ಕೊರಟಗೆರೆ ಶಾಸಕರಿಂದ ಅಭಿವೃದ್ಧಿ ಶೂನ್ಯ
ಪರಮೇಶ್ವರ್ ಡಿಸಿಎಂ ಆಗಿದ್ದಾಗ ಬೆಂಗಳೂರು ನಗರಕ್ಕೆ ಮಾತ್ರ ಸೀಮಿತವಾದ್ರು. ಕೊರಟಗೆರೆ ಕ್ಷೇತ್ರದ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷದ ಶಾಸಕರಿಗೆ ಗೇಟ್ ಪಾಸ್ ನೀಡಿ ಕಾಂಗ್ರೆಸ್ ಮುಕ್ತ ಕೊರಟಗೆರೆ ಮಾಡಿ, ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿ ಪಕ್ಷವನ್ನ ಬೆಂಬಲಿಸಿ ಎಂದು ಬಿಜೆಪಿ ಪಕ್ಷದ ಆಭ್ಯರ್ಥಿ ಬಿ.ಎಚ್. ಅನಿಲ್‌ಕುಮಾರ್ ತಿಳಿಸಿದರು.
ಕೊರಟಗೆರೆ : ಪರಮೇಶ್ವರ್ ಡಿಸಿಎಂ ಆಗಿದ್ದಾಗ ಬೆಂಗಳೂರು ನಗರಕ್ಕೆ ಮಾತ್ರ ಸೀಮಿತವಾದ್ರು. ಕೊರಟಗೆರೆ ಕ್ಷೇತ್ರದ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷದ ಶಾಸಕರಿಗೆ ಗೇಟ್ ಪಾಸ್ ನೀಡಿ ಕಾಂಗ್ರೆಸ್ ಮುಕ್ತ ಕೊರಟಗೆರೆ ಮಾಡಿ, ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿ ಪಕ್ಷವನ್ನ ಬೆಂಬಲಿಸಿ ಎಂದು ಬಿಜೆಪಿ ಪಕ್ಷದ ಆಭ್ಯರ್ಥಿ ಬಿ.ಎಚ್. ಅನಿಲ್‌ಕುಮಾರ್ ತಿಳಿಸಿದರು.
ಕೊರಟಗೆರೆ ವಿಧಾನಸಭಾ ಕ್ಷೇತ್ರದ ಪುರವಾರ ಹೋಬಳಿಯ ಗೊಂದಿಹಳ್ಳಿಯಿಂದ ಜಿ.ನಾಗೇನಹಳ್ಳಿಯವರೆಗೆ ಹಮ್ಮಿಕೊಳ್ಳಲಾಗಿದ್ದ ಬೃಹತ್ ಬೈಕ್ ರಾರಯಲಿಯನ್ನ ಉದ್ದೇಶಿಸಿ ಮಾತನಾಡಿದ ಅವರು, ಒಂದು ಬಾರಿ ಗೆದ್ದ ಜೆಡಿಎಸ್ ಶಾಸಕರಿಂದ ಕೊರಟಗೆರೆ ಕ್ಷೇತ್ರ ಯಾವುದೇ ಅಭಿವೃದ್ಧಿ ಕಂಡಿಲ್ಲ. ಹಾಗೆ ಎರಡು ಬಾರಿ ಗೆದ್ದ ಕಾಂಗ್ರೆಸ್ ಶಾಸಕರನ್ನ ಆಯ್ಕೆ ಮಾಡಿದ್ದಾರೆ, ಅದರೆ ಅವರನ್ನ ದುರ್ಬಿನ್ ಹಾಕಿಕೊಂಡು ಹುಡುಕಿದರೂ ಕೈಗೆ ಸಿಗೋದಿಲ್ಲ. ಅಂತಹ ಶಾಸಕರು ಬೇಕಾ ನೀವೆ ನಿರ್ಧಾರ ಮಾಡಿ. ಅದಕ್ಕಾಗಿ ಈ ಭಾರಿ ಬಿಜೆಪಿ ಪಕ್ಷವನ್ನ ಬೆಂಬಲಿಸಿ ನಿಮ್ಮ ಮನೆಯ ಮಗನಂತೆ ನಿಮ್ಮ ಸೇವೆಯನ್ನ ಮಾಡಲು ಅನುವು ಮಾಡಿಕೊಡಿ, ಕೊರಟಗೆರೆ ಕ್ಷೇತ್ರವನ್ನ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ ಎಂದು ತಿಳಿಸಿದರು.
ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕರ ಆಡಳಿತ ವಿರೋಧಿ ಅಲೆ ಎದ್ದಿದ್ದು, ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸ್ವಯಂಪ್ರೇರಿತವಾಗಿ ಸುಮಾರು 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ನಮ್ಮ ಪಕ್ಷದ ಸಿದ್ದಾಂತವನ್ನ ಒಪ್ಪಿ ನನಗೆ ಬೆಂಬಲ ನೀಡುತ್ತಿದ್ದು, ಈ ಬಾರಿ ಕೊರಟಗೆರೆ ಮುಕ್ತ ಕಾಂಗ್ರೆಸ್ ಮಾಡಲು ನಮ್ಮ ಬಿಜೆಪಿ ಪಕ್ಷದ ಸೇನಾನಿಗಳು ತಯಾರಾಗಿದ್ದಾರೆ ಎಂದರು.
ತೆಂಗುನಾರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಜಿ,ವೆಂಕಟಚಲಯ್ಯ ಮಾತನಾಡಿ, ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಬಿಜೆಪಿ ಸರ್ಕಾರ ರಚನೆ ಮಾಡಲು ಕೇಂದ್ರ ಮತ್ತು ರಾಜ್ಯದ ವರಿಷ್ಠರು ಸಂಕಲ್ಪ ಮಾಡಿದ್ದು, ಅದ್ದರಿಂದ ಕೊರಟಗೆರೆಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಅನಿಲ್‌ಕುಮಾರ್ ಅವರನ್ನ ಬಿಜೆಪಿ ಪಕ್ಷದ ಆಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದ್ದು, ಅವರಿಗೆ ನಾವೆಲ್ಲರೂ ಬೆಂಬಲ ನೀಡುವ ಮೂಲಕ ಈ ಬಾರಿ ಕೊರಟಗೆರೆಯಲ್ಲಿ ಬಿಜೆಪಿ ಬಾವುಟವನ್ನ ಹಾರಿಸಿ ಕ್ಷೇತ್ರದ ಅಭಿವೃದ್ಧಿಗೆ ಪಣತೊಡೋಣ ಎಂದರು.
ಕೊರಟಗೆರೆ ವಿಧಾನಸಭಾ ಕ್ಷೇತ್ರದ ಪುರವಾರ ಹೋಬಳಿಯ ಪುರವಾರ, ಗೊಂದಿಹಳ್ಳಿ, ಬ್ಯಾಲ್ಯ, ಕೋಡಗದಾಲ, ಹೊಳವನಹಳ್ಳಿ ಹೋಬಳಿಯ ಬೈರೇನಹಳ್ಳಿ, ಬೈಚಾಪುರ, ಅಕ್ಕಿರಾಂಪುರ, ಹೊಳವನಹಳ್ಳಿ, ಕೋಡ್ಲಹಳ್ಳಿ, ಲಿಂಗಾಪುರ, ಮಾವತ್ತೂರು ಕ್ರಾಸ್, ಕೋಳಾಲ ಹೋಬಳಿಯ ಕೋಳಾಲ, ಪಾತಗಾನಹಳ್ಳಿ, ಚಿನ್ನಹಳ್ಳಿ, ವಜ್ಜನಕುರಿಕೆ, ಎಲೆರಾಂಪುರ, ತಣ್ಣೇನಹಳ್ಳಿ ಹಾಗೂ ಜಿ.ನಾಗೇನಹಳ್ಳಿವರೆಗೂ ಭರ್ಜರಿ ಬೈಕ್‌ರಾರಯಲಿ ಮೂಲಕ ಚುನಾವಣಾ ಪ್ರಚಾರ ಮಾಡಿದರು.
ಕೋಳಾಲ ಜಿಪಂ ಮಾಜಿ ಸದಸ್ಯ ಪಿ.ಎನ್.ಕೃಷ್ಣಮೂರ್ತಿ, ಜಿಲ್ಲಾ ರೈತಮೋರ್ಚಾ ಅಧ್ಯಕ್ಷ ವಿಶ್ವನಾಥ್ ಅಪ್ಪಾಜಪ್ಪ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ್‌ಸ್ವಾಮಿ, ಮುಖಂಡರಾದ ಮುಕ್ಕಣ್ಣಯ್ಯ, ಚಂದ್ರಪ್ಪ, ಕಾಂತಣ್ಣ, ನಾಗರಾಜು, ಮಂಜುನಾಥ್, ರಾಜಣ್ಣ, ಶಿವಣ್ಣ, ಸೇರಿದಂತೆ ಇತರರು ಇದ್ದರು.
ಕಾಂಗ್ರೆಸ್ ಮುಖಂಡರು ಬಿಜೆಪಿಗೆ
ಎಲೆರಾಂಪುರ, ವಜ್ಜನಕುರಿಕೆ ಮತ್ತು ನೀಲಗೊಂಡನಹಳ್ಳಿ ಗ್ರಾಪಂ 25ಕ್ಕೂ ಅಧಿಕ ಗ್ರಾಮಗಳ 250ಕ್ಕೂ ಅಧಿಕ ಮುಖಂಡರು ಕಾಂಗ್ರೆಸ್ ಪಕ್ಷವನ್ನು ತೊರೆದು ಕೋಳಾಲ ಮಾಜಿ ಜಿಪಂ ಸದಸ್ಯ ಪಿ.ಎನ್.ಕೃಷ್ಣಮೂರ್ತಿ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ನಂತರ ಕೊರಟಗೆರೆ ಪಟ್ಟಣದ ಪಾಂಚಜನ್ಯ ಕಚೇರಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಪವನಕುಮಾರ್ ನೇತೃತ್ವದಲ್ಲಿ 150ಕ್ಕೂ ಅಧಿಕ ಯುವಕರು ಕಾಂಗ್ರೆಸ್ ಮತ್ತು ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿ ಅನಿಲ್‌ಕುಮಾರ್‌ಗೆ ಬೆಂಬಲ ಸೂಚಿಸಿದರು.