಣ್ಣಿನಲ್ಲಿ ಕೆಲಸ ಮಾಡುವವನಿಗೆ ಗೊತ್ತು. ಸವೆದ ಮಣ್ಣಿನಿಂದ ಫಲ ಸಿಗಲು ಸಾಧ್ಯವಿಲ್ಲ. ಈ ಮಣ್ಣಿನ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಇದೇ ಕಾರಣಕ್ಕೆ ಪ್ರತಿ ವರ್ಷ ಡಿಸೆಂಬರ್ 5ರಂದು ವಿಶ್ವ ಮಣ್ಣಿನ ದಿನವನ್ನು ಆಚರಿಸಲಾಗುತ್ತದೆ. ಮಣ್ಣಿನ ಮಹತ್ವವನ್ನು ಎತ್ತಿ ಹಿಡಿಯುವ ಉದ್ದೇಶದಿಂದ ವಿಶ್ವ ಮಣ್ಣಿನ ದಿನವನ್ನು ಆಚರಿಸಲಾಗುತ್ತದೆ. ಮಣ್ಣಿನ ಕಳಪೆ ಸ್ಥಿತಿಯಿಂದಾಗಿ ಮಣ್ಣಿನ ಸವೆತ ತೀವ್ರವಾಗಿ ಆಗ್ತಿದೆ. ಪ್ರಪಂಚದಾದ್ಯಂತ ಇದೊಂದು ಗಂಭೀರ ಸಮಸ್ಯೆಯಾಗಿ ಕಾಡ್ತಿದೆ. 

ಮಣ್ಣಿ (Soil) ನ ಪ್ರಾಮುಖ್ಯತೆ (Importance) : ಮಣ್ಣು ನಮ್ಮ ಜೀವನಕ್ಕೆ ಬಹಳ ಮುಖ್ಯ.  ಆಹಾರ, ಬಟ್ಟೆ, ವಸತಿ ಮತ್ತು ಔಷಧ ಸೇರಿದಂತೆ ನಾಲ್ಕು ಪ್ರಮುಖ ಜೀವನ (Nutrients) ವಿಧಾನಗಳ ಮೂಲ ಮಣ್ಣು. ಮಣ್ಣಿನ ಸಂರಕ್ಷಣೆ ಅತ್ಯಗತ್ಯ. ಮಣ್ಣು ಖನಿಜಗಳು, ಸಾವಯವ ಪದಾರ್ಥಗಳು ಮತ್ತು ಗಾಳಿಯಿಂದ ವಿವಿಧ ಪ್ರಮಾಣದಲ್ಲಿ ಮಾಡಲ್ಪಡುತ್ತದೆ. ಇದು ಸಸ್ಯದ ಬೆಳವಣಿಗೆಯೊಂದಿಗೆ ಅನೇಕ ಕೀಟಗಳು ಮತ್ತು ಇತರ ಜೀವಿಗಳಿಗೆ ನೆಲೆಯಾಗಿರುವುದರಿಂದ ಇದು ಜೀವನಕ್ಕೂ ಮುಖ್ಯವಾಗಿದೆ.  ಮಣ್ಣಿನ ನಷ್ಟದ ಬಗ್ಗೆ ಜಾಗೃತಿ ಮೂಡಿಸಲು ಮುಖ್ಯವಾಗಿ ಡಿಸೆಂಬರ್ 5 ರಂದು ವಿಶ್ವ ಮಣ್ಣಿನ ದಿನವನ್ನು ಆಚರಿಸಲಾಗುತ್ತದೆ.

