ಮೆಣಸಿನಕಾಯಿ ತಿಂದರೆ ಉರಿ ಹತ್ತುವುದ್ಟೇ ಎಂದು ಆಲೋಚಿಸಬೇಡಿ. ಅದು ಆರೋಗ್ಯ್ಕೆ ಹೇಗೆ ಪೂರಕ ಎಂಬುದನ್ನೂ ತಿಳಿದುಕೊಳ್ಳಿ.

ರಕ್ತ ಹೆಪ್ಪುಗಟ್ಟುವುದರಿಂದ ಆಗಬಹುದಾದ ಮಾರಣಾಂತಿಕ ಅವಘಡ ತಡೆಗಟ್ಟುತ್ತೆ. ಹೃದಯ ರಕ್ತ ನಾಳದ ಕಾಯಿಲೆಗೆ ಒಳಪಟ್ಟವರಿಗೆ ಮೆಣಸಿನ ಕಾಯಿ ಬಳಸುವುದು ಆರೋಗ್ಯಕ್ಕೆ ಅನುಕೂಲಕರ. ಮೆಣಸಿನ ಕಾಯಿ ಪರಿಣಾಮಕಾರಿ ನೋವುನಿವಾರಕ.

ಕಾರಣ ಪೆಪ್ಪರ್‌ನಲ್ಲಿ ಅಧಿಕ ಪ್ರಮಾಣದಲ್ಲಿರುವ ಕ್ಯಾಪ್ಸೆಸಿನ್ ಅಂಶ. ಇದರಿಂದ ಸಂಧಿವಾತ, ಬೆನ್ನು ನೋವು ಮತ್ತು ಇನ್ನಿತರ ಕಾಯಿಲೆಗಳು ಕಡಿಮೆಯಾಗುತ್ತವೆ.ಹೊಟ್ಟೆಯಲ್ಲಿ ಅಲ್ಸರ್ ಅಥವಾ ಆಸಿಡ್ ಸಮಸ್ಯೆಗಳು ಇದ್ದಲ್ಲಿ ಮೆಣಸಿನ ಕಾಯಿಯನ್ನು ತಿನ್ನಬಾರದು. ಆದರೆ ಇತ್ತೀಚಿಗೆ ಸಂಶೋಧಕರು ಮೆಣಸಿನ ಕಾಯಿಯಲ್ಲಿ ಅಧಿಕ ಪ್ರಮಾಣದಲ್ಲಿ ಇರುವ ಕ್ಯಾಯೇನೆ ಎಂಬ ಅಂಶ ಅಲ್ಸರ್ ಕಡಿಮೆ ಮಾಡುತ್ತದೆ ಎಂದಿದ್ದಾರೆ