ಹುಡುಗರೇ ನೀವು ಹುಡುಗಿಯೊಂದಿಗೆ ಮೊದಲ ಡೇಟ್’ಗೆ ಹೋದಾಗ ಹೀಗೆ ನಡೆದುಕೊಳ್ಳದಿರಿ..?

First Published 18, Feb 2018, 1:41 PM IST
First date mistakes that you shouldnt ignore
Highlights

ಹುಡುಗ ಹುಡುಗಿಯರು ಮೊದಲ ಬಾರಿ ಡೇಟ್ ಮಾಡುವಾಗ ಅನೇಕ ಗೊಂದಲಗಳಿರುತ್ತದೆ. ಹೇಗೆ ವರ್ತಿಸಿದರೆ ನಿಮ್ಮ ಡೇಟ್ ಹಾಳಾಗುತ್ತದೆ. ಹೇಗೆ ಇರಬೇಕು ಎನ್ನುವ ಕೆಲ ಟಿಪ್ಸ್’ಗಳು ಇಲ್ಲಿದೆ. ಹುಡುಗರು ಮೊದಲ ಡೇಟ್ ವೇಳೆ ಹೇಗೆ ನಡೆದುಕೊಂಡರೆ ಹುಡುಗಿಗೆ ಇಷ್ಟವಾಗುತ್ತದೆ. ಹೇಗೆ ನಡೆದುಕೊಂಡರೆ ಆಕೆಯನ್ನು ಓಲೈಸಲಾಗದು ಎನ್ನುವ ಸಲಹೆಗಳಿಲ್ಲಿದೆ ಹುಡುಗರೇ ತಪ್ಪದೇ ತಿಳಿದುಕೊಳ್ಳಿ. ಅಲ್ಲದೇ ಫಸ್ಟ್ ಡೇಟ್’ನಲ್ಲಿ ನೀವು ಮಿಸ್ಟರ್ ರೈಟ್ ಎನ್ನಿಸಿಕೊಳ್ಳಲು ಯಾವೆಲ್ಲಾ ತಪ್ಪುಗಳನ್ನು ಮಾಡಬಾರದು ಎಂದು ತಿಳಿಸುತ್ತೇವೆ.

ಬೆಂಗಳೂರು : ಹುಡುಗ ಹುಡುಗಿಯರು ಮೊದಲ ಬಾರಿ ಡೇಟ್ ಮಾಡುವಾಗ ಅನೇಕ ಗೊಂದಲಗಳಿರುತ್ತದೆ. ಹೇಗೆ ವರ್ತಿಸಿದರೆ ನಿಮ್ಮ ಡೇಟ್ ಹಾಳಾಗುತ್ತದೆ. ಹೇಗೆ ಇರಬೇಕು ಎನ್ನುವ ಕೆಲ ಟಿಪ್ಸ್’ಗಳು ಇಲ್ಲಿದೆ. ಹುಡುಗರು ಮೊದಲ ಡೇಟ್ ವೇಳೆ ಹೇಗೆ ನಡೆದುಕೊಂಡರೆ ಹುಡುಗಿಗೆ ಇಷ್ಟವಾಗುತ್ತದೆ. ಹೇಗೆ ನಡೆದುಕೊಂಡರೆ ಆಕೆಯನ್ನು ಓಲೈಸಲಾಗದು ಎನ್ನುವ ಸಲಹೆಗಳಿಲ್ಲಿದೆ ಹುಡುಗರೇ ತಪ್ಪದೇ ತಿಳಿದುಕೊಳ್ಳಿ. ಅಲ್ಲದೇ ಫಸ್ಟ್ ಡೇಟ್’ನಲ್ಲಿ ನೀವು ಮಿಸ್ಟರ್ ರೈಟ್ ಎನ್ನಿಸಿಕೊಳ್ಳಲು ಯಾವೆಲ್ಲಾ ತಪ್ಪುಗಳನ್ನು ಮಾಡಬಾರದು ಎಂದು ತಿಳಿಸುತ್ತೇವೆ.

