ಕಣ್ಣು ವಿವಿಧ ಕಾರಣಗಳಿಗೆ ಆಯಾಸಗೊಳ್ಳುತ್ತದೆ. ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಂಡರೆ, ಹತ್ತು ಹಲವು ಇತರೆ ಸಣ್ಣ ಪುಟ್ಟ ಸಮಸ್ಯೆಗಳೂ ಶಮನವಾಗುತ್ತದೆ. ಏನಿವು ಸಿಂಪಲ್ ಟಿಪ್ಸ್.

- ಮುಂಜಾನೆಯ ಹಾಗೂ ಸಂಜೆಯ ಸೂರ್ಯನ ಕಿರಣಗಳು ದೇಹಕ್ಕೆ ವಿಟಮಿನ್ ಡಿ ಒದಗಿಸುತ್ತದೆ. ಜೊತೆಗೆ ಕಣ್ಣಿನ ಆರೋಗ್ಯಕ್ಕೂ ಒಳಿತು. ಈ ಕಿರಣಗಳು ಕಣ್ಣಿನ ಮೇಲೆ ಬೀಳುವುದರಿಂದ ಸ್ನಾಯುಗಳು ಬಲಗೊಂಡು, ದೃಷ್ಟಿ ಉತ್ತಮಗೊಳ್ಳುತ್ತದೆ. 
- ಎರಡೂ ಅಂಗೈಗಳನ್ನು ಒಂದಕ್ಕೊಂದು ಉಜ್ಜಿ, ಬರುವ ಶಾಖವನ್ನು ಕಣ್ಣುಗಳ ಮೇಲಿಡಬೇಕು. ಕಣ್ಣುಗಳ ಆಯಾಸವನ್ನು ಇದು ಕಡಿಮೆ ಮಾಡಿ, ದೃಷ್ಟಿಯನ್ನು ಉತ್ತಮಗೊಳಿಸುತ್ತದೆ. 
- ಸದಾ ಕಂಪ್ಯೂಟರ್ ಮುಂದೆ ಕೂತು ಕೆಲಸ ಮಾಡುವವರಾದರೆ, ಆಗಾಗ ಕಣ್ಣುಗಳನ್ನು ಕೆಲವು ಸೆಕೆಂಡ್‌ಗಳ ಕಾಲ ನಿರಂತರವಾಗಿ ಮಿಟುಕಿಸುತ್ತಿರಬೇಕು. ಆಯಾಸ ತೊಲಗಿಸಲು ಇದು ನೆರವಾಗುತ್ತದೆ. ಕಣ್ಣು ನೋವನ್ನೂ ಇದು ನಿವಾರಿಸುತ್ತದೆ. 
- ಮೊಬೈಲ್, ಕಂಪ್ಯೂಟರ್...ಹೀಗೆ ಗ್ಯಾಜೆಟ್ ಬಳಕೆಯಿಂದ ಕಣ್ಣು ಹಾಳಾಗುವುದು ಬೇಗ. ವರ್ಷಕ್ಕೊಮ್ಮೆಯಾದರೂ ಕಣ್ಣನ್ನು ತಜ್ಞರ ಬಳಿ ಪರೀಕ್ಷಿಸಿಕೊಳ್ಳಬೇಕು.
- ಆಗಾಗ ಕಣ್ಣನ್ನು ತಣ್ಣೀರಿನಲ್ಲಿ ತೊಳೆದುಕೊಳ್ಳುತ್ತಿರಬೇಕು. 
- ಹುಬ್ಬಿಗೆ ಹರಳೆಣ್ಣೆಯಿಂದ ಮಸಾಜ್ ಮಾಡಿಕೊಂಡರೆ ಒತ್ತಡ ನಿವಾರಣೆಯಾಗುತ್ತದೆ. ಕಣ್ಣಿಗೂ ತಂಪು.
- ನೆತ್ತಿಗೆ ಹರಳೆಣ್ಣೆ ಹಾಕ್ಕೊಂಡು ತಲೆ ಸ್ನಾನ ಮಾಡಿದರೂ, ದೇಹವನ್ನು ತಂಪಾಗಿಡುವ ಜತೆಗೆ ಕಣ್ಣನ್ನೂ ತಂಪಾಗಿಡುತ್ತದೆ.
-ಸಮಯ ಸಿಕ್ಕಾಗಲೆಲ್ಲಾ ಕಣ್ಣಿನ ಗುಡ್ಡೆಯನ್ನು ಮೇಲಿಂದ, ಕೆಳಕ್ಕೆ, ಎಡದಿಂದ-ಬಲಕ್ಕೆ ಚಲಿಸುತ್ತಿರಬೇಕು.
- ಲೋಳೆಸರ, ಮತ್ತಿಸೊಪ್ಪು ಅಥವಾ ದಾಸವಾಳದ ಸೊಪ್ಪಿನ ರಸವನ್ನು ತಲೆಗೆ ಹಚ್ಚಿಕೊಂಡರೂ ಕಣ್ಣಿನ ಆರೋಗ್ಯಕ್ಕೆ ಒಳಿತು.
- ಸಾಧ್ಯವಾದಷ್ಟು ಮನೆಯಲ್ಲಿಯೇ ಮಾಡಿದ ಕಣ್ಣು ಕಪ್ಪನ್ನು ಹಚ್ಚಿ. ರಾಸಾಯನಿಕ ವಸ್ತುಗಳು ತುರಿಕೆಯಂಥ ಸಮಸ್ಯೆಯನ್ನು ತಂದೊಡ್ಡುವುದಲ್ಲದೇ, ಕಣ್ಣಿಗೆ ಆಯಾಸ ತರುತ್ತದೆ.

ಮನೆ ಮದ್ದಿಗೆ ಇಲ್ಲಿ ಕ್ಲಿಕ್ ಮಾಡಿ