ಹಲಸು ಬಾಯಿಗೂ ರುಚಿ, ದೇಹಕ್ಕೂ ಹಿತ

Jackfruit as a health benefit
Highlights

'ಹಸಿದ ಹೊಟ್ಟೆಗೆ ಹಲಸು, ತುಂಬಿದ ಹೊಟ್ಟೆಗೆ ಮಾವು' ಎನ್ನೋ ಮಾತಿದೆ. ಈ ಋುತುಮಾನದಲ್ಲಿ ಸಿಗೋ ಮಾವು ಹಾಗೂ ಹಲಸನ್ನು ತಿನ್ನುವ ಮಜಾನೇ ಬೇರೆ. ವಿಧವಿಧವಾಗಿ ಇವುಗಳನ್ನು ಬಳಸಿದಷ್ಟೂ ದೇಹಕ್ಕೆ ಅಗತ್ಯವಾದ ವಿಟಮಿನ್, ಪ್ರೊಟೀನ್ ಸಿಗುವುದು ಗ್ಯಾರಂಟಿ. ಅದರಲ್ಲಿಯೂ ಹಲಸಿನಲ್ಲಿ ರೋಗ ನಿರೋಧಕ ಶಕ್ತಿ ಅಧಿಕವಾಗಿದ್ದು, ದೊಡ್ಡ ಕರುಳಿನ ಕ್ಯಾನ್ಸರ್ ತಡೆಯುವಲ್ಲಿಯೂ ಮುಖ್ಯ ಪಾತ್ರವಹಿಸುತ್ತದೆ. ಈ ಹಣ್ಣು ಹೇಗೆ ಆರೋಗ್ಯಕಾರಿ ಗೊತ್ತಾ?

 

- ಬೀಜ-ಹಣ್ಣನ್ನೂ ಬಳಸಬಹುದಾಗಿದ್ದುಬೇಸಿಗೆಯಲ್ಲಿ ಸಿಗೋ ಈ ಹಣ್ಣಿನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ ಬಿ2, ಪೊಟ್ಯಾಷಿಯಮ್, ಮೆಗ್ನಿಷಿಯಮ್ ಹಾಗೂ ಕಾಪರ್ ದೇಹಕ್ಕೆ ಅಗತ್ಯದಷ್ಟಿರುತ್ತದೆ.

- ಚರ್ಮ ಸುಕ್ಕುಗಟ್ಟದಂತೆ ತಡೆಯಬಲ್ಲದು ಹಲಸು.

-  ಹಲಸಿನ ಬೀಜವನ್ನು ಬೆಚ್ಚಗಿನ ಹಾಲು ಮತ್ತು ಜೇನಿನಲ್ಲಿ ಬೆರಸಿ, ಕೆಲವು ಸಮಯದ ನಂತರ ಸುಕ್ಕಿರುವ ಚರ್ಮಕ್ಕೆ ಹಚ್ಚಿದರೆ 6 ವಾರಗಳಲ್ಲಿ ಸುಕ್ಕು ನಿವಾರಣೆ ಆಗಿ, ಚರ್ಮದ ಕಾಂತಿ ಹೆಚ್ಚುತ್ತದೆ.

- ಸೂರ್ಯನ ಕಿರಣಗಳಿಂದ ಚರ್ಮ ಟ್ಯಾನ್ ಆಗಬಹುದು. ಆಗ ಹಲಸಿನ ರಸ ಮತ್ತು ನಿಂಬೆ ರಸ ಕಲಸಿ ಚರ್ಮಕ್ಕೆ ಹಚ್ಚಿ. ವಾರದಲ್ಲೊಮ್ಮೆ ಈ ರೀತಿ ಮಾಡಿದರೆ ತಿಂಗಳೊಳಗೆ ಫಲಿತಾಂಶ ತಿಳಿಯುತ್ತದೆ.

- ಪ್ರೊಟೀನ್ ಅಧಿಕವಾಗಿರುವ ಹಲಸಿನ ಬೀಜವನ್ನು ಅಡುಗೆಗೂ ಬಳಸಬಹುದು. ಇದರ ಹಲ್ವಾವೂ ಬಾದಾಮಿ ಹಲ್ವಾದಂತೆ ರುಚಿಕರವಾಗಿರುತ್ತದೆ. ಬೀಜದ ಗೊಜ್ಜೂ ರುಚಿ ರುಚಿಯಾಗಿರುತ್ತದೆ.

-ಹಲಸಿನ ಬೀಜ ಕೂದಲು ದಟ್ಟವಾಗಿ ಬೆಳೆಯಲು ಸಹಾಯಮಾಡುತ್ತದೆ. ಹಲಸು ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ. ನಿರ್ಜೀವ ಕೂದಲು ಉದುರಿ ಆರೋಗ್ಯಕರ ಕೂದಲು ಬೆಳೆಯುತ್ತದೆ. 

-ಹಲಸು ಕರಗಬಲ್ಲ ಫೈಬರ್ ಹೊಂದಿದ್ದು, ಜ್ರೀರ್ಣಕ್ರಿಯೆಗೆ ಸಹಕರಿಸುತ್ತದೆ. ದೊಡ್ಡ ಕರುಳಿನಲ್ಲಿ ಕರಗದೇ ಉಳಿದುರವ ಆಹಾರ ಪದಾರ್ಥವೂ ಹಲಸು ತಿಂದರೆ ಹೊರ ಬರುತ್ತದೆ.

-ಮಧುಮೇಹದಿಂದ ಬಳಲುವವರು ದಿನಕ್ಕೊಂದು ಬಟ್ಟಲು ಹಲಸು ಸೇವಿಸಿದರೆ, ಸಕ್ಕರೆಯ ಸಮತೋಲನ ಕಾಪಾಡಿಕೊಳ್ಳಬಹುದು. ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ. 

-ಗರ್ಭಾವಸ್ಥೆಯಲ್ಲಿರುವಾಗ ಹಾರ್ಮೋನುಗಳನ್ನು ನಿಯಂತ್ರಣದಲ್ಲಿಡುತ್ತದೆ.

-ಹಲಸು ತಿನ್ನುವುದರಿಂದ ನಿದ್ರಾಹೀನತೆಯಿಂದ ಬಳಲುವುದು ನಿವಾರಣೆಯಾಗುತ್ತದೆ. ನರ ವ್ಯವಸ್ಥೆಯನ್ನು ಸದೃಢಗೊಳಿಸುತ್ತದೆ.

- ಬಾಯಿ ಹುಣ್ಣಿಗೂ ಹಲಸು ರಾಮಬಾಣ.

loader