ಕೋಲಾರ(ನ.11): ನಾನು ಯಾವ ಕಚೇರಿಯಿಂದಲೂ ಹಣ ಪಡೆಯುವುದಿಲ್ಲ. ಐಟಿ ಭಯವಿರುವುದ ರಿಂದ ಹಣ, ಆಸ್ತಿ ಸಂಪಾದಿಸಿ ಕೂಡಿಟ್ಟಿಲ್ಲ. ನನ್ನ ಮಾತಿಗೆ ಗೌರವ ಕೊಡುವ ಅನೇಕರಿದ್ದಾರೆ. ಅವರಿಂದಲೂ ಕೈಲಾದ ನೆರವು ಒದಗಿಸುತ್ತೇನೆ, ಕೊಟ್ಟ ಮಾತಿನಂತೆ ನಡೆದುಕೊಳ್ಳುವುದಾಗಿ ಶಾಸಕ ರಮೇಶ್ ಕುಮಾರ್ ಭರವಸೆ ನೀಡಿದ್ದಾರೆ.

ಜಿಲ್ಲಾ ನಂದವರಿಕ ಟ್ರಸ್ಟ್ ವತಿಯಿಂದ ನಗರದ ಗಲ್‌ಪೇಟೆಯಲ್ಲಿ ವೆಂಕಟಲಕ್ಷ್ಮಮ್ಮ ಮತ್ತು ಎಂ. ಸುಬ್ಬರಾವ್ ಸ್ಮರಣಾರ್ಥ ನಿರ್ಮಿಸಿರುವ ನಂದವರೀಕ ಭವನವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿ, ನಾನು ಕೂಡ ಬಡ ಕುಟುಂಬದಿಂದ ಬಂದವನು. ಹಿರಿಯರ ಪುಣ್ಯದಿಂದ ಈ ಸ್ಥಾನಕ್ಕೆ ಬಂದಿದ್ದೇನೆ. ನಂದವರಿಕ ಎನ್ನಲು ಗರ್ವ ಪಡುತ್ತೇನೆ ಎಂದಿದ್ದಾರೆ.

ಟ್ರಸ್ಟ್ ಯೋಜನೆಗೆ ನೆರವು:

ನಂದವರಿಕ ಟ್ರಸ್ಟ್‌ನಿಂದ ಕೈಗೊಳ್ಳಲು ಉದ್ದೇಶಿಸಿರುವ ಯೋಜನೆಗಳ ಕುರಿತು ಅಂದಾಜುಪಟ್ಟಿ ನೀಡಿದರೆ ಅವಗತ್ಯವಿರುವ ಎಲ್ಲ ರೀತಿಯ ನೆರವು ಕಲ್ಪಿಸುತ್ತೇನೆ. ಟ್ರಸ್ಟ್‌ನಿಂದ ನಡೆಸಲು ಉದ್ದೇಶಿಸಿರುವ ಯೋಜನೆಗಳಿಗೆ ನೆರವು ನೀಡಲು ಬದ್ಧ, ಚೈತನ್ಯ ಮತ್ತು ಮನಸ್ಸುಳ್ಳ ಎಂ.ಎಸ್. ನಾಗಭೂಷಣರಾವ್ ಭವನಕ್ಕೆ ನಿವೇಶನವನ್ನು ದಾನವಾಗಿ ನೀಡಿರುವುದು ಅವರ ಉದಾರ ಗುಣಕ್ಕೆ ಹಿಡಿದ ಕೈಗನ್ನಡಿ ಎಂದಿದ್ದಾರೆ.

ಆಲೂ, ಟೊಮೆಟೋಗೆ ಅಂಗಮಾರಿ ರೋಗ, ಬೆಳೆ ನಾಶ

ಟ್ರಸ್ಟ್‌ನ ಉಪಾಧ್ಯಕ್ಷ ಡಿ.ಎಸ್. ಶಂಕರನಾರಾಯಣ ಮಾತನಾಡಿ, ಹಲವು ವರ್ಷಗಳ ಹಿಂದೆಯೇ ದಾನವಾಗಿ ಪಡೆದ ನಿವೇಶನದಲ್ಲಿ ದಾನಿಗಳ ನೆರವಿನಿಂದ ಭವನ ನಿರ್ಮಿಸಲಾಗಿದೆ. ಇದಕ್ಕೆ ನೇರ ವಾಗಿ, ತೆರೆಮರೆಯಲ್ಲಿ ನಿಂತು ಸಹಾಯ ಮಾಡಿದವರು ಅನೇಕರಿದ್ದಾರೆ. ಕೊಟ್ಟ ಒಂದೊಂದು ರುಪಾಯಿ ಕೂಡ ಪೋಲು ಆಗದಂತೆ ಬಳಕೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಭವನ ನಿರ್ಮಾಣ ಕನಸು ನನಸು:

ಅಧ್ಯಕ್ಷತೆ ವಹಿಸಿ ಮಾತನಾಡಿದ ಟ್ರಸ್ಟ್‌ನ ಅಧ್ಯಕ್ಷ ಡಾ. ಎಂ.ವಿ.ಜಯರಾಂ, ಭವನ ನಿರ್ಮಾಣದ ಬಹುವರ್ಷಗಳ ಕನಸು ನನಸಾಗಿದೆ. ಮುಂದಿನ ದಿನಗಳಲ್ಲಿ ಸಮು ದಾಯದ ಅಭಿವದ್ಧಿಗೆ ಕೈಗೊಳ್ಳುವ ಕಾರ್ಯಗಳಿಗೆ ಸಹಕಾರ ನೀಡುವಂತೆ ಕೋರಿದರು. ನಿವೇಶನ ದಾನಿ ಎಂ.ಎಸ್. ನಾಗ ಭೂ ಷಣರಾವ್ ಸೇರಿದಂತೆ ಭವನ ನಿರ್ಮಾಣಕ್ಕೆ ನೆರವು ನೀಡಿದವರಿಗೆ ಕತ ಜ್ಞತೆ ಸಲ್ಲಿಸಲಾಯಿತು. ಬೆಂಗಳೂರು ನಂದವರಿಕ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ್,ಟ್ರಸ್ಟ್‌ನ ಸಂಸ್ಥಾಪಕ ಎನ್. ಕಿಟ್ಟಪ್ಪ, ಇತರರಿದ್ದರು.  

ಬೆಳೆಹಾನಿ ಪರಿಹಾರ​: ಆಧಾರ್‌ ಮೂಲಕ ಸಂದಾಯ ವ್ಯವಸ್ಥೆ...