Asianet Suvarna News Asianet Suvarna News

ತಲೆಗಿಂತ ಕೆಳಗೆ ಬಲವೇ ಇಲ್ಲ: ಬಹುಕೋಟಿ ಮರದ ವ್ಯಾಪಾರಿ ಇವರು..!

  • ಈ ವ್ಯಾಪಾರಿಗೆ ಕುತ್ತಿಗೆಗಿಂತ ಕೆಳಗೆ ಬಲವೇ ಇಲ್ಲ
  • ಆದರೆ ಛಲಕ್ಕೆ ಕಮ್ಮಿ ಇಲ್ಲ, ಬಹುಕೋಟಿ ಮರದ ವ್ಯಾಪರ ಮಾಡ್ತಾರೆ ಇವರು
Kerala man paralysed from neck down has set up a multi crore timber business dpl
Author
Bangalore, First Published Oct 11, 2021, 3:35 PM IST

ಕಾಸರಗೋಡು(ಅ.11): ಸರ್ ನೀವು ನನ್ನ ಶಾಪ್ ಮುಂದಿರುವ ಕಾರಿನಲ್ಲಿದ್ದೀರಾ ? ಹೌದು. ನೀವು ನನ್ನನ್ನು ನೋಡಲಾರಿರಿ. ನನಗೆ ನೀವು ಕಾಣಿಸುತ್ತೀರಿ. ಮನೆಯ ಪಕ್ಕದ ರಸ್ತೆಯಲ್ಲಿ ಬನ್ನಿ. ನೀವು ನನ್ನ ಆಫೀಸ್ ತಲುಪುತ್ತೀರಿ. ಅಲ್ಲಿ ಸುರೇಶನೊಂದಿಗೆ ಮಾತನಾಡಿ. ಇಲ್ಲ ನಿಮಗೆ ನಾನು ಕಾಣಿಸಲಾರೆ, ನಾನು ಕೆಳಗಿದ್ದೇನೆ ಎನ್ನುತ್ತಾ ಕಾಲ್ ಕಟ್ ಆಗುತ್ತದೆ.

ಮನೆಯ ಒಳಗೆ 18-15 ಫೀಟ್ ವ್ಯಾಪ್ತಿಯ ರೂಮ್‌ನಲ್ಲಿ ಶನವಾಸ್ ಟಿಎ(46)(Shanavas T A) ಸೆಮಿ ಅಟೊಮೆಟಿಕ್ ಹೈಡ್ರಾಲಿಕ್ ಬೆಡ್‌ನಲ್ಲಿ ಇರುತ್ತಾರೆ. 32 ಇಂಚಿನ ಮಾನಿಟರ್ ಒಂದು ಅವರ ಎದುರಿನ ಗೋಡೆಯಲ್ಲಿ ತೂಗುತ್ತಿರುತ್ತದೆ. ಅವರ ಎರಡು ಮರದ ವ್ಯಾಪಾರ ಆಫೀಸ್‌ಗಳಿಂದ ದೃಶ್ಯಾವಳಿಗಳು ಈ ಸ್ಕ್ರೀನ್‌ನಲ್ಲಿ ಅವರು ಕಾಣಬಹುದು. ಮನೆಯ ಸುತ್ತಮುತ್ತಲಿನ ದೃಶ್ಯವನ್ನೂ ಅವರು ಅಲ್ಲಿಯೇ ಕಾಣುತ್ತಾರೆ. ಕಿವಿಯಲ್ಲಿರೋ ಆಪಲ್ ಏರ್‌ಪಾಡ್ ಅವರ ಕಿವಿಗೆ ಫಿಕ್ಸ್ ಮಾಡಿಕೊಂಡಿರುತ್ತಾರೆ. ಈ ಮೂಲಕ ಗ್ರಾಹಕರೊಂದಿಗೆ ಮಾತನಾಡುತ್ತಾರೆ.

ಅನೇಕ ಷರತ್ತು, ನಷ್ಟದಲ್ಲಿದ್ದರೂ ಏರ್‌ ಇಂಡಿಯಾ ಖರೀದಿಸಿದ್ದೇಕೆ ಟಾಟಾ?