ಕೇವಲ ನಿಮ್ಮ ಬಗ್ಗೆಯೇ ಹೇಳಿಕೊಳ್ಳದಿರಿ : ಹುಡುಗರೇ  ಹುಡುಗಿಯೊಂದಿಗೆ ಫಸ್ಟ್ ಡೇಟ್’ಗೆ ಹೋದಾಗ ನಿಮ್ಮ ಬಗ್ಗೆಯೇ ಮಾತನಾಡದಿರಿ, ಈ ವೇಳೆ ಪರಸ್ಪರ ವಿಚಾರಗಳ ಚರ್ಚೆಗೆ ಅವಕಾಶವಿಲ್ಲದಂತಾಗುತ್ತದೆ. ಆಗ ಹುಡುಗಿಗೆ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯಗಳು ಬರಲು ಸಾಧ್ಯವಿಲ್ಲ.

ನೀವು ತೆರಳಿದ ರೆಸ್ಟೊರಂಟ್ ಸ್ಟಾಫ್’ಗಳನ್ನು ಗೌರವದಿಂದ ಮಾತನಾಡಿಸಿ

ನಿಮ್ಮ ಫಸ್ಟ್ ಡೇಟ್’ಗೆಂದು ನೀವು ಯಾವುದೇ ರೆಸ್ಟೊರೆಂಟ್’ಗೆ ಹೋದಾಗ ಅಲ್ಲಿರುವ ಸಿಬ್ಬಂದಿಯನ್ನು ಗೌರವದಿಂದ ಮಾತನಾಡಿಸಿ, ಆಗ ಆಕೆಗೂ ನಿಮ್ಮ ಮೇಲೆ ಗೌರವ ಉಂಟಾಗಲು ಸಹಾಯವಾಗುತ್ತದೆ.

ನಿಮ್ಮ ಹಳೆಯ ಸಂಗಾತಿಗಳ ಬಗ್ಗೆ ಮಾತನಾಡದಿರಿ

ಮೊದಲ ಡೇಟ್’ಗೆಂದು ಹೋದಾಗ ನಿಮ್ಮ ಹಳೆಯ ಸಂಗಾತಿ, ಮೋಸ, ಹಳೆ ಸಂಬಂಧಗಳ ಬಗ್ಗೆಯೆಲ್ಲಾ ಮಾತನಾಡಿ ಸಮಯವನ್ನು ವ್ಯರ್ಥ ಮಾಡದಿರಿ. ನಿಮ್ಮ ಬಗ್ಗೆ ಅರಿತುಕೊಳ್ಳಲು ಇದೊಂದು ಉತ್ತಮ ಸಮಯವಾಗಿರುತ್ತದೆ.

ಹೆಚ್ಚು ಡ್ರಿಂಕ್ಸ್’ಗಳನ್ನು ಆರ್ಡರ್ ಮಾಡುವುದು ತಪ್ಪು

ಹುಡುಗಿಯೊಂದಿಗೆ ಡೇಟ್’ಗೆ ಹೋದಾಗ ಒಂದಕ್ಕಿಂತ ಅಧಿಕ ಡ್ರಿಂಕ್ಸ್’ಗಳನ್ನು ಆರ್ಡರ್ ಮಾಡುವುದು ಈ ರೀತಿಯೆಲ್ಲಾ ವರ್ತಿಸದಿರಿ, ಯಾಕೆಂದರೆ ಇದೊಂದು ರೀತಿಯ ಸಂದರ್ಶನವಿದ್ದಂತೆಯೇ ಸರಿ.  ಇದು ಎಂಜಾಯ್ ಮಾಡುವ ಸಮಯವಲ್ಲ. ಆದಷ್ಟು ಶಿಸ್ತಿನಿಂದ ವರ್ತಿಸಿ.

ಬೇರೆ ಬೇರೆ ಮಹಿಳೆಯರನ್ನು ಗಮನಿಸುತ್ತಿರುವುದು

ಮೊದಲ ಡೇಟ್  ವೇಳೆ ನೀವು ಓರ್ವ ಹುಡಗಿಯೊಂದಿಗೆ ಇದ್ದ ಸಂದರ್ಭದಲ್ಲಿ ಬೇರೆ ಬೇರೆ ಮಹಿಳೆಯರನ್ನು ಗಮನಿಸುತ್ತಿರುವುದು ಸಭ್ಯತೆ ಎನಿಸಲಾರದು. ಆದ್ದರಿಂದ ಆದಷ್ಟು ಈ ವೇಳೆ ನೀವು ಸಭ್ಯರಾಗಿ ವರ್ತಿಸಿ.

loader