Asianet Suvarna News Asianet Suvarna News

Chikkaballapura : ಹರಪನಹಳ್ಳಿ ಜಿಪಂ, ತಾಪಂ ಕ್ಷೇತ್ರ ಪುನರ್ ವಿಂಗಡನೆ

ಹರಪನಹಳ್ಳಿ ತಾಲೂಕಿನ ಜಿಪಂ ಹಾಗೂ ತಾಪಂಗಳ ಕ್ಷೇತ್ರಗಳ ಪುನರ್‌ ವಿಂಗಡಣೆ ಹಾಗೂ ಗಡಿ ನಿಗದಿ ಪಡಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.

  ZP And TP  constituencies Reclassification in Harpanahalli snr
Author
First Published Jan 4, 2023, 6:23 AM IST

  ಹರಪನಹಳ್ಳಿ :  ಹರಪನಹಳ್ಳಿ ತಾಲೂಕಿನ ಜಿಪಂ ಹಾಗೂ ತಾಪಂಗಳ ಕ್ಷೇತ್ರಗಳ ಪುನರ್‌ ವಿಂಗಡಣೆ ಹಾಗೂ ಗಡಿ ನಿಗದಿ ಪಡಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.

8 ಜಿಪಂ ಕ್ಷೇತ್ರಗಳು

ತಾಲೂಕಿನಲ್ಲಿ ಒಟ್ಟು ಎಂಟು ಜಿಪಂ ಕ್ಷೇತ್ರಗಳು ಇವೆ. ಚಿಗಟೇರಿ ಕ್ಷೇತ್ರ-ಚಿಗಟೇರಿ,ಮೈದೂರು, ಹಗರಿಗಜಾಪುರ,ಬೆಣ್ಣಿಹಳ್ಳಿ, ಮುತ್ತಿಗಿ, ನಿಲುವಂಜಿ, ಪೃಥ್ವೇಶ್ವರ, ಮತ್ತಿಹಳ್ಳಿ,ಆಲದಹಳ್ಳಿ,ಸಾಸ್ವಿಹಳ್ಳಿ, ಹಗರಿಗುಡಿಹಳ್ಳಿ,

ಅರಸಿಕೇರಿ ಕ್ಷೇತ್ರ-ತಿಮ್ಲಾಪುರ, ಅರಸಿಕೇರಿ,ಹೊಸಕೋಟೆ, ಬೂದಿಹಾಳ,ನಿಚ್ಚವನಹಳ್ಳಿ, ಹಿಕ್ಕಿಂಗೇರಿ, ಕೊಮಾರನಹಳ್ಳಿ, ಕಡಬಗೇರಿ, ಜೋಷಿಲಿಂಗಾಪುರ, ತೌಢೂರು, ಕ್ಯಾರಕಟ್ಟಿಒಳಗೊಂಡಿವೆ.

ಉಚ್ಚಂಗಿದುರ್ಗ ಕ್ಷೇತ್ರ -ಉಚ್ಚಂಗಿದುರ್ಗ, ಲಕ್ಷ್ಮಿಪುರ, ಸತ್ತೂರು, ಹಿರೇಮೇಗಳಗೇರಿ, ಶಿಂಗ್ರಿಹಳ್ಳಿ ಸೇರಿವೆ.

ಕಂಚಿಕೇರಿ ಕ್ಷೇತ್ರ-ಕಂಚಿಕೇರಿ, ಹಳ್ಳಿಕೇರಿ, ಅಣಜಿಗೇರಿ, ಮಾದಿಹಳ್ಳಿ, ರಾಮಘಟ್ಟ, ಚಟ್ನಿಹಳ್ಳಿ, ಪುಣಭಗಟ್ಟ, ಕಲ್ಲುಗುಡಿ ಗ್ರಾಮಗಳು ಒಳಗೊಂಡಿವೆ.

ತೆಲಿಗಿ ಕ್ಷೇತ್ರ-ತೆಲಿಗಿ, ಗುಂಡಗತ್ತಿ, ಕಂಬಟ್ರಹಳ್ಳಿ, ದುಗ್ಗಾವತ್ತಿ, ಕಡತಿ, ರಾಗಿಮಸಲವಾಡ, ಶಿರಗಾನಹಳ್ಳಿ, ಯಡಿಹಳ್ಳಿ, ಸೇವಾನಗರ ಸೇರಿವೆ.

ನೀಲಗುಂದ ಕ್ಷೇತ್ರ-ನೀಲಗುಂದ,ಅನಂತನಹಳ್ಳಿ, ಮೆಳ್ಳೆಕಟ್ಟೆ, ಮಾಚಿಹಳ್ಳಿ,ತೊಗರಿಕಟ್ಟೆ, ಬಾಪೂಜಿನಗರ, ನಾರಾಯಣಪುರ, ಮಾಡ್ಲಗೇರಿ, ಕನ್ನನಾಯಕನಹಳ್ಳಿ, ಹಾರಕನಾಳು, ಚೆನ್ನಹಳ್ಳಿ, ಈಶಾಪುರ, ಹುಲ್ಲಿಕಟ್ಟಿಒಳಗೊಂಡಿವೆ.