ಇದು ನನ್ನ ಆಫೀಸ್ ಎಂದು ಶಾನವಾಸ್ ಹೇಳುತ್ತಾರೆ. ನನ್ನ ವ್ಯವಹಾರದಲ್ಲಿ ಯಾವುದೂ ನನ್ನ ಮೂಲಕ ಹೋಗದೆ ಏನೂ ಆಗುವುದಿಲ್ಲ ಎಂದಿದ್ದಾರೆ. ಶಾನವಾಸ್ ಕಳೆದ 11 ವರ್ಷಗಳಿಂದ ಪಾರ್ಶ್ವವಾಯುವಿಗೆ ತುತ್ತಾಗಿದ್ದಾರೆ. ಆದರೆ ಅದು ಬಹುಕೋಟಿ ಮರದ ವ್ಯಾಪಾರವನ್ನು(Timber business) ಸ್ಥಾಪಿಸುವುದನ್ನು ಮತ್ತು ನಡೆಸುವುದನ್ನು ಅವರ ಆರೋಗ್ಯ ಸಮಸ್ಯೆ ತಡೆಯಲಿಲ್ಲ. ಇವರು ಕೇವಲ ಯಶಸ್ವಿ ಮಾತ್ರವಲ್ಲ ನಂಬಿಗಸ್ತ ಮರದ ವ್ಯಾಪಾರಿ ಕೂಡಾ ಹೌದು.

ಎಲ್ಲಾ ಗಾತ್ರಗಳಲ್ಲಿ ಮತ್ತು ಎಲ್ಲಾ ಅಗತ್ಯಗಳಿಗೆ ಮರಗಳು ಮತ್ತು ಹಲಗೆಗಳನ್ನು ಪೂರೈಸುತ್ತಾರೆ. ತನ್ನ ಮಗಳು ನಿದಾಳಿಗೆ ಹಣ ಜಮಾ ಮಾಡಲಾಗಿದೆಯೇ ಎಂದು ಪರಿಶೀಲಿಸಲು ಹೇಳುತ್ತಾರೆ. ಮೊಬೈಲ್ ಫೋನ್‌ನಲ್ಲಿ ಚೆಕ್ ಮಾಡಿ ಆಕೆ ಹೇಳುತ್ತಾಳೆ. ಮಗಳು ನಿದಾ ಅವರ ಬ್ಯುಸಿನೆಸ್‌ನಲ್ಲಿ ಸಹಾಯಕಿ.

ಬದುಕು ಬದಲಾಯಿಸಿದ ಅಪಘಾತ:

ನಿದಾ ಫಾತಿಮಾ 40 ದಿನದ ಕೂಸು, ಹಿರಿ ಮಗಳು ಫಿದಾ ಫಾತಿಮಾ ಎಲ್‌ಕೆಜಿ ಓದುತ್ತಿದ್ದ 6 ವರ್ಷದ ಹುಡುಗಿ. ಆಗಲೇ ಶಾನವಾಸ್‌ಗೆ ಅಪಘಾತವಾಗಿತ್ತು. ಆಗ ಅವರ ವಯಸ್ಸು 35. 2010 ಮೇ 6ರಂದು ಬೆಳಗ್ಗೆ 4 ಗಂಟೆಗೆ ನಡೆದ ಅಪಘಾತದಲ್ಲಿ ಕುತ್ತಿಗೆಗಿಂತ ಕೆಳಗೆ ಬಲವನ್ನೇ ಕಳೆದುಕೊಂಡಿದ್ದರು. ಅವರು ಉಡುಪಿಯ ಕಾರ್ಕಳಕ್ಕೆ ಮರ ಖರೀದಿಸಲು ಹೊರಟಿದ್ದರು. ಪತ್ನಿ ರಹಮತ್ ಪುಟ್ಟ ಮಗಳು ನಿದಾಳನ್ನು ಅವರ ಕೈಗೆ ಕೊಟ್ಟಿದ್ದರು. ನೀವಿನ್ನೂ ಆಕೆಯನ್ನು ಎತ್ತಿಕೊಂಡೇ ಇಲ್ಲ, ಹೋಗುವ ಮುನ್ನ ಒಮ್ಮೆ ಎತ್ತಿಕೊಳ್ಳಿ ಎಂದಿದ್ದರು ಅವರ ಪತ್ನಿ.