World Soil Day 2022: ಮಣ್ಣನ್ನು ಯಾಕೆ ಉಳಿಸ್ಬೇಕು, ಸದ್ಗುರು ಏನ್ ಹೇಳ್ತಾರೆ ಕೇಳಿ

ಮಣ್ಣಿನ ದಿನದ ಇತಿಹಾಸ (History) : ಮಣ್ಣನ್ನು ಉಳಿಸುವ ದೃಷ್ಟಿಯಿಂದ ಸುಮಾರು 45 ವರ್ಷಗಳ ಹಿಂದೆಯೇ ಭಾರತದಲ್ಲಿ  ಮಣ್ಣು ಉಳಿಸಿ ಆಂದೋಲನ ಆರಂಭವಾಯಿತು.  ಪ್ರಮುಖವಾಗಿ 2002 ರಲ್ಲಿ ಇಂಟರ್ನ್ಯಾಷನಲ್ ಯೂನಿಯನ್ ಆಫ್ ಸೋಲ್ ಸೈನ್ಸಸ್ (IUSS) ವಿಶ್ವ ಮಣ್ಣಿನ ದಿನವನ್ನು  ಆಚರಿಸಲು ಶಿಫಾರಸು ಮಾಡಿತು. ಥೈಲ್ಯಾಂಡ್ ನಾಯಕತ್ವದಲ್ಲಿ ಮತ್ತು ಜಾಗತಿಕ ಮಣ್ಣಿನ ಪಾಲುದಾರಿಕೆಯ ಚೌಕಟ್ಟಿನೊಳಗೆ ವಿಶ್ವ ಮಣ್ಣಿನ ದಿನವನ್ನು ಆಗ ಆಚರಿಸಲಾಯಿತು.  ಆಹಾರ ಮತ್ತು ಕೃಷಿ ಸಂಸ್ಥೆ, ಮಣ್ಣಿನ ರಕ್ಷಣೆ ಬಗ್ಗೆ ಜಾಗತಿಕವಾಗಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ಡಬ್ಲ್ಯುಎಸ್ಸಿ( WSD) ಯ ಔಪಚಾರಿಕ ಸ್ಥಾಪನೆ ಮಾಡಿತು. ಜೂನ್ 2013 ರಂದು ನಡೆದ FAO ಸಮ್ಮೇಳನದಲ್ಲಿ ವಿಶ್ವ ಮಣ್ಣಿನ ದಿನವನ್ನು ಸರ್ವಾನುಮತದಿಂದ ಅನುಮೋದಿಸಲಾಯಿತು. 68 ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅದನ್ನು ಔಪಚಾರಿಕವಾಗಿ ವಿನಂತಿಸಲಾಯಿತು. ಡಿಸೆಂಬರ್ 2013 ರಲ್ಲಿ  ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಲ್ಲದೆ  ಡಿಸೆಂಬರ್ 5, 2014 ರಂದು ಅಧಿಕೃತವಾಗಿ ವಿಶ್ವ ಮಣ್ಣಿನ ದಿನ ಆಚರಿಸಲಾಯಿತು. 

ಚಳಿಗಾಲದಲ್ಲಿ ಹಾಲು-ಜಿಲೇಬಿ ತಿನ್ನಿ ಎಂದು ಹಿರಿಯರು ಹೇಳೋದ್ಯಾಕೆ ?

