Asianet Suvarna News Asianet Suvarna News

ಈ ವಾರ ನಿಮ್ಮ ರಾಶಿ ಫಲದಲ್ಲಿ ಏನಿದೆ : ಯಾವ ರಾಶಿಯವರಿಗೆ ಯಾವ ಫಲ..?

ಈ ವಾರ ನಿಮ್ಮ ರಾಶಿ ಫಲದಲ್ಲಿ ಏನಿದೆ : ಯಾವ ರಾಶಿಯವರಿಗೆ ಯಾವ ಫಲ..?

Dina bhavishya in kannada 04 Feb 2018

ಮೇಷ

ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ.

ಚಂದ್ರಗ್ರಹಣದ ನಂತರ ಒಳ್ಳೆಯ ದಿನಗಳು

ಪ್ರಾರಂಭವಾಗಲಿವೆ. ವಾಹನ ಚಾಲನೆ

ಮಾಡುವಾಗಿ ಜಾಗೃತೆ ಇರಲಿ. ಕಣ್ಣಿನ ಸಮಸ್ಯೆ ಹೆಚ್ಚಾಗಲಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗುವಿರಿ. ಹೆಣ್ಣು

ಮಕ್ಕಳಿಗೆ ಒಡವೆಗಳನ್ನು ಕೊಳ್ಳುವ ಭಾಗ್ಯವಿದೆ.

 

ವೃಷಭ

ಹಣಕಾಸಿನ ತೊಂದರೆಯಿಂದ ಕೊಂಚ ಹೊರಗೆ

ಬರುವಿರಿ. ಖರ್ಚಿನ ಮೇಲೆ ಸಾಧ್ಯವಾದಷ್ಟು

ಹಿಡಿತ ಸಾಧಿಸಿ. ಮಕ್ಕಳ ಆರೋಗ್ಯದಲ್ಲಿ ಸುಧಾರಣೆ

ಕಾಣಲಿದೆ. ದೂರದ ಬಂಧುಗಳಿಂದ ಶುಭ ವಾರ್ತೆ

ಕೇಳುವಿರಿ. ಖ್ಯಾತನಾಮರನ್ನು ಭೇಟಿ ಮಾಡುವ ಅವಕಾಶ

ಒದಗಿ ಬರಲಿದೆ. ಕೋಪ ಕಡಿಮೆ ಮಾಡಿಕೊಳ್ಳಿ.

 

ಮಿಥುನ

ಸಣ್ಣ ಪುಟ್ಟ ಸಂಗತಿಗಳನ್ನು ಕಡೆಗಣಿಸಬೇಡಿ.

ನವೀನ ವಿಚಾರಗಳಿಂದ ಸಂತಸಗೊಳ್ಳುವಿರಿ. ಹೊಸ

ವಾಹನ ಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಅನಿರೀಕ್ಷಿತ

ಘಟನೆಗಳಿಂದ ಮಾನಸಿಕ ತಳಮಳ. ಧೈರ್ಯದಿಂದ

ಎಲ್ಲವನ್ನೂ ಎದುರಿಸಿ. ಒಂದೇ ವಿಚಾರದ ಬಗ್ಗೆ ಪದೇ ಪದೇ

ತಲೆಕೆಡಿಸಿಕೊಳ್ಳುವುದು ಬೇಡ. ಆಗುವುದೆಲ್ಲಾ ಒಳ್ಳೆಯದಕ್ಕೆ.

 

ಕಟಕ

ಅಧಿಕ ಧನಾಗಮನವಾಗಲಿದೆ. ತಂದೆಯಿಂದ

ಹೊಸ ಉದ್ಯಮ ಸ್ಥಾಪಿಸಲು ಸಹಕಾರ. ಆಹಾರ

ಸೇವನೆಯಲ್ಲಿ ಸಂಯಮ ಇರಲಿ. ಅತಿಯಾಗಿ

ಮಾತನಾಡುವ ಅಭ್ಯಾಸವಿರುವವರು ತುಸು ಎಚ್ಚರಿಕೆ

ಯಿಂದ ಇರಬೇಕಾಗುತ್ತದೆ. ಸ್ನೇಹಿತರಿಂದ ಶುಭ ಸುದ್ದಿ.