ಅದು ಒಂದೇ ಸಲ ಅವರು ಮಗಳನ್ನು ಎತ್ತಿದ್ದು. ಮತ್ತೆಂದೂ ಅವರ ಪುಟ್ಟ ಮಗಳನ್ನು ಎತ್ತಿಕೊಳ್ಳಲು ಅವರಿಗಾಗಲಿಲ್ಲ. ತನ್ನ ಕಾರಿನಲ್ಲಿ ಹಿಂತಿರುಗುತ್ತಿದ್ದರು. ಎರಡು ಟ್ರಕ್‌ಗಳು ಮರವನ್ನು ತುಂಬಿಕೊಂಡು ಅವರನ್ನು ಹಿಂಬಾಲಿಸಿ ಬರುತ್ತಿತ್ತು. ಪೆರಿಯಾ ಬಳಿಯ ಕುನಿಯಾದಲ್ಲಿ ಅಪಘಾತವಾಯಿತು. ಕಾರು ಹಲವು ಬಾರಿ ತಿರುಗಿತು. ಸೀಟ್ ಬೆಲ್ಟ್ ಧರಿಸದ ಶಾನವಾಸ್ ಅವರು ಕಾರಿನಿಂದ ಹೊರಗೆ ಎಸೆಯಲ್ಪಟ್ಟರು. ಅವರಿಗೆ ಸಹಾಯ ಮಾಡಲು ಯಾವ ವಾಹನವೂ ನಿಲ್ಲಲಿಲ್ಲ. ಇಬ್ಬರು ಟ್ರಕ್ ಚಾಲಕರು ಆತನನ್ನು ಒಂದು ಟ್ರಕ್‌ಗೆ ತುಂಬಿಕೊಂಡು ಕಾಞಂಗಾಡ್‌ನ ಆಸ್ಪತ್ರೆಗೆ ಕರೆದೊಯ್ದರು.

ಕಾಞಂಗಾಡಿನ ವೈದ್ಯರು ಆತನನ್ನು ಮಂಗಳೂರಿನ ಆರೈಕೆ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿನ ವೈದ್ಯರು ಬೆನ್ನುಹುರಿಯ ಗಾಯವನ್ನು ದೃಢಪಡಿಸಿದರು. ಇದು ಅಪಾಯಕಾರಿಯಾದ ಕಾರಣ ಶಸ್ತ್ರಚಿಕಿತ್ಸೆಯನ್ನು ತಳ್ಳಿಹಾಕಿದರು. ಅವರ ಕುಟುಂಬವು ಅವರನ್ನು ಐಸಿಯುನಲ್ಲಿ ನಾಲ್ಕು ತಿಂಗಳು ಕಾಲ ಇರಿಸಿತು. ರಹಮತ್ ನಿದಾಳನ್ನು ಆರೈಕೆ ಮಾಡುತ್ತಲೇ ಗಂಡ ಎದ್ದು ಬರಲೆಂದು ಆಶಿಸಿದರು.

ಐಸಿಯುನಲ್ಲಿ ಉಳಿದುಕೊಂಡಿದ್ದು ಅವರ ಜೀವನದ ಅತ್ಯಂತ ನೋವಿನ ಅವಧಿ ಎಂದು ಅವರು ಹೇಳುತ್ತಾರೆ. ನನಗೆ ಸಹೋದರರು ಇಲ್ಲ, ರಹಮತ್‌ಗೂ ಇಲ್ಲ. ನಮ್ಮ ತಂದೆ ತೀರಿಕೊಂಡರು. ನಮಗೆ ಇದ್ದದ್ದು ನಾವು ಮಾತ್ರ ಎನುತ್ತಾರೆ ಶಾನವಾಸ್.