ಬಾಗಳಿ ಕ್ಷೇತ್ರ-ಬಾಗಳಿ,ಶೃಂಗಾರತೋಟ,ಕಾಯಕದಹಳ್ಳಿ, ಕೋಡಿಹಳ್ಳಿ,ಅಡವಿಹಳ್ಳಿ, ನಿಚ್ಚಾಪುರ, ನಂದಿಬೇವೂರು, ಕೊಂಗನಹೊಸೂರು, ಕಣವಿಹಳ್ಳಿ, ಕೂಲಹಳ್ಳಿ, ಮಾದಾಪುರ ಗ್ರಾಮಗಳು ಸೇರಿವೆ.

ಹಲುವಾಗಲು ಕ್ಷೇತ್ರ-ಹಲುವಾಗಲು, ಕುಂಚೂರು, ಅರಸನಾಳು,ಕೆ.ಕಲ್ಲಹಳ್ಳಿ, ಇಟ್ಟಿಗುಡಿ, ನಿಟ್ಟೂರು, ನಿಟ್ಟೂರು ಬಸ್ಸಾಪುರ, ಯರಬಾಳು, ತಾವರಗೊಂದಿ, ಚಿರಸ್ಥಹಳ್ಳಿ, ಅಲಗಿಲವಾಡ, ಶಿವಪುರ ಗ್ರಾಮಗಳು ಸೇರಿವೆ.

22 ತಾಲೂಕು ಪಂಚಾಯ್ತಿ ಕ್ಷೇತ್ರಗಳು -

ಹರಪನಹಳ್ಳಿ ತಾಲೂಕಿನಲ್ಲಿ ಒಟ್ಟು 22 ತಾಪಂ ಕ್ಷೇತ್ರಗಳನ್ನು ನಿಗದಿ ಮಾಡಲಾಗಿದೆ. ಚಿಗಟೇರಿ,ಬೆಣ್ಣಿಹಳ್ಳಿ, ಮತ್ತಿಹಳ್ಳಿ, ಅರಸಿಕೇರಿ,ನಿಚ್ಚವನಹಳ್ಳಿ,ತೌಢೂರು, ಉಚ್ಚಂಗಿದುರ್ಗ, ಹಿರೇಮೇಗಳಗೇರಿ, ಕಂಚಿಕೇರಿ, ಅಣಜಿಗೇರಿ, ಪುಣಬಘಟ್ಟ, ತೆಲಿಗಿ, ದುಗ್ಗಾವತ್ತಿ, ರಾಗಿಮಸಲವಾಡ, ನೀಲಗುಂದ, ತೊಗರಿಕಟ್ಟೆ, ಹಾರಕನಾಳು, ಬಾಗಳಿ ನಂದಿಬೇವೂರು, ಹಲುವಾಗಲು,ಕುಂಚೂರು, ನಿಟ್ಟೂರು ಈ ರೀತಿ ತಾಲೂಕು ಪಂಚಾಯ್ತಿ ಕ್ಷೇತ್ರಗಳನ್ನು ನಿಗದಿ ಮಾಡಲಾಗಿದೆ.

ತಾಪಂ ಹಾಗೂ ಜಿಪಂಗಳ ಕ್ಷೇತ್ರಗಳ ನಿಗದಿ ಮಾಡಿ ಪ್ರಕಟಣೆಯ ದಿನಾಂಕದಿಂದ 15 ದಿನದೊಳಗೆ ಅಂದರೆ ಜ. 16 ರ ಸೋಮವಾರ ಸಂಜೆ 5ಗಂಟೆಯೊಳಗೆ ಆಕ್ಷೇಪಣೆಗಳನ್ನು ಆನ್‌ಲೈನ್‌ ಮೂಲಕ ಹಾಗೂ ಖುದ್ದಾಗಿ ಅಥವಾ ಅಂಚೆ ಮೂಲಕ ಕರ್ನಾಟಕ ಪಂಚಾಯ್ತಿ ರಾಜ್‌ ಸೀಮಾ ನಿರ್ಣಯ ಆಯೋಗ, 3ನೇ ಗೇಟ್‌, 2ನೇ ಮಹಡಿ ಕೊಠಡಿ ಸಂಖ್ಯೆ, 222ಎ, ಬಹುಮಹಡಿ ಕಟ್ಟಡ, ಅಂಬೇಡ್ಕರ ಬೀದಿ, ಬೆಂಗಳೂರು -560001 ಇಲ್ಲಿಗೆ ಸಲ್ಲಿಸಲು ಉಪವಿಭಾಗಾಧಿಕಾರಿ ಹಾಗೂ ಪ್ರಭಾರಿ ಅಪರ ಜಿಲ್ಲಾಧಿಕಾರಿ ಟಿ.ವಿ.ಪ್ರಕಾಶ ಕೋರಿದ್ದಾರೆ.