2022ರ ವಿಶ್ವ ಮಣ್ಣಿನ ದಿನದ ಥೀಮ್ : ಮಣ್ಣು, ಆಹಾರ ಪ್ರಾರಂಭವಾಗುವ ಸ್ಥಳ ಎಂಬ ಥೀಮ್ ನೊಂದಿಗೆ 2022 ರ ವಿಶ್ವ ಮಣ್ಣಿನ ದಿನವನ್ನು ಆಚರಿಸಲಾಗುತ್ತಿದೆ.  ಮಣ್ಣಿನಲ್ಲಿರುವ ಖನಿಜಗಳು, ಜೀವಿಗಳು ಮತ್ತು ಸಾವಯವ ಘಟಕಗಳು ಮಾನವರು ಮತ್ತು ಪ್ರಾಣಿಗಳಿಗೆ ಆಹಾರವನ್ನು ಒದಗಿಸುತ್ತವೆ ಎಂಬ ಅಂಶವನ್ನು ಇದು ಒತ್ತಿ ಹೇಳುತ್ತದೆ. ನಮ್ಮಂತೆಯೇ, ಮಣ್ಣಿಗೆ ಆರೋಗ್ಯಕರವಾಗಿ ಉಳಿಯಲು ಸರಿಯಾದ ಪ್ರಮಾಣದಲ್ಲಿ ಪೋಷಕಾಂಶ ಅಗತ್ಯವಿದೆ. ಕೃಷಿ ವ್ಯವಸ್ಥೆಯಿಂದ  ಮಣ್ಣು ಪೋಷಕಾಂಶಗಳನ್ನು ಕಳೆದುಕೊಳ್ಳುತ್ತವೆ. ಅವುಗಳನ್ನು ಸಮರ್ಥನೀಯವಾಗಿ ನಿರ್ವಹಿಸದಿದ್ದರೆ, ಫಲವತ್ತತೆ ಕ್ರಮೇಣ ಕಡಿಮೆಯಾಗುತ್ತದೆ. ಆಗ ಮಣ್ಣು, ಪೌಷ್ಟಿಕ ಕೊರತೆಯ ಸಸ್ಯಗಳನ್ನು ಉತ್ಪಾದಿಸುತ್ತದೆ. ಹಾಗಾಗಿ ಮಣ್ಣಿನ ಆರೋಗ್ಯ ಬಹಳ ಮುಖ್ಯ. 

HEALTH TIPS: ಹಾರ್ಟ್‌ ಪೇಷೆಂಟ್ಸ್ ಇಂಥಾ ಆಹಾರ ತಿಂದ್ರೆ ಹೆಚ್ಚು ಕಾಲ ಬದುಕ್ತಾರೆ

ಮಣ್ಣನ್ನು ಉಳಿಸುವ ಮಾರ್ಗಗಳು : ಮಣ್ಣಿನ ರಕ್ಷಣೆಯನ್ನು ಪ್ರತಿಯೊಬ್ಬರೂ ಮಾಡ್ಬೇಕು. ಮಣ್ಣಿನ ರಕ್ಷಣೆಯನ್ನು ನಾನಾ ವಿಧಗಳಲ್ಲಿ ಮಾಡಬೇಕಾಗುತ್ತದೆ. ಅರಣ್ಯ ನಾಶವನ್ನು ತಪ್ಪಿಸಬೇಕು. ಗಿಡಗಳನ್ನು  ಬೆಳೆಸಲು ವಿಶೇಷ ಒತ್ತು ನೀಡಬೇಕು. ಇಳಿಜಾರಿನ ಭೂಮಿಯಲ್ಲಿ ಒಡ್ಡುಗಳನ್ನು ನಿರ್ಮಿಸುವ ಮೂಲಕ ಮಣ್ಣಿನ ಸವೆತವನ್ನು ತಡೆಯಬೇಕು, ನಿರ್ಮಾಣ ಮತ್ತು ಗಣಿಗಾರಿಕೆ ಚಟುವಟಿಕೆಗಳಲ್ಲಿ ಮಣ್ಣಿನ ಸವೆತ ತಪ್ಪಿಸಲು ಒತ್ತು ನೀಡಬೇಕು. ಹೊಲಗಳಲ್ಲಿ ಇಳಿಜಾರಿಗೆ ಎದುರಾಗಿ ಉಳುಮೆ ಮಾಡಬೇಕು. ತಾರಸಿ ಕೃಷಿಗೆ ಒತ್ತು ನೀಡಬೇಕು. ಇದು ಮಣ್ಣು ಕೊಚ್ಚಿಕೊಂಡು ಹೋಗುವುದನ್ನು ತಪ್ಪಿಸುತ್ತದೆ.

Follow Us:
Download App:
  • android
  • ios