ಅವರ ಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡುಬರಲಿಲ್ಲ. ಆದರೆ ಕುಟುಂಬದ ಹಣವು ಖಾಲಿಯಾಗುತ್ತಲೇ ಬರುತ್ತದೆ. ನಾನು ನನ್ನ ತಲೆಯನ್ನು ನೇರವಾಗಿ ಹಿಡಿದಿಡಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳುತ್ತಾರೆ.

ಹತಾಶೆಯಿಂದ ಭರವಸೆ ಕಡೆಗೆ:

ರಹಮತ್ ಅವರನ್ನು ವೆಲ್ಲೂರಿನ ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜಿಗೆ ಶಿಫ್ಟ್ ಮಾಡುತ್ತಾರೆ. CMC ಯಲ್ಲಿ, ವೈದ್ಯರು ಆತನ ಕುತ್ತಿಗೆಯ ಚಲನೆಯನ್ನು ನಿಯಂತ್ರಿಸಲು ಸ್ಟೀಲ್ ರಾಡ್ ಅನ್ನು ಅಳವಡಿಸುತ್ತಾರೆ. ಅವರು ಇನ್ನೂ ಐದು ತಿಂಗಳು ಆಸ್ಪತ್ರೆಯಲ್ಲಿದ್ದರು. ಈ ವಾಸ್ತವ್ಯವೇ ತನ್ನ ಜೀವನದ ಮಹತ್ವದ ತಿರುವು ಎಂದು ಶಾನವಾಸ್ ಹೇಳುತ್ತಾರೆ. ಅವರು ನನ್ನನ್ನು ನಡೆಯುವಂತೆ ಮಾಡಿದ ಕಾರಣದಿಂದಲ್ಲ. ಆದರೆ ಇತರ ರೋಗಿಗಳ ಪರಿಸ್ಥಿತಿ ನೋಡಿ ನಾನು 100% ಅಂಗವಿಕಲನಾಗಿದ್ದೇನೆ ಎಂದು ನಾನು ಅರಿತುಕೊಂಡೆ. ಆದರೆ ನಾನು ಕೇವಲ 1% ನಷ್ಟು ಮಾತ್ರ ಅದರಿಂದ ಪ್ರಭಾವಿಸಲ್ಪಟ್ಟಿದೆ ಎಂದು ಅವರು ಹೇಳುತ್ತಾರೆ.

ಆಸ್ಪತ್ರೆಯಿಂದ ವ್ಯಾಪಾರವನ್ನು ಆರಂಭ:

ಆಸ್ಪತ್ರೆಯಲ್ಲಿ ಐದನೇ ತಿಂಗಳ ಹೊತ್ತಿಗೆ, ಕುಟುಂಬದಲ್ಲಿದ್ದ ಹಣ ಮುಗಿಯಿತು. ನಾನು ಯಾರನ್ನೂ ಅವಲಂಬಿಸುವುದಿಲ್ಲ ಎಂದು ನಿರ್ಧರಿಸಿದೆ ಅವರು ಹೇಳುತ್ತಾರೆ. ದಂಪತಿಗಳು ತಮ್ಮ ಮರದ ವ್ಯಾಪಾರವನ್ನು ವೆಲ್ಲೂರು ಆಸ್ಪತ್ರೆಯಿಂದ ಪುನರಾರಂಭಿಸಲು ಯೋಜಿಸಿದರು. ರಹಮತ್ ತನ್ನ ಚಿನ್ನವನ್ನು ಒತ್ತೆ ಇಟ್ಟು ಸುಮಾರು 1 ಲಕ್ಷ ರೂ. ಅವರು ಹಣವನ್ನು ಸಣ್ಣ ಪ್ರಮಾಣದಲ್ಲಿ ಮರಗಳನ್ನು ಖರೀದಿಸಲು ಬಳಸುತ್ತಾರೆ. ಐದನೇ ತಿಂಗಳ ಅಂತ್ಯದ ವೇಳೆಗೆ, ಶಾನವಾಸ್, ರಹಮತ್, ಮತ್ತು ನಿದಾ ಪೂರ್ವ ಎಲೆರಿ ಪಂಚಾಯಿತಿಯ ಕಂಬಳ್ಳೂರಿಗೆ ಮನೆಗೆ ಮರಳುತ್ತಾರೆ. ನಮ್ಮ ವ್ಯಾಪಾರ ಬೆಳೆಯುತ್ತಲೇ ಇತ್ತು ಮತ್ತು ನಾವು ಹಿಂತಿರುಗಿ ನೋಡಲೇ ಇಲ್ಲ ಎನ್ನುತ್ತಾರೆ ಶಾನವಾಸ್.

