ಆ್ಯಮಿ ಜಾಕ್ಸನ್ ಡಯೆಟ್ ಮಂತ್ರವಿದು

Fitness secret of Amy Jackson
Highlights

ತನ್ನ ದೇಹಸಿರಿಯಿಂದಲೇ ಪಡ್ಡೆಗಳ ನಿದ್ದೆ ಕೆಡಿಸುತ್ತಿರುವ ಬೆಡಗಿಗೆ ಒಂದು ಮಾದಕ ಹೆಸರು ಆ್ಯಮಿ. ಈ ಬ್ರಿಟಿಷ್ ಮಾಡೆಲ್ ಕಂ ಬಾಲಿವುಡ್ ನಟಿಯ ಕೂದಲು ಮತ್ತು ಸ್ಕಿನ್ ಟೋನ್ ಅದ್ಭುತ. ಇಂತಿಪ್ಪ ಆ್ಯಮಿ ಜಾಕ್ಸನ್ ಹೊಟ್ಟೆಗೇನ್ ತಿಂತಾರೆ? ಮತ್ತು ಜಿಮ್‌ನಲ್ಲಿ ಹೆಂಗೆ ಬೆವರಿಳಿಸ್ತಾರೆ ಅನ್ನೋ ಡೀಟೈಲ್ಸ್ ಇಲ್ಲಿದೆ. 

ಹಾಲಿವುಡ್‌ನ ನಂ.೧ ನಟಿ ಆ್ಯಂಜಲೀನಾ ಜೋಲಿ ಅವರ ಡಯೆಟ್‌ನ್ನೇ ಈಕೆ ಫಾಲೋ ಮಾಡೋದಂತೆ. 

ಡಯೆಟ್ ಹಿಂಗಿರುತ್ತೆ

ಜಾಸ್ತಿನೂ ತಿನ್ನಲ್ಲ, ಕಡಿಮೇನೂ ತಿನ್ನಲ್ಲ. ಹೊಟ್ಟೆ ಬಯಸೋದಕ್ಕಿಂತ ಒಂಚೂರು ಕಮ್ಮಿ ತಿಂತಾರೆ ಅಷ್ಟೇ.  ದಿನ ಆರಂಭವಾಗೋದು ನಿಂಬೆ ಬೆರೆಸಿದ ನೀರು ಕುಡಿಯೋದ್ರಿಂದ.  ಬೆಳಗಿನ ಉಪಹಾರಕ್ಕೆ ಮೊಟ್ಟೆ ಮತ್ತು ಗಂಜಿ. ಮಧ್ಯಾಹ್ನಕ್ಕೆ ಗ್ರಿಲ್ಡ್ ಫಿಶ್ ಅಥವಾ ಚಿಕನ್, ತರಕಾರಿ ಮತ್ತು ಬೇಯಿಸಿದ ಆಲೂಗಡ್ಡೆ.  ಸಂಜೆ 7 ಗಂಟೆಗೆ ಕರೆಕ್ಟಾಗಿ ಊಟ ಮಾಡ್ತಾರೆ. ಊಟ ಅಂದ್ರೆ ಒಂದು ಬೌಲ್ ಸಲಾಡ್ಸ್ ಅಷ್ಟೇ.

ಕಿಕ್‌ಬಾಕ್ಸಿಂಗ್ ಮಾಡ್ತಾರೆ!

ಕಿಕ್‌ಬಾಕ್ಸಿಂಗ್ ಮಾಡೋ ಹುಡುಗಿಗೆ ಇದು ಕೇವಲ ಶಕ್ತಿ ಕೊಡೋದಷ್ಟೇ ಅಲ್ಲ, ದೇಹಕ್ಕೆ ಫ್ಲೆಕ್ಸಿಬಿಲಿಟಿಯನ್ನೂ ತಂದುಕೊಡುತ್ತೆ ಅನ್ನೋದು ಅನುಭವಕ್ಕೆ ಬರುತ್ತೆ. ಇದರಿಂದ ಸ್ಟೆಮಿನಾ ಹೆಚ್ಚಿದೆಯಂತೆ. ತೊಡೆ ಹಾಗೂ ಹಿಂಭಾಗಕ್ಕೆ ಹೆಚ್ಚಿನ ಸ್ಟ್ರೆಂಥ್ ಇದ್ರಿಂದ ಬರುತ್ತಂತೆ. ಅಷ್ಟೇ ಅಲ್ಲ, ಪೋಲಿ ಹುಡುಗ್ರು ಕಿಚಾಯಿಸಿದ್ರೂ ಕಿಕ್‌ಬಾಕ್ಸಿಂಗ್ ಉಪಯೋಗಕ್ಕೆ ಬರುತ್ತಂತೆ! 

ಇದಲ್ಲದೇ ಬೆಳ್ಳಂಬೆಳಗ್ಗೆ 1 ಗಂಟೆ ಈಜ್ತಾರಂತೆ. ಯೋಗ ಮಾಡೋದನ್ನ ತಪ್ಪಿಸಲ್ಲ. ಏರೋಬಿಕ್ಸ್ ಮಾಡ್ತಾರೆ, ದಿನದಲ್ಲಿ ಒಂದಿಷ್ಟು ಹೊತ್ತು ಡಾನ್ಸ್ ಮಾಡದಿದ್ದರೆ ರಾತ್ರಿ ನಿದ್ದೆ ಬರಲ್ಲ. ಇವೆಲ್ಲದರ ಜೊತೆಗೆ ಹಾರ್ಸ್ ರೈಡಿಂಗ್ ಈಕೆಗೆ ಗೊತ್ತು!

loader