ಹುಬ್ಬಳ್ಳಿ(ಮಾ.19): ಹೃದಯದಲ್ಲಿ ಉಂಟಾಗಿರುವ ರಂಧ್ರದಿಂದ ಗಂಭೀರ ಸ್ಥಿತಿಯಲ್ಲಿರುವ ಒಂದು ತಿಂಗಳ ಮಗುವನ್ನು ಝಿರೋ ಟ್ರಾಫಿಕ್ ಮೂಲಕ ಬೆಂಗಳೂರಿನ ನಾರಾಯಣ ಹೃದಯಾಲಕ್ಕೆ ಬುಧವಾರ ತಡರಾತ್ರಿ ಕರೆದೊಯ್ಯಲಾಗಿದೆ. 

ಹುಬ್ಬಳ್ಳಿ ಉತ್ತರ ಹಾಗೂ ದಕ್ಷಿಣ ಸಂಚಾರಿ ಪೊಲೀಸರು ಮಗುವಿನ ಸುಗಮ ಸಂಚಾರದ ವ್ಯವಸ್ಥೆ ಹೊಣೆ ಹೊತ್ತಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನಗರದ ಸ್ಪರ್ಶ ಹಾಸ್ಪಿಟಲ್ ಮೂಲಕ ಸುಸಜ್ಜಿತ ಎಲ್ಲ ವ್ಯವಸ್ಥೆ ಇರುವ ಆ್ಯಂಬುಲೆನ್ಸ್‌ನಲ್ಲಿ ಬೆಂಗಳೂರಿಗೆ ಮಗುವನ್ನು ಕರೆದುಕೊಂಡು ಹೋಗುತ್ತಿದ್ದೇವೆ ಎಂದು ಉತ್ತರ ಸಂಚಾರಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ರತನಕುಮಾರ ಜೀರಿಗ್ಯಾಳ ತಿಳಿಸಿದ್ದಾರೆ.