ಪ್ರೀತಿಯನ್ನು ನಿವೇದಿಸಿಕೊಳ್ಳಲಾ? ಬೇಡವಾ?

Advice this girl about her crush
Highlights

ಮನೆಗೆ ಸದಾ ಆಗಮಿಸುವ ಅಣ್ಣನ ಸ್ನೇಹಿತನೊಂದಿಗೆ ಈಕೆಗೋ ಕ್ರಷ್. ಪ್ರೀತಿ ನಿವೇದಿಸಿಕೊಳ್ಳಲು ಭಯ. ರಿಜೆಕ್ಟೆ ಆಗಬಹುದಾ? ಅಥವಾ ನನ್ನ ಇಮೇಜ್ ಹಾಳಾಗುತ್ತಾ ಎನ್ನುವ ಅಳುಕು. ನಿಮ್ಮ ಸಲಹೆ ಕೇಳುತ್ತಿರುವ ಈ ಯುವತಿಗೆ ಏನೆಂದು ಹೇಳುತ್ತೀರಿ?

ನನ್ನ ಅಣ್ಣನ ಗೆಳೆಯನ ಜೊತೆಗೆ ನನಗೆ ಪ್ರೀತಿಯಾಗಿದೆ. ಅವನು ಅಣ್ಣನ ಜೊತೆಗೆ ಆಗಾಗ ನಮ್ಮ ಮನೆಗೆ ಬರುತ್ತಿದ್ದಾಗ ಅವನನ್ನು ಮತ್ತೆ ಮತ್ತೆ ನೋಡಿ ತುಂಬಾ ಇಷ್ಟವಾಗಿಬಿಟ್ಟಿದ್ದಾನೆ. ಆದರೆ ಇದನ್ನು ಅವನಿಗೆ ನಾನಾಗಿಯೇ ಹೇಳುವ ಧೈರ್ಯವಿಲ್ಲ. ಅವನಿಗೆ ನಾನೆಂದರೆ ಇಷ್ಟವಾ? ಅದೂ ಗೊತ್ತಿಲ್ಲ. ಮನೆಗೆ ಅತಿಥಿಯಾಗಿ ಬಂದವರ ಬಗ್ಗೆ ಹೀಗೆಲ್ಲಾ ಯೋಚನೆ ಮಾಡಬಾರದು, ನನ್ನ ಮನೆಯವರಿಗೆ ಈ ವಿಚಾರ ಗೊತ್ತಾದರೆ ಏನು ಅಂದುಕೊಳ್ಳುತ್ತಾರೋ? 

ಆ ಹುಡುಗನಿಗೆ ಗೊತ್ತಾದರೆ ನನ್ನ ಬಗ್ಗೆ, ನನ್ನ ಅಣ್ಣನ ಬಗ್ಗೆ, ನಮ್ಮ ಮನೆಯವರ ಬಗ್ಗೆ ಏನೆಂದುಕೊಂಡಾನು ಎನ್ನುವ ಭಯ ಕಾಡುತ್ತಲೇ ಇದೆ. ಈಗ ನನ್ನ ಪ್ರೀತಿ ಉಳಿಸಿಕೊಳ್ಳುವುದಾ? ಎಲ್ಲವನ್ನೂ ಮರೆತು ಸುಮ್ಮನಾಗುವುದಾ? ಗೊತ್ತಾಗುತ್ತಿಲ್ಲ. ದಯವಿಟ್ಟು ಏನಾದರೂ ಸಲಹೆ ನೀಡಿ.

- ಹೆಸರು ಬೇಡ

ನಿಮ್ಮಲ್ಲಿ ಅವಳ ಮನಸ್ಸಿಗೆ ಮುದ ನೀಡುವಂಥ ಸಲಹೆಗಳಿದ್ದರೆ suvarnanewsindia@gmail.com ಇಲ್ಲಿಗೆ ಮೇಲ್ ಮಾಡಿ

 

loader