ಹಣ ನನ್ನನ್ನು ಎದ್ದು ನಿಲ್ಲುವಂತೆ ಮಾಡದು, ಬೇರೆಯವರ ಬದುಕಿಗೆ ಬದಲಾವಣೆ ತರಬಹುದು:

ಶಾನವಾಸ್ ಮಾರಾಟ ಮಾಡಿದರೆ ಬಿ.ಕಾಂ ಪದವೀಧರರಾದ ರಹಮತ್ ಪುಸ್ತಕ ಲೆಕ್ಕ ನೋಡಿಕೊಳ್ಳುತ್ತಾರೆ . ಸೆಪ್ಟೆಂಬರ್ 14 ರಂದು, ತಮ್ಮ 17 ನೇ ವಿವಾಹ ವಾರ್ಷಿಕೋತ್ಸವದಂದು, ದಂಪತಿಗಳು ಕಿನನೂರು-ಕರಿಂತಲಂ ಪಂಚಾಯಿತಿಯ ಪರಪ್ಪದಲ್ಲಿ ಹೊಸ ಮರದ ಅಂಗಡಿಯನ್ನು ತೆರೆದರು. ಕಂಬಳ್ಳೂರಿನಿಂದ 40 ನಿಮಿಷಗಳ ಡ್ರೈವ್ ಮಾಡಿದರೆ ಸಿಗುವ ಪರಪ್ಪ, ರಹಮತ್ ಅವರ ಊರು. ಅವರು ಕಂಬಳ್ಳೂರಿನಲ್ಲಿ ತಮ್ಮ ಬಡಾವಣೆಯಲ್ಲಿ 15 ಕೆಲಸಗಾರರನ್ನು ಮತ್ತು ಪರಪ್ಪದಲ್ಲಿರುವ ಕಾರ್ಯಾಗಾರದಲ್ಲಿ ಐವರನ್ನು ನಿಯೋಜಿಸುತ್ತಾರೆ.

ರೈತ ಮತ್ತು ಸಾಮಾಜಿಕ ಕಾರ್ಯಕರ್ತ ಚಂದ್ರನ್ ನಾಯರ್ ಹೇಳುವಂತೆ ಶಾನವಾಸ್ ಸಾಕಷ್ಟು ದಾನ ಕಾರ್ಯಗಳನ್ನು ಮಾಡುತ್ತಾರೆ. ಅವರು ಬಹಳಷ್ಟು ವಿದ್ಯಾರ್ಥಿಗಳು, ಬಡ ಕುಟುಂಬಗಳು ಮತ್ತು ಮೂತ್ರಪಿಂಡ ಮತ್ತು ಕ್ಯಾನ್ಸರ್ ರೋಗಿಗಳಿಗೆ ಸಹಾಯ ಮಾಡುತ್ತಾರೆ ಎಂದು ನಾಯರ್ ಹೇಳುತ್ತಾರೆ.

ಹಣವು ನನಗೆ ಎದ್ದೇಳಲು ಮತ್ತು ನಡೆಯಲು ಸಹಾಯ ಮಾಡುವುದಿಲ್ಲ. ಆದರೆ ಅದು ಇತರರಿಗೆ ವ್ಯತ್ಯಾಸವನ್ನು ಉಂಟುಮಾಡಬಹುದು ಎನ್ನುತ್ತಾರೆ ಶಾನವಾಸ್.

Follow Us:
Download App:
  • android
  • ios