ತಂದೆ ತಾಯಿಗಳ ಮಾತನ್ನು ಅನುಸರಿಸಿ.

 

ಸಿಂಹ

ಬ್ಯಾಂಕ್ ನೌಕರರಿಗೆ ಶುಭವಾರ್ತೆ. ಉದ್ಯೋಗದಲ್ಲಿ

ನಿರೀಕ್ಷಿತ ಪ್ರಗತಿ ಸಿಗಲಿದೆ. ಬಹುದಿನಗಳ ಕನಸು

ನನಸಾಗಲಿದೆ. ಕಲಾ ಚಟುವಟಿಕೆಗಳಲ್ಲಿ

ಸಕ್ರಿಯವಾಗುವಿರಿ. ಹೆಣ್ಣು ಮಕ್ಕಳಿಗೆ ಮದುವೆಯ ಭಾಗ್ಯ

ಕೂಡಿ ಬರಲಿದೆ. ಸಂಬಂಧಗಳ ಬಗ್ಗೆ ಎಚ್ಚರಿಕೆಯಿಂದ ವರ್ತಿಸಿ.

ರಾಜಕಾರಣಿಗಳ ಜೀವನದಲ್ಲಿ ದೊಡ್ಡ ತಿರುವ ಏರ್ಪಡಲಿದೆ.

 

ಕನ್ಯಾ

ದೂರದ ಪ್ರಯಾಣದಿಂದ ಜೀವನಕ್ಕೆ ಹೊಸ

ಹುರುಪು ಬರಲಿದೆ. ನಿಮ್ಮ ಕಾರ್ಯವನ್ನು ಹೆಚ್ಚಿನ

ಸಂಖ್ಯೆಯ ಜನರು ಮೆಚ್ಚಿಕೊಳ್ಳಲಿದ್ದಾರೆ.

ಉಳಿತಾಯದ ಹಣ ಬಳಕೆಯಾಗಲಿದೆ. ಆಲೋಚಿಸಿ

ನಿರ್ಧಾರಗಳನ್ನು ತೆಗೆದುಕೊಳ್ಳಿ. ಅಧಿಕಾರದ ಸ್ಥಾನದಲ್ಲಿರು

ವವರು ಸಮಾಜಮುಖಿ ಕಾರ್ಯಗಳನ್ನು ಮಾಡುವಿರಿ.

 

ತುಲಾ

ಯಾರ ಸಹಾಯವೂ ಇಲ್ಲದೇ ಅಂದುಕೊಂಡ

ದ್ದನ್ನು ಮಾಡಿ ಮುಗಿಸುವ ಅವಕಾಶಗಳಿವೆ.

ಚಿನ್ನಾಭರಣಕೊಳ್ಳುವ ಸಾಧ್ಯತೆ ಇದೆ. ಒಂದು

ವಿಚಾರದ ಬಗ್ಗೆ ಪೂರ್ಣವಾಗಿ ತಿಳಿದುಕೊಳ್ಳದ ಹೊರತು

ಪ್ರತಿಕ್ರಿಯೆ ನೀಡಬೇಡಿ. ಹತ್ತಿರದ ಬಂಧುಗಳೊಂದಿಗೆ

ಆತ್ಮೀಯವಾಗಿ ವರ್ತಿಸಿ. ಕೋಪ ಕಡಿಮೆಯಾಗುತ್ತದೆ.

 

 

ವೃಶ್ಚಿಕ

ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಿರಿ.

ಅನಾವಶ್ಯಕ ಗೊಂದಲಗಳಿಗೆ ಮಣೆ ಹಾಕುವುದು

ಬೇಡ. ಆದಾಯದಲ್ಲಿ ಏರಿಕೆ ಕಂಡುಬರಲಿದೆ.

ಸುಲಭವಾಗಿ ಯಾರನ್ನೂ ನಂಬಬೇಡಿ. ಹೊಸ ವಿಚಾರಗಳತ್ತ

ಮನಸ್ಸು ಹರಿಯಲಿದೆ. ಉದ್ಯೋಗದಲ್ಲಿ ಪ್ರಗತಿ.

ಆರೋಗ್ಯದಲ್ಲಿ ಸ್ವಲ್ಪ ಮಟ್ಟಿನ ಚೇತರಿಕೆ ಕಾಣಲಿದೆ.

 

ಧನಸ್ಸು

ಹೊಸ ವ್ಯಕ್ತಿಗಳ ಪರಿಚಯವಾಗಿಲಿದೆ. ಇವರೇ

ಮುಂದೆ ನಿಮಗೆ ಹೆಚ್ಚು ಬೇಕಾದ

ವ್ಯಕ್ತಿಗಳಾಗಬಹುದು. ಒಳ್ಳೆಯ ದಿನಗಳ

ಪ್ರಾರಂಭ. ಪ್ರೀತಿಯ ವಿಚಾರದಲ್ಲಿ ಒಳ್ಳೆಯದಾಗಲಿದೆ.

ಹಣಕಾಸಿನ ವ್ಯವಹಾರದಲ್ಲಿ ಗೊಂದಲಗಳಾಗುವ ಸಾಧ್ಯ

 

ಮಕರ

ಹತ್ತಿರದ ವ್ಯಕ್ತಿಗಳ ಸಹಾಯದಿಂದ ಒಳ್ಳೆಯ

ಉದ್ಯೋಗ ದೊರೆಯಲಿದೆ. ಸಾಹಸ ಪ್ರಿಯರಿಗೆ

ಹೆಚ್ಚು ಅವಕಾಶಗಳಿವೆ. ರಾಜಕಾರಣಿಗಳಿಗೆ

ಮುನ್ನಡೆ ಸಿಗಲಿದೆ. ಅಸಹಾಯಕರಿಗೆ ಕೈಲಾದ ಸಹಾಯ

ಮಾಡಿ. ವಾದ-ವಿವಾದಗಳಿಂದ ದೂರ ಇರಿ.

 

ಕುಂಭ

ಅವಿವಾಹಿತ ಹುಡುಗಿಯರಿಗೆ ಒಳ್ಳೆಯ ಆಹಾರ

ದಲ್ಲಿ ವ್ಯತ್ಯಯವಾಗದಿರಲಿ. ಗೆಳೆಯರೊಂದಿಗೆ

ಸೇರಿ ದೂರದ ಪ್ರಯಾಣ ಕೈಗೊಳ್ಳುವಿರಿ.

ತಂದೆ-ತಾಯಿಯೊಂದಿಗೆ ಆತ್ಮೀಯವಾಗಿ ನಡೆದುಕೊಳ್ಳಿ.

ಪುಸ್ತಕ ಓದುವ ಹವ್ಯಾಸ ಆರಂಭವಾಗಲಿದೆ. ಹಣಕಾಸಿನ

ವ್ಯವಹಾರದಲ್ಲಿ ಎಚ್ಚರಿಗೆ ವಹಿಸುವುದು ಅಗತ್ಯ.

 

ಮೀನ

ಆತ್ಮೀಯರಿಂದ ಪಡೆದ ಸಲಹೆಗಳು ಮುಂದೆ

ಸಹಾಯಕ್ಕೆ ಬರಲಿವೆ. ಸಾಫ್ಟ್‌ವೇರ್

ಉದ್ಯೋಗಿಗಳಿಗೆ ಅಲ್ಪ ಮುನ್ನಡೆ ಸಿಗಲಿದೆ.

ಅಧಿಕಾರ ಸ್ಥಾನದಲ್ಲಿರುವವರು ಎಚ್ಚರಿಕೆಯಿಂದ ಹೆಜ್ಜೆ

ಇಡಬೇಕು. ಬೆಳಿಗ್ಗೆ ವ್ಯಾಯಾಮ ಮಾಡುವುದು ಉತ್ತಮ.

Follow Us:
Download App:
  • android
  • ios