ಅಪಘಾತಕ್ಕೆ ಕಾರಣವಾಗೋ ಹೈವೇ ಹಿಪ್ನೋಸಿಸ್ ಎಂದರೇನು ಗೊತ್ತಾ?

First Published 15, Mar 2018, 6:04 PM IST
Know about highway hypnosis
Highlights

ಹೈವೇ ಹಿಪ್ನೋಸಿಸ್‌ನ್ನು ಮನಸ್ಸಿನ ಡ್ರೀಮ್ ಲೈನ್ ಸ್ಥಿತಿ ಅಂತಾರೆ. ಒಂದೇ ಬಗೆಯ ರಸ್ತೆಯಲ್ಲಿ ಒಂದು ಹಂತದ ಡ್ರೈವಿಂಗ್‌ನ ಬಳಿಕ ಮಿದುಳು ಒಂದು ಭಾಗ ಕಾರ್ಯಪ್ರವೃತ್ತವಾಗಿರುತ್ತದೆ. ಆಗ ಕೈ ಸ್ಟೇರಿಂಗ್‌ನಲ್ಲಿರುತ್ತೆ, ಕಣ್ಣು ರಸ್ತೆ ಮೇಲೆ ನೆಟ್ಟಿರುತ್ತೆ. ಆದ್ರೆ ಮಿದುಳಿನ ಉಳಿದರ್ಧ ಭಾಗ ನಿದ್ದೆ ಹೋಗಿರುತ್ತೆ. 

1 ಹೈವೇ ಹಿಪ್ನೋಸಿಸ್‌ನ್ನು ಮನಸ್ಸಿನ ಡ್ರೀಮ್ ಲೈನ್ ಸ್ಥಿತಿ ಅಂತಾರೆ. ಒಂದೇ ಬಗೆಯ ರಸ್ತೆಯಲ್ಲಿ ಒಂದು ಹಂತದ ಡ್ರೈವಿಂಗ್‌ನ ಬಳಿಕ ಮಿದುಳು ಒಂದು ಭಾಗ ಕಾರ್ಯಪ್ರವೃತ್ತವಾಗಿರುತ್ತದೆ. ಆಗ ಕೈ ಸ್ಟೇರಿಂಗ್‌ನಲ್ಲಿರುತ್ತೆ, ಕಣ್ಣು ರಸ್ತೆ ಮೇಲೆ ನೆಟ್ಟಿರುತ್ತೆ. ಆದ್ರೆ ಮಿದುಳಿನ ಉಳಿದರ್ಧ ಭಾಗ ನಿದ್ದೆ ಹೋಗಿರುತ್ತೆ. 

2 ಹೈವೆಯಲ್ಲಿ ಡ್ರೈವ್ ಮಾಡ್ತಿರುವಾಗ, ಒಂದು ಹಂತದಲ್ಲಿ ನಿದ್ದೆ ಬಂದಂತಾಗಿ ಹಿಂದೆ ಡ್ರೈವಿಂಗ್ ಮಾಡಿದ ನೆನಪು ಇಲ್ಲದಿದ್ದರೆ ಇದು ಹೈವೇ ಹಿಪ್ನೋಸಿಸ್‌ನ ಲಕ್ಷಣ. 

3 ಜಗತ್ತಿನಲ್ಲಿ ಅತಿಹೆಚ್ಚು ಅಪಘಾತಗಳಿಗೆ ಈ ಮನಸ್ಥಿತಿ ಕಾರಣವಾಗುತ್ತೆ. ಹಾಗಾಗಿ ಡ್ರೈವಿಂಗ್ ಮಾಡುವಾಗ ಮನಸ್ಸು ನಿದ್ದೆಯತ್ತ ವಾಲುವಂತಿದ್ದರೆ ದಯವಿಟ್ಟು ಹೈವೇ ಡ್ರೈವಿಂಗ್ ಅವಾಯ್ಡ್ ಮಾಡಿ.

4 ಎಷ್ಟೋ ಸಲ ಹೈವೇ ಹಿಪ್ನೋಸಿಸ್‌ಗೆ ಉದ್ವೇಗ, ಒತ್ತಡ, ಖಿನ್ನತೆಯಂಥ ಮಾನಸಿಕ ಸಮಸ್ಯೆಯೂ ಕಾರಣವಾಗಿರುತ್ತೆ. ಇಂಥ ಸಮಸ್ಯೆ ಇರುವಾಗ ಮನಸ್ಸು ಬಹಳ ದಣಿಯುವ ಕಾರಣ ಇಂಥ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
 

loader