ಮಕ್ಕಳ ಬೆಳವಣಿಗೆಗೆ ಹಾರ್ಲಿಕ್ಸ್ ಅಭಿಯಾನ

life | Wednesday, May 30th, 2018
Suvarna Web Desk
Highlights

ಅಗತ್ಯ ಪೋಷಕಾಂಶಗಳು ಮಗುವಿನ ತ್ವರಿತ ಬೆಳವಣಿಗೆಗೆ ಸಹಕರಿಸುತ್ತೆ. ಇದರಿಂದ ಮಗು ಚಟುವಟಿಕೆಯಿಂದಿರುತ್ತದೆ. ಆ್ಯಕ್ಟಿವ್ ಆಗಿರುವ ಮಗುವಿನ ಸಾಧನೆ ನೋಡಲು ಪೋಷಕರಿಗೂ ಎಲ್ಲಿಲ್ಲದ ಹೆಮ್ಮೆ. ಈ ಮಕ್ಕಳ ಬೆಳವಣಿಗೆಗೆ ಏನೇನು ಅಗತ್ಯವೆಂಬುದನ್ನು ತಿಳಿಸಲು ಹಾರ್ಲಿಕ್ಸ್ ಅಭಿಯಾನವೊಂದನ್ನು ಆರಂಭಿಸಿದೆ.

ಎಲ್ಲ ಪೋಷಕರಿಗೂ ಮಕ್ಕಳು ಖುಷ್ ಖುಷಿಯಾಗಿ ಆಟವಾಡಿಕೊಂಡಿರಬೇಕೆಂಬ ಆಸೆ ಸಹಜ. ಹಾಗೆ ಚೆನ್ನಾಗಿ ತಿಂದು, ದಷ್ಟ ಪುಷ್ಟವಾಗಿ ಬೆಳೆಯಲಿ ಎನ್ನುವುದು ಎಲ್ಲ ತಾಯಿಂದಿರ ಬಯಕೆಯೂ ಹೌದು. ಅಗತ್ಯ ಪೋಷಕಾಂಶಗಳು ಮಗುವಿನ ತ್ವರಿತ ಬೆಳವಣಿಗೆಗೆ ಸಹಕರಿಸುತ್ತೆ. ಇದರಿಂದ ಮಗು ಚಟುವಟಿಕೆಯಿಂದಿರುತ್ತದೆ. ಆ್ಯಕ್ಟಿವ್ ಆಗಿರುವ ಮಗುವಿನ ಸಾಧನೆ ನೋಡಲು ಪೋಷಕರಿಗೂ ಎಲ್ಲಿಲ್ಲದ ಹೆಮ್ಮೆ. 

ಮಗು ವಿಭಿನ್ನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತೆ. ನೃತ್ಯ, ಫಿಂಗರ್ ಪೆಂಟೀಂಗ್, ಬಂಧುಗಳ ಎದುರಿಗೆ ರೈಮ್ಸ್ ಹೇಳಿಸುವಂಥ ಕೆಲವೊಂದು ಚಟುವಟಿಕೆಗಳಿಗೆ ಪೋಷಕರೇ ಪ್ರೋತ್ಸಾಹಿಸುತ್ತಾರೆ. ಮಕ್ಕಳ ಸಣ್ಣ ಪುಟ್ಟ ಚಟುವಟಿಕೆಗಳಿಂದಲೇ ಮಗುವಿನ ಬುದ್ಧಿಯೂ ಬೆಳೆಯುತ್ತದೆ. 

ಶೇ.90ರಷ್ಟು ಮಕ್ಕಳ ಮೆದುಳು 60 ವರ್ಷವಾಗಿರುವಾಗ ಬೆಳೆಯುತ್ತೆ ಎಂಬುದನ್ನು ಅಧ್ಯಯನಗಳು ದೃಢಪಡಿಸಿವೆ. ನರಕೋಶಗಳ ಸಂಪರ್ಕ ಹೊಂದಿರುವ ಮೆದುಳು ನರ ಕೋಶಗಳಿಂದ ರಚನೆಯಾಗಿವೆ. ಹೊಸ ಹೊಸ ಅನುಭವಗಳು ಮೆದುಳಿನಲ್ಲಿ ಹೊಸ ಸಂಪರ್ಕವನ್ನು ಕಲ್ಪಿಸುತ್ತವೆ. ಈ ಅನುಭವಗಳು ಪುನರಾವರ್ತನೆಯಾದರೆ ಮೆದುಳಿನ ಸಂಪರ್ಕ ಸದೃಢವಾಗಿ, ಬಲಗೊಳ್ಳುತ್ತದೆ. 

ಮಗು ಆರು ವರ್ಷವಾದಾಗ ಈ ನರಕೋಶಗಳ ಸಂಪರ್ಕಗಳು ಅಭಿವೃದ್ಧಿಯಾಗುತ್ತದೆ. ಮಗು ಬೆಳೆಯುತ್ತಿದ್ದಂತೆ ಈ ನರಕೋಶಗಳ ಅಭಿವೃದ್ಧಿ ಕುಂಠಿತವಾಗುತ್ತದೆ. ಮಕ್ಕಳು ಬೇಗ ಬೇಗ ಕಲಿಯುವುದು ಹಾಗೂ ತಾವಿರುವ ಪರಿಸರಕ್ಕೆ ಹೊಂದಿಕೊಳ್ಳುವುದು ಇದೇ ಕಾರಣಕ್ಕೆ. ಮೆದುಳಿನ ಮುಂಭಾಗ, ತಾತ್ಕಾಲಿಕ ಭಾಗ, ಮುಖ್ಯ ಭಾಗ, ಹಿಂಬದಿ ಹಾಗೂ ಕಿರು ಮೆದಳು ಇದೇ ವಯಸ್ಸಿನಲ್ಲಿ ಅಭಿವೃದ್ಧಿಗೊಳ್ಳುತ್ತದೆ. ಮೆದುಳಿನ ಈ ಭಾಗಗಳು ಒಂದೊಂದು ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿರುತ್ತವೆ. ಸಮಸ್ಯೆ ಬಗೆ ಹರಿಸಲು, ಮಾತನಾಡಲು, ವರ್ತನೆ ರೂಪುಗೊಳ್ಳಲು, ಭಾವನೆಗಳನ್ನು ಬೆಳೆಯಿಸಿಕೊಳ್ಳಲು, ಸ್ಪರ್ಶ ಜ್ಞಾನ ಹೆಚ್ಚಿಸಲು, ದೃಷ್ಟಿ ವ್ಯವಸ್ಥೆ ಉತ್ತಮಗೊಳ್ಳಲು, ಹೊಂದಾಣಿಕೆ ಸಾಧಿಸಲು, ಶೇಪ್ಸ್ ಮತ್ತು ಸೈಜ್‌ಗಳನ್ನು ಅರ್ಥ ಮಾಡಿಕೊಳ್ಳುವುದು...ಹೀಗೆ ಹಲವು ಚಟುವಟಿಕೆಗಳು ಮೆದುಳಿನ ಒಂದೊಂದು ಭಾಗದಲ್ಲಿ ನಡೆಯುತ್ತವೆ. ಮೆದಳು ಚುರುಕುಗೊಳ್ಳಲು ಅಗತ್ಯ ಪೋಷಕಾಂಶಗಳು ಅತ್ಯಗತ್ಯ. ಡಿಎಚ್‌ಎ, ಕೊಲೀನ್, ವಿಟಮಿನ್ ಬಿ, ಕಬ್ಬಿಣಾಂಶ, ಐಯೋಡೀನ್ ಮತ್ತು ಸತುವಿನಂಥ ಅಂಶಗಳು ದೇಹಕ್ಕೆ ಅತ್ಯಗತ್ಯ. 

ಡಿಎಚ್ಎ: ಮೆದುಳಿನ ಕಟ್ಟಡಕ್ಕೆ ಇದು ಅತ್ಯಗತ್ಯ. ಏಕಾಗ್ರತೆಯೊಂದಿಗೆ ಅರಿವು ಹೆಚ್ಚಾಗಿಲು ಡಿಎಚ್ಎ ಬೇಕು. ಇದರ ಕೊರತೆಯಿಂದ ಕೋಪ, ಉದ್ರೇಕ, ಆವೇಗ ಹೆಚ್ಚುತ್ತದೆ. 

ಐಯೋಡಿನ್ ಮತ್ತು ಜಿಂಕ್: ಸಾಮಾನ್ಯ ಮೆದುಳಿನ ಬೆಳವಣಿಗೆಗೆ ಹಾಗೂ ಯೋಚನಾ ಶಕ್ತಿ ಹೆಚ್ಚಲು ಇದು ಅತ್ಯಗತ್ಯ.

ಕೊಲೀನ್: ಜ್ಞಾಪಕ ಶಕ್ತಿ ಹೆಚ್ಚಲು ಇದು ಬೇಕೇ ಬೇಕು.

ಕಬ್ಬಿಣಾಂಶ: ಕಲಿಕಾ ಸಾಮರ್ಥ್ಯ ಹೆಚ್ಚಲು ಹಾಗೂ ಮೆದುಳಿನ ಸಾಧಾರಣ ಬೆಳವಣಿಗೆಗೆ ಕಬ್ಬಿಣಾಂಶ ಅಗತ್ಯ.

ವಿಟಮಿನ್ ಬಿ: ಕೇಂದ್ರ ನರ ವ್ಯವಸ್ಥೆ ಸೂಕ್ತವಾಗಿ ಬೆಳೆಯಲು ಇದು ಬೇಕು.

ಒಟ್ಟಾರೆ ಮೆದುಳಿನ ಬೆಳವಣಿಗೆಗೆ ಈ ಎಲ್ಲ ಅಂಶಗಳು ಅಗತ್ಯವಿರುವಷ್ಟು ಮಕ್ಕಳ ದೇಹ ಸೇರಬೇಕು. ಪೌಷ್ಟಿಕ ಆಹಾರವೆಂದು ಪೋಷಕರು ಮಕ್ಕಳಿಗೆ ನೀಡುವ ಆಹಾರದಲ್ಲಿ ಈ ಅತ್ಯಗತ್ಯ ಪೋಷಕಾಂಶಗಳು ಅಗತ್ಯದಷ್ಟು ಇರುವುದಿಲ್ಲ. ಕೊಟ್ಟಿದ್ದನ್ನೂ ಆ ಮಕ್ಕಳು ತಿನ್ನುವುದೂ ಇಲ್ಲ. ಮಕ್ಕಳನ್ನು ಆರೋಗ್ಯವಾಗಿಡುವುದು ಪ್ರತಿಯೊಬ್ಬ ತಾಯಿಯ ಆದ್ಯ ಕರ್ತವ್ಯವಾಗಿದ್ದು, ಮಗುವಿನ ಮೆದುಳಿನ ಬೆಳವಣಿಗೆಗೆ ಅಗತ್ಯದಷ್ಟು ಪೋಷಕಾಂಶಗಳನ್ನು ನೀಡಬೇಕು. ಒಂದು ಪೋಷಕಾಂಶ ಒಂದು ಆಹಾರದಲ್ಲಿದ್ದರೆ, ಮತ್ತೊಂದು ಇನ್ನೊಂದರಲ್ಲಿ ಇರುತ್ತದೆ. ಎಲ್ಲವನ್ನೂ ಅಗತ್ಯದಷ್ಟು ನೀಡುವುದು ಸುಲಭದ ಮಾತಲ್ಲ. ಉದಾಹರಣೆಗೆ ಡಿಎಚ್‌ಎ ಸಸ್ಯಜನ್ಯ ಆಹಾರಗಳಲ್ಲಿ ಸಿಗೋಲ್ಲ. ಅಕಸ್ಮಾತ್ ಸಿಕ್ಕಿದರೂ ಅದು ಡಿಎಚ್ಎ ಆಗಿ ಬದಲಾಗುವ ಅಂಶ ಬಹಳ ಕಡಿಮೆ.

ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡ ಜೂನಿಯರ್ ಹಾರ್ಲಿಕ್ಸ್ ಅನ್ನು ಸಿದ್ಧಪಡಿಸಿದ್ದು, ಮಕ್ಕಳ ಒಟ್ಟಾರೆ ಅಭಿವೃದ್ಧಿಗೆ ಸಹಕಾರಿ. ಮೆದುಳಿನ ಅಭಿವೃದ್ಧಿಗೆ ಅದರಲ್ಲಿಯೂ 2-6 ವರ್ಷಗಳ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ವೈಜ್ಞಾನಿಕವಾಗಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಇದು ದೈಹಿಕ ಬೆಳವಣಿಗೆಗೂ ಸಹಕಾರಿ.

ರುಚಿ ರುಚಿಯಾಗಿರುವ ಹಾರ್ಲಿಕ್ಸ್ ಅಗತ್ಯದಷ್ಟು ಡಿಎಚ್‌ಎ, ಕೊಲೀನ್ ಮತ್ತು ಮೆದುಳಿಗೆ ಅಗತ್ಯವಾದ ಇತರೆ ಪೋಷಕಾಂಶಗಳೊಂದಿಗೆ ದೈಹಿಕ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳನ್ನು ಒಳಗೊಂಡಿದೆ.

ಮಗು ತನ್ನ ಸುತ್ತಲಿರುವ ದೊಡ್ಡವರನ್ನು ನೋಡಿ ತನ್ನಲ್ಲಿರುವ ಅಷ್ಟೂ ಶಕ್ತಿಯನ್ನು ಬಳಸಿಕೊಂಡು ವಿವಿಧ ಚಟುವಟಿಕೆಗಳಲ್ಲಿ ಹೇಗೆ ಭಾಗಿಯಾಗುತ್ತದೆ ಎಂಬುದನ್ನು ತೋರಿಸಲು ಹಾರ್ಲಿಕ್ಸ್ ಹೊಸ ಅಭಿಯಾನವೊಂದನ್ನು ಆರಂಭಿಸಿದೆ. 
 

Comments 0
Add Comment

  Related Posts

  3 gante 30 dina 30 second Deleted Scenes

  video | Sunday, December 17th, 2017

  3 gante 30 dina 30 second Deleted Scenes

  video | Sunday, December 17th, 2017
  Nirupama K S