ಜನಪರ ಯೋಜನೆಗಳನ್ನು ಮನೆಮನೆಗೆ ತಲುಪಿಸಿ

ಬೀದರ್‌(ಜ.03):  ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನಪರ ಅಭಿವೃದ್ಧಿ ಯೋಜನೆಗಳನ್ನು ಮನೆ ಮನೆಗೆ ತಲುಪಿಸಿ ಜಿಲ್ಲೆಯ 1504 ಬೂತ್‌ಗಳನ್ನು ಚುನಾವಣೆಗೆ ಸಜ್ಜಾಗುವಂತೆ ಕೇಂದ್ರ ಸಚಿವರಾದ ಭಗವಂತ ಖೂಬಾ ಕರೆ ನೀಡಿದರು. ಅವರು ಸೋಮವಾರದಂದು ತಾಲೂಕಿನ ಗಾದಗಿ ಗ್ರಾಮದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್‌ ಜಿಲ್ಲಾ ಬೂತ್‌ ವಿಜಯ ಅಭಿಯಾನ ಉದ್ಘಾಟಿಸಿ ಮಾತನಾಡಿ, ಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಬೂತ್‌ಗಳು ಶಕ್ತಿಶಾಲಿಯನ್ನಾಗಿ ಮಾಡಲು ಸಲಹೆ ನೀಡಿದ ಅವರು, ಅಭಿಯಾನಕ್ಕೆ ಸಂಬಂಧಿಸಿದ ಸಂಘಟನಾತ್ಮಕ ಕಾರ್ಯಗಳನ್ನು ಚಾಚೂ ತಪ್ಪದೆ ಮುಗಿಸಲು ಸೂಚಿಸಿದರು. ಪಕ್ಷದ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘಟನಾತ್ಮಕ ಕಾರ್ಯಕ್ರಮಗಳಿಗೆ ಒತ್ತು ಕೊಡಬೇಕೆಂದರು.

ವಿಧಾನಪರಿಷತ್‌ ಸದಸ್ಯರಾದ ರಘುನಾಥರಾವ ಮಲ್ಕಾಪೂರೆ ಮಾತನಾಡಿ, ರಾಜ್ಯ ಸರ್ಕಾರ ಎಸ್‌ಸಿ ಹಾಗೂ ಎಸ್‌ಟಿ ಮೀಸಲಾತಿ ಹೆಚ್ಚಿಸಿ ದುರ್ಬಲ ಸಮಾಜಕ್ಕೆ ಹೊಸ ಆಯಾಮ ನೀಡಿದ್ದು, ಇದು ಈ ಬಾರಿ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗಲಿದೆ ಎಂದರು.

ಬೀದರ್‌: 4 ನೀರಾವರಿ ಯೋಜನೆಗಳಿಗೆ ಸಚಿವ ಸಂಪುಟ ಅಸ್ತು, ಕೇಂದ್ರ ಸಚಿವ ಖೂಬಾ

ವಿಭಾಗೀಯ ಪ್ರಮುಖರಾದ ಈಶ್ವರಸಿಂಗ ಠಾಕೂರ ಮಾತನಾಡಿ, ಬಿಜೆಪಿ ನುಡಿದಂತೆ ನಡೆಯುವ ಪಕ್ಷ. ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷದ ಕಾರ್ಯಕರ್ತರು ನಾವು, ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸೋಣ ಎಂದು ತಿಳಿಸಿದರು.

ಜಿಲ್ಲಾ ಬೂತ್‌ ವಿಜಯ ಅಭಿಯಾನದ ಜಿಲ್ಲಾ ಸಂಚಾಲಕ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಎಸ್‌. ಪಾಟೀಲ್‌ ಗಾದಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಅಭಿಯಾನಕ್ಕೆ ಜ. 2ರಂದು ಜಿಲ್ಲೆಯ ಎಲ್ಲಾ ಮಂಡಲಗಳಲ್ಲಿ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

ಮೇಹಕರ್‌ ಏತ ನೀರಾವರಿ ಯೋಜನೆ: ಮೂರು ವರ್ಷಗಳ ಹೋರಾಟಕ್ಕೆ ಸಂದ ಜಯ, ಖಂಡ್ರೆ

ಸಾವಿರಾರು ಕಾರ್ಯಕರ್ತರು, ಗಣ್ಯರನ್ನು ಮಹಾದ್ವಾರದಿಂದ ಮಂಟಪದವರೆಗೆ ಡೊಳ್ಳು, ಪಟಾಕಿ ಸಿಡಿಸುತ್ತಾ ಮೆರವಣಿಗೆಯ ಮೂಲಕ ವೇದಿಕೆಯತ್ತ ಮುಖಂಡರನ್ನು ಬರಮಾಡಿಕೊಳ್ಳಲಾಯಿತು. ನಂತರ ಬೂತ್‌ ಅಧ್ಯಕ್ಷರಾದ ಸಿದ್ದು ಹೊನ್ನಾರ ಮನೆ ಮೇಲೆ ಪಕ್ಷದ ಧ್ವಜ ಹಾರಿಸಿದರು.

Follow Us:
Download App:
  • android
